ವಾಷಿಂಗ್ಟನ್( ಅಮೆರಿಕ):ಭಾರತೀಯ- ಅಮೆರಿಕನ್ ಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ 2024ರ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇನ್ನು ತಮ್ಮ ಅಧ್ಯಕ್ಷೀಯ ಚುನಾವಣೆ ಕುರಿತು ಮಾತನಾಡಿರುವ ಅವರು, ಇದು ರಾಜಕೀಯ ಪ್ರಚಾರ ಅಲ್ಲ. ಇದು ಅಮೆರಿಕದ ಮುಂದಿನ ಪೀಳಿಗೆಯ ಹೊಸ ಕನಸನ್ನು ಸೃಷ್ಟಿಸುವ ಸಾಂಸ್ಕೃತಿಕ ಚಳವಳಿ ಎಂದಿದ್ದಾರೆ
ಈ ಕುರಿತು ಚಿಕ್ಕ ವಿಡಿಯೋವನ್ನು ಮಂಗಳವಾರ ಬಿಡುಗಡೆ ಮಾಡಿರುವ 37 ವರ್ಷದ ರಂಗಸ್ವಾಮಿ, ನಮ್ಮ ವೈವಿದ್ಯತೆಯನ್ನು ನಾವು ಆಚರಿಸಿದ್ದೇವೆ. ಅಮೆರಿಕವನ್ನು ಮೊದಲ ಸ್ಥಾನದಲ್ಲಿ ಇರಿಸಬೇಕು ಎಂದರೆ, ಮೊದಲು ಅಮೆರಿಕ ಎಂದರೆ ಏನು ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ. 250 ವರ್ಷದ ಹಿಂದೆ ವಿಭಜಿತಗೊಂಡು, ಆದರ್ಶಗಳಿಗೆ ಒಂದುಗೂಡಿದ್ದ ಅಮೆರಿಕನ್ನರು ಎಲ್ಲ ಮಾರ್ಗಗಳನ್ನು ಮರೆತಿದ್ದೇವೆ. ಆದರೆ, ಈ ಆದರ್ಶಗಳು ಇನ್ನು ಇದೇ ಎಂಬುದನ್ನು ನಾನು ನಂಬಿದ್ದು, ಅಮೆರಿಕನ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು.
ರಾಷ್ಟ್ರೀಯ ಗುರುತಿನ ಬಿಕ್ಕಟ್ಟಿನ ಮಧ್ಯದಲ್ಲಿ ನಾವಿದ್ದೇವೆ. ನಂಬಿಕೆ, ರಾಷ್ಟ್ರೀಯವಾದ ಮತ್ತು ಕುಟುಂಬಗಳು ಕಣ್ಮರೆಯಾಗಿದೆ. ಜಾತ್ಯತೀಯ ಧರ್ಮ ನಂತರ ವೊಕೊಯಿಸಮ್ ನಿಂದ ಕ್ಲೈಮೆಟಿಸಮ್ವರೆಗೆ ನಮ್ಮ ಆಳವಾದ ಅವಶ್ಯಕತೆ ಅರ್ಥವನ್ನು ತೃಪ್ತಿಗೊಳಿಸಬೇಕಿದೆ. ಅಮೆರಿಕನ್ ಎಂದರೆ ಅರ್ಥ ಏನು ಎಂಬುದನ್ನು ಇನ್ನೂ ಹೇಳಲು ಸಾಧ್ಯವಿಲ್ಲ. ಹಲವರಿಂದ ಒಂದು, ಇದು ಅಮೆರಿಕನ್ ಕ್ರಾಂತಿಯ ಗೆಲುವಿನ ಕಾರಣವಾಗಿದೆ. ನಾಗರಿಕ ಯುದ್ಧದ ಬಳಿಕ ನಾವು ಒಗ್ಗೂಡಿದ್ದೇವೆ. ನಾವು ಎರಡು ಜಾಗತಿಕ ಯುದ್ಧ ಮತ್ತು ಶೀತಲ ಸಮರವನ್ನು ಗೆದ್ದಿದ್ದೇವೆ. ಇದೇ ಕನಸು ಜಗತ್ತಿಗೆ ಇನ್ನೂ ಭರವಸೆಯನ್ನು ನೀಡುತ್ತಿದೆ ಎಂದು ರಾಮಸ್ವಾಮಿ ಪ್ರತಿಪಾದಿಸಿದ್ದಾರೆ. ವಿವೇಕ್ ರಾಮಸ್ವಾಮಿ ಸ್ಟೈವ್ ಅಸೆಟ್ ಮ್ಯಾನೇಜ್ಮೆಂಟ್ನ ಸಹ ಸಂಸ್ಥಾಪಕರಾಗಿದ್ದು, ಪ್ರಸ್ತುತ ಕಾರ್ಯ ನಿರ್ವಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.