ಐಸ್ಲ್ಯಾಂಡ್ನಲ್ಲಿ ನಿರಂತರ ಭೂಕಂಪದಿಂದ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಹಿನ್ನೆಲೆ ಜ್ವಾಲಮುಖಿಯಿಂದ ಲಾವಾರಸ ಮತ್ತು ರಾಸಾಯನಿಕ ಅನಿಲಗಳು ಹೊರಹೊಮ್ಮುತ್ತಿವೆ. ಹೀಗಾಗಿ ಅದರ ಬಳಿ ಸುಳಿಯದಂತೆ ಪ್ರವಾಸಿಗರು ಮತ್ತು ಇತರೆ ವೀಕ್ಷಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಐಸ್ಲ್ಯಾಂಡ್ನ ನೈರುತ್ಯ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಸಾವಿರಾರು ಭೂಕಂಪಗಳು ಸಂಭವಿಸಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 11 ತಿಂಗಳ ಬಳಿಕ ಇದೀಗ ಮತ್ತೆ ಇಲ್ಲಿ ಜ್ವಾಲಮುಖಿ ಸ್ಫೋಟ ಸಂಭವಿಸಿದೆ. ಈ ಸ್ಫೋಟವೂ ನೈರುತ್ಯದ ರಾಜಧಾನಿ ರೆಕ್ಜವಿಕ್ನಿಂದ 30 ಕಿ.ಮೀ ದೂರದ ಲಿಟ್ಲಿ ಹೃತರ್ ಶಿಖರದ ಕಣಿವೆಯಲ್ಲಿ ನಡೆದಿದೆ.
ಈ ಪ್ರದೇಶವೂ ಫಾಗ್ರಾಡಲ್ಸ್ಫ್ಜಾಲ್ ಜ್ವಾಲಮುಖಿಯಿಂದ ಎಂಬ ಹೆಸರಿನಿಂದ ಪರಿಚಿತಾಗಿದೆ. 2021 ಮತ್ತು 2022ರಲ್ಲಿ ಇಲ್ಲಿ ಜ್ವಾಲಮುಖಿ ಸ್ಫೋಟಗೊಂಡಿತು. ಇದು ಸಮೀಪದ ಕೆಫ್ಲಾವಿಕ್ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ಹಿನ್ನೆಲೆ ಇದು ವಿಮಾನಗಳಿಗೂ ಹಾನಿ ಮಾಡಿತು. ಈ ವಿಮಾನ ನಿಲ್ದಾಣವನ್ನು ಮಂಗಳವಾರ ತೆರೆಯಲಾಗಿದೆ. ಈ ಬಾರಿ ಸಂಭವಿಸಿದ ಈ ಜ್ವಾಲಮುಖಿ ಸ್ಫೋಟವೂ ಈ ಹಿಂದೆ ನಡೆದ ಎರಡು ಸ್ಫೋಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ ನಡೆದಿದೆ ಎಂದು ಐಸ್ಲ್ಯಾಂಡಿನ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜ್ವಾಲಮುಖಿಯಿಂದ ಕಿತ್ತಳೆ ಬಣ್ಣದ ಲಾವ ಹೊರ ಬರುತ್ತಿದ್ದು, ಮೋಡಗಳನ್ನು ದಾಟಿ 900 ಮೀಟರ್ ಎತ್ತರದವರೆಗೆ ದಟ್ಟ ಹೊಗೆ ಆಡುತ್ತಿರುವ ದೃಶ್ಯಗಳು ಏರಿಯಲ್ ಫುಟೇಜ್ನಲ್ಲಿ ಕಂಡು ಬಂದಿವೆ.
ಜ್ವಾಲಮುಖಿಯಿಂದ ಹೊರ ಬರುತ್ತಿರುವ ಹೊಗೆಯಿಂದ ಸುತ್ತಮುತ್ತಲ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚುತ್ತಿದ್ದು, ಇದು ಅಪಾಯಕಾರಿಯಾಗಿದೆ. ಪ್ರವಾಸಿಗರು ಈ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಅದರ ಪಕ್ಕ ಸುಳಿಯದೇ ಇರುವುದು ಉತ್ತಮ ಎಂಬ ಸಲಹೆಯನ್ನು ಹವಾಮಾನ ಇಲಾಖೆ ನೀಡಿದೆ. ಮಂಗಳವಾರ ಜ್ವಾಲಮುಖಿಯ ಬಿರುಕು ಮತ್ತು ಸ್ಫೋಟದ ಪರಿಮಾಣವು ಕಡಿಮೆಯಾಗಿದೆ.