ವಾಷಿಂಗ್ಟನ್(ಅಮೆರಿಕ): ಅಮೆರಿಕ ಸುಪ್ರೀಂಕೋರ್ಟ್ ಶುಕ್ರವಾರ ವ್ಯಾಪಕವಾಗಿ ಬಳಸಲಾಗುವ ಗರ್ಭಪಾತ ಮಾತ್ರೆಗಳ ನಿಷೇಧಕ್ಕೆ ತಾತ್ಕಾಲಿಕ ತಡೆ ನೀಡಿದೆ. ನ್ಯಾಯಾಲಯವು ತೀರ್ಪಿನಲ್ಲಿ 'ಮೈಫೆಪ್ರಿಸ್ಟೋನ್' ಮೇಲಿನ ಕೆಳ ನ್ಯಾಯಾಲಯದ ನಿರ್ಬಂಧಗಳಿಗೆ "ಆಡಳಿತಾತ್ಮಕ ತಡೆ" ನೀಡಿತು. ಗರ್ಭಾವಸ್ಥೆಯ ಮೊದಲ 10 ವಾರಗಳವರೆಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಳಸಬಹುದಾದ ಎರಡು - ಔಷಧದಗಳಲ್ಲಿ ಮೈಫೆಪ್ರಿಸ್ಟೋನ್ ಒಂದು. ಇದು ದೀರ್ಘವಾದ ಸುರಕ್ಷತಾ ದಾಖಲೆ ಹೊಂದಿದೆ ಮತ್ತು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್(FDA) ಅಂದಾಜಿನ ಪ್ರಕಾರ 5.6 ಮಿಲಿಯನ್ ಅಮೆರಿಕನ್ನರು ಇದನ್ನು ಅಂಗೀಕರಿಸಿದಾಗಿನಿಂದ ಗರ್ಭಪಾತಕ್ಕೆ ಬಳಸಿದ್ದಾರೆ ಎಂದು ತಿಳಿದು ಬಂದಿದೆ.
ಗರ್ಭಪಾತ ಮಾತ್ರೆಗಳನ್ನು ಕಾನೂನುಬದ್ಧಗೊಳಿಸಿರುವ ನಿರ್ಣಯ ತೆಗೆದುಹಾಕುವಂತೆ ಅಮೆರಿಕದಲ್ಲಿ ನಡೆಯುತ್ತಿದ್ದ ಹೋರಾಟದ ವಿವರವನ್ನು ನ್ಯಾಯಮಂಡಳಿಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಕೆಳ ನ್ಯಾಯಾಲಯದ ತೀರ್ಪುಗಳನ್ನು ನಿರ್ಬಂಧಿಸಲು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ ಕಾರಣ ಮೈಫೆಪ್ರಿಸ್ಟೋನ್‌ಗೆ ನಿಷೇಧಕ್ಕೆ 'ತಾತ್ಕಾಲಿಕವಾಗಿ' ತಡೆ ನೀಡಿದೆ. ಈ ಬಗ್ಗೆ ಯೋಚಿಸಲು ನ್ಯಾಯಮೂರ್ತಿಗಳಿಗೆ ಕಾಲಾವಕಾಶ ನೀಡುವ ಸಲುವಾಗಿ, ನ್ಯಾಯಮೂರ್ತಿ ಸ್ಯಾಮ್ಯುಯೆಲ್ ಅಲಿಟೊ ಅವರು ತುರ್ತು ತಡೆಗಾಗಿ ಸರ್ಕಾರದ ಮನವಿಯನ್ನು ಪುರಸ್ಕರಿಸಿದರು ಮತ್ತು ನ್ಯಾಯಾಲಯವು ಬುಧವಾರದೊಳಗೆ ತೀರ್ಪು ನೀಡಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಗಮನಾರ್ಹವಾಗಿ, ಸರ್ವೋಚ್ಚ ನ್ಯಾಯಾಲಯವು ಕೆಳ ನ್ಯಾಯಾಲಯದ ತೀರ್ಪನ್ನು ತಡೆಹಿಡಿದಿದೆ.
ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಇತ್ತೀಚೆಗೆ ಗರ್ಭಾವಸ್ಥೆಯ ಏಳು ಮತ್ತು ಹತ್ತು ವಾರಗಳ ನಡುವಿನ ರೋಗಿಗಳಿಗೆ ಮೈಫೆಪ್ರಿಸ್ಟೋನ್ ಬಳಕೆಯನ್ನು ಅನುಮತಿಸಿದೆ. ಆದರೆ, ಮೇಲ್ಮನವಿ ನ್ಯಾಯಾಲಯವು ಅದರ ಬಳಕೆಯ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ಇತ್ತ ಗರ್ಭಪಾತದ ಹಕ್ಕುಗಳ ವಿರೋಧಿ ಸಂಘಟನೆಗಳು ಮೈಫೆಪ್ರಿಸ್ಟೋನ್‌ನಂತಹ ಗರ್ಭಪಾತ ಔಷಧಗಳ ಲಭ್ಯತೆಯತ್ತ ಗಮನ ಹರಿಸಿವೆ. ಅಂದಿನಿಂದ, ರಿಪಬ್ಲಿಕನ್ ಆಡಳಿತದಲ್ಲಿರುವ ಇತರ ರಾಜ್ಯಗಳು ವ್ಯಾಪಕವಾದ ಗರ್ಭಪಾತ ನಿರ್ಬಂಧಗಳನ್ನು ವಿಧಿಸಿವೆ.