ಕರ್ನಾಟಕ

karnataka

ETV Bharat / international

ದೀಪಾವಳಿಯಲ್ಲಿ ಪಟಾಕಿ ಸಿಡಿಸಲು ಅನುಮತಿ: ಮಸೂದೆಗೆ ಯುಎಸ್​​ ಸೆನೆಟ್ ಅಂಗೀಕಾರ

ಅಮೆರಿಕದಲ್ಲೂ ದೀಪಾವಳಿ ಬೆಳಕು - ಹಬ್ಬದ ವೇಳೆ ಪಟಾಕಿ ಸಿಡಿಲು ಅಮೆರಿಕದ ಸೆನೆಟ್​ ಅನುಮತಿ - ಭಾರತೀಯರಿಗೆ ಸಂತಸ

US state Senate
ಪಟಾಕಿ ಸಿಡಿಸಲು ಅನುಮತಿ: ಮಸೂದೆಗೆ ಯುಎಸ್​​ ಸೆನೆಟ್ ಅಂಗೀಕಾರ

By

Published : Feb 7, 2023, 11:06 AM IST

ನ್ಯೂಯಾರ್ಕ್(ಅಮೆರಿಕ): ದೀಪಾವಳಿಯನ್ನು ರಾಜ್ಯದ ಸ್ಮರಣಾರ್ಥ ಕ್ಷಣವನ್ನಾಗಿ ಮಾಡುವ ಮತ್ತು ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸಲು ಅವಕಾಶ ನೀಡುವ ಮಸೂದೆಯನ್ನು ಯುಎಸ್‌ ಸೆನೆಟ್‌ನಲ್ಲಿ ಶಾಸಕರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ. ಸೆನೆಟ್ ಬಿಲ್-46 ಅನ್ನು ಕಳೆದ ವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸಾಮಾನ್ಯವಾಗಿ ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಆರಂಭದಲ್ಲಿ ಆಚರಿಸಲಾಗುವ ದೀಪಾವಳಿಯಂದು ಪಟಾಕಿ ಮಾರಾಟ ಮತ್ತು ಸಿಡಿಸಲು ಈ ಮಸೂದೆಯು ಅನುಮತಿಸುತ್ತದೆ. "ನಾನು ಉತಾಹ್‌ನ ಭಾರತೀಯ ಸಮುದಾಯವನ್ನು ಪ್ರಶಂಸಿಸುತ್ತೇನೆ. ನೆರೆಯ ಸಮುದಾಯಗಳನ್ನು ಸೇರಿಸಲು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲು ಅವರ ಸಹಯೋಗದ ಪ್ರಯತ್ನಗಳು ಶ್ಲಾಘನೀಯ. ಹಾಗೆಯೇ ಹಿಂದೂ ಧರ್ಮ, ಜೈನ ಮತ್ತು ಸಿಖ್ ಧರ್ಮದ ಬಗ್ಗೆ ಶಿಕ್ಷಣವನ್ನು ನೀಡುವ ಅವರ ಪ್ರಯತ್ನಗಳು ನಮ್ಮ ರಾಜ್ಯದ ಜನರಲ್ಲಿ ಉತ್ತಮ ತಿಳುವಳಿಕೆಯನ್ನು ಸೃಷ್ಟಿಸಲು ಸಹಾಯ ಮಾಡಿದೆ. ಈ ಮಸೂದೆಯು ಇತರರ ಸಂಸ್ಕೃತಿಗಳನ್ನು ಗುರುತಿಸುತ್ತದೆ. ಉತಾಹ್ ಎಂಬ ಅದ್ಭುತವಾದ ವಸ್ತ್ರಕ್ಕೆ ಕೊಡುಗೆ ನೀಡುತ್ತದೆ'' ಎಂದು ಸೆನೆಟರ್ ಫಿಲ್ಮೋರ್ ಹೇಳಿದರು.

ಇದನ್ನೂ ಓದಿ:ದೀಪಾವಳಿ ಸಂಭ್ರಮ: ಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ ಗೋವರ್ಧನ ಪೂಜೆ

ಶ್ವೇತಭವನದಲ್ಲಿ ದೀಪಾವಳಿ..2002ರಲ್ಲಿ ಮೊದಲ ಬಾರಿಗೆ ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಲಾಯಿತು. 2007ರಲ್ಲಿ ಅಮೆರಿಕ ಸರ್ಕಾರವು ಹಬ್ಬಕ್ಕೆ ಅಧಿಕೃತ ಮಾನ್ಯತೆಯನ್ನು ನೀಡಿತು. 2021 ರಲ್ಲಿ, ಹಬ್ಬವನ್ನು ಫೆಡರಲ್ ರಜಾ ದಿನವೆಂದು ಘೋಷಿಸಲು ಅಮೆರಿಕದಲ್ಲಿ ದೀಪಾವಳಿ ದಿನದ ಮಸೂದೆಯನ್ನು ಪರಿಚಯಿಸಲಾಗಿತ್ತು.

ಇದನ್ನೂ ಓದಿ:ಶ್ವೇತಭವನದಲ್ಲಿ ದೀಪಾವಳಿ ಹಬ್ಬ ಆಚರಿಸಿದ ಜೋ ಬೈಡನ್.. ಕಮಲಾ ಹ್ಯಾರಿಸ್​​

ಅಮೆರಿಕದಲ್ಲೂ ದೀಪಾವಳಿ ಸಂಭ್ರಮ: ಕಳೆದ ವರ್ಷ ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರು ಶ್ವೇತಭವನದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದ್ದರು. ಬಳಿಕ ಬೈಡನ್​, ಜಿಲ್ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ ಭಾರತೀಯ ಅಮೆರಿಕನ್ನರೊಂದಿಗೆ ಸಂವಾದ ನಡೆಸಿದ್ದರು.

ದೀಪಾವಳಿಯ ಮಹತ್ವವೇನು:ಭಾರತದಲ್ಲಿ ಮೂರು ದಿನಗಳ ಕಾಲ ಆಚರಿಸುವ ಹಬ್ಬ ದೀಪಾವಳಿ. ಕಾಮ್ಯ ಫಲದಾಯಕ ಹಬ್ಬ. ಐಭೋಗಕ್ಕೆ ಬೇಕಾದ ಎಲ್ಲಾ ವಸ್ತುಗಳಿಗೆ ಮಹಾಲಕ್ಷ್ಮಿ ಕಾರಣಳಾಗುತ್ತಾಳೆ. ಜೊತೆಗೆ ಆರೋಗ್ಯ ಹಾಗೂ ಪಾಪಗಳನ್ನು ಕಡಿಮೆ ಮಾಡುವ ಮೂರು ಬೇಡಿಕೆಗಳನ್ನು ಒದಗಿಸುವ ಹಬ್ಬವೇ ದೀಪಾವಳಿ. ಮೂರು ದಿನಗಳ ಕಾಲ ಆಚರಿಸುವ ಹಬ್ಬ ದೀಪಾವಳಿ. ಮೊದಲ ದಿನ ನರಕಚತುರ್ದಶಿ, ಎರಡನೇ ದಿನ ಅಮಾವಾಸ್ಯೆ ಹಾಗೂ ಮೂರನೇ ದಿನ ಬಲಿಪಾಡ್ಯಮಿ ಎಂದು ಆಚರಿಸಲಾಗುತ್ತದೆ.

ಇದನ್ನೂ ಓದಿ:ಬೆಳಕಿನ ಹಬ್ಬ ದೀಪಾವಳಿಯ ಮಹತ್ವವೇನು, ಆಚರಣೆಯ ವಿಧಾನಗಳು ಯಾವುವು? ‌

ಅಭ್ಯಂಗ ಸ್ನಾನ ಮಾಡುವುದೇಕೆ?: ಪ್ರಥಮ ದಿನ ನರಕ ಚತುರ್ದಶಿಯಂದು ಅಭ್ಯಂಗ ಸ್ನಾನವನ್ನು ಭಾರತೀಯರು ಮಾಡುತ್ತಾರೆ. ಇದನ್ನು ಶ್ರೀಕೃಷ್ಣ ನರಕಾಸುರನ ವಧೆಯ ಬಳಿಕ ರಕ್ತ ಮೈಮೇಲೆ ಚಿಮ್ಮಿದ್ದರಿಂದ ತೊಳೆದುಕೊಳ್ಳಲು ಮಾಡಿದ ಅಭ್ಯಂಗ ಸ್ನಾನ ಎಂದು ಹೇಳಲಾಗುತ್ತಿದೆ. ಹೀಗಾಗಿ ನರಕಾಸುರ ವಧೆಯಾದ ದಿನ ಎಲ್ಲರೂ ಅಭ್ಯಂಗ ಸ್ನಾನ ಮಾಡಬೇಕೆಂಬುದು ಪ್ರತೀತಿ. ಅಮಾವಾಸ್ಯೆಯಂದು ಧನಲಕ್ಷ್ಮಿ ಪೂಜೆಯನ್ನು ಸಂಜೆ ಸಮಯದಲ್ಲಿ ಮಾಡಲಾಗುತ್ತದೆ. ಸಂಜೆ 6-45 ರಿಂದ 8 ಗಂಟೆಯವರೆಗೆ ಮಾಡಬಹುದಾಗಿದೆ, ಇದರಿಂದ ಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ ಎಂಬುದು ಹಿಂದೂಗಳ ನಂಬಿಕೆ.

ABOUT THE AUTHOR

...view details