ಬೋಸ್ಟನ್ : ಕಂಪನಿಯ ಸಹ ಸಂಸ್ಥಾಪಕ ಸ್ಟೀವ್ ವೋಜ್ನಿಯಾಕ್ ಸಹಿ ಮಾಡಿದ ವಿಂಟೇಜ್ ಆ್ಯಪಲ್ ಕಂಪ್ಯೂಟರ್ ಅನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಹಳೆಯದಾದ ಈ ಕಂಪ್ಯೂಟರ್ ಅನ್ನು ಸಂಪೂರ್ಣ ಕಾರ್ಯಾಚರಣೆಯ ಸ್ಥಿತಿಗೆ ಮರುಸ್ಥಾಪಿಸಲಾಗಿದ್ದು, ಅಂತರ್ನಿರ್ಮಿತ ಕೀಬೋರ್ಡ್‌ನೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಆ್ಯಪಲ್ ಸಂಸ್ಥೆ ಹೇಳಿದೆ.
ಮೂಲತಃ ಸುಮಾರು $666 ಕ್ಕೆ ಮಾರಾಟವಾದ ಕಂಪ್ಯೂಟರ್, ಆಗಸ್ಟ್ 24ರ ವರೆಗೆ ನಡೆಯುವ ಹರಾಜಿನಲ್ಲಿ ಸುಮಾರು $200,000 ಗೆ ಮಾರಾಟವಾಗುವ ನಿರೀಕ್ಷೆಯಿದೆ. ಅಂದರೆ Apple-1 ಮಾದರಿಯು ಕಳೆದ ವರ್ಷ ಸುಮಾರು $700,000 ಗೆ ಮಾರಾಟವಾಗಿತ್ತು. 1976 ಮತ್ತು 1977 ರಲ್ಲಿ ಕ್ಯಾಲಿಫೋರ್ನಿಯಾದ ಲಾಸ್ ಆಲ್ಟೋಸ್‌ನಲ್ಲಿರುವ ಸ್ಟೀವ್ ಜಾಬ್ಸ್ ಗ್ಯಾರೇಜ್‌ನಲ್ಲಿ ಸುಮಾರು 200 ಕಂಪ್ಯೂಟರ್ ತಯಾರಿಸಲಾಯಿತು ಮತ್ತು ಅವುಗಳಲ್ಲಿ ಸುಮಾರು 175 ಮಾರಾಟವಾಗಿವೆ ಎಂದು RR ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಬಾಬಿ ಲಿವಿಂಗ್‌ಸ್ಟನ್ ಹೇಳಿದ್ದಾರೆ.
1977 ರಲ್ಲಿ Apple-2 ಅನ್ನು ಪರಿಚಯಿಸಲಾಯಿತು, ಇದು ವೈಯಕ್ತಿಕ ಕಂಪ್ಯೂಟಿಂಗ್ ಉದ್ಯಮವನ್ನು ಕ್ರಾಂತಿಗೊಳಿಸಿತು. 2017 ರಲ್ಲಿ ಬ್ರ್ಯಾಂಟ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಮಾರಂಭದಲ್ಲಿ ವೋಜ್ನಿಯಾಕ್ ಅವರು ಆಪಲ್-1 ಹರಾಜಿಗೆ ಸಹಿ ಮಾಡಿದ್ದಾರೆ.1980 ರ ದಶಕದುದ್ದಕ್ಕೂ Apple-1 ಮಾದರಿ ಬಳಸಲಾಯಿತು.
ಇದನ್ನೂ ಓದಿ :21.5 ಇಂಚಿನ ಐಮ್ಯಾಕ್ ಮಾಡೆಲ್ಗಳ ಸ್ಥಗಿತಕ್ಕೆ ಆ್ಯಪಲ್ ನಿರ್ಧಾರ