ಕರ್ನಾಟಕ

karnataka

ETV Bharat / international

ಭಾರತದಲ್ಲಿ ಗೋಧಿ, ಅಕ್ಕಿ ಮೇಲಿನ ಸಬ್ಸಿಡಿ ತೆಗೆದುಹಾಕುವಂತೆ ಅಮೆರಿಕ ಸೆನೆಟರ್ ಒತ್ತಾಯ - ಸಬ್ಸಿಡಿ ತೆಗೆದುಹಾಕಲು ಯುಎಸ್ ಸೆನೆಟರ್ ಮನವಿ

ವಿಶ್ವ ವ್ಯಾಪಾರ ಸಂಸ್ಥೆಯ ಮಾನದಂಡ ಉಲ್ಲಂಘನೆಯಿಂದ ದೇಶಾದ್ಯಂತ ಅಕ್ಕಿ ಮತ್ತು ಗೋಧಿ ರೈತರು ಗಂಭೀರವಾಗಿ ಪ್ರಭಾವಿತರಾಗಿದ್ದಾರೆ ಎಂದು ಅರ್ಕಾನ್ಸಾಸ್‌ನ ಸೆನೆಟರ್ ಜಾನ್ ಬೂಜ್‌ಮನ್ ಹೇಳಿದ್ದಾರೆ.

Representative image
ಸಾಂದರ್ಭಿಕ ಚಿತ್ರ

By

Published : Feb 3, 2023, 7:50 AM IST

ವಾಷಿಂಗ್ಟನ್: ಗೋಧಿ ಮತ್ತು ಅಕ್ಕಿ ಬೆಳೆಯುವ ರೈತರಿಗೆ ನೀಡುವ ಸಬ್ಸಿಡಿಗಳ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತನಾಡಲು ಅರ್ಕಾನ್ಸಾಸ್‌ನ ಸೆನೆಟರ್ ಜಾನ್ ಬೂಜ್‌ಮನ್ ಅವರು ಅಮೆರಿಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದು ವಿಶ್ವ ವ್ಯಾಪಾರ ಸಂಸ್ಥೆಯ(WTO) ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ವಿಶ್ವ ವ್ಯಾಪಾರ ಸಂಸ್ಥೆಯ ಮಾನದಂಡ ಉಲ್ಲಂಘನೆಯಿಂದ ದೇಶದಾದ್ಯಂತ ಅಕ್ಕಿ ಮತ್ತು ಗೋಧಿ ರೈತರು ಗಂಭೀರವಾಗಿ ಪ್ರಭಾವಿತರಾಗಿದ್ದಾರೆ ಎಂದು ರಿಪಬ್ಲಿಕನ್ ಪಕ್ಷದ ಸೆನೆಟರ್ ಜಾನ್ ಬೂಜ್‌ಮನ್ ಕೃಷಿ, ಪೋಷಣೆ ಮತ್ತು ಅರಣ್ಯದ ಸೆನೆಟ್ ಸಮಿತಿ ಆಯೋಜಿಸಿದ 2023 ಫಾರ್ಮ್ ಬಿಲ್‌ನ ಕಾಂಗ್ರೆಸ್​​​​​ನಲ್ ಕಾನ್ಫರೆನ್ಸ್​​ನಲ್ಲಿ ಈ ವಿಚಾರವನ್ನು ಹೇಳಿದ್ದಾರೆ.

"ನಾವು ಈ ವಿಷಯದ ಕುರಿತು ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತವನ್ನು ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತೇವೆ. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಪ್ರಶ್ನೆಗಳನ್ನು ಎತ್ತುತ್ತೇವೆ. ವ್ಯಾಪಾರ ಮತ್ತು ವಿದೇಶಿ ಕೃಷಿ ವ್ಯವಹಾರಗಳಿಗಾಗಿ ಅವರ ಸಬ್ಸಿಡಿ ನೀತಿಗೆ ನಾವು ನಿಜವಾಗಿ ಏನನ್ನು ನೋಡುತ್ತೇವೆ ಎಂಬುದನ್ನು ಬಹಿರಂಗಪಡಿಸಲು ಹಿಂದಿನ ವರ್ಷಗಳಲ್ಲಿ ಪ್ರತಿ ಅಧಿಸೂಚನೆಗಳ ಮೇಲೆ ಕೆಲಸ ಮಾಡುತ್ತಿದ್ದೇವೆ" ಎಂದು ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆ(USDA) ಅಧೀನ ಕಾರ್ಯದರ್ಶಿ ಅಲೆಕ್ಸಿಸ್ ಟೇಲರ್ ಬೂಜ್‌ಮನ್ ಅವರ ಪ್ರಶ್ನೆಗೆ ಉತ್ತರಿಸಿದರು.

"ರಾಯಭಾರಿ ಮೆಕ್‌ಕಾಲಿಪ್ ಅವರ ಪಾಲುದಾರಿಕೆಯಲ್ಲಿ ನೀವು ಏನು ಮಾಡುತ್ತಿದ್ದೀರಿ, ಭಾರತವನ್ನು ಹೊಣೆಗಾರರನ್ನಾಗಿ ಮಾಡಲು ನೀವು ಹೇಗೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂಬುದರ ಕುರಿತು ನೀವು ನಮಗೆ ಸ್ವಲ್ಪ ಹೇಳಬಲ್ಲಿರಾ?, ಸಮಿತಿಯಾಗಿ ನಾವು ಏನಾದರೂ ಮಾಡಬಹುದೇ? ಆ ನಿಟ್ಟಿನಲ್ಲಿ ಸಹಾಯಕವಾಗಿದೆಯೇ?" ಎಂದು ಬೂಜ್‌ಮನ್ ಪ್ರಶ್ನೆ ಮಾಡಿದರು.

ಈ ವಿಷಯದ ಕುರಿತು ಅಮೆರಿಕದ ಕೃಷಿ ಇಲಾಖೆ(ಯುಎಸ್‌ಡಿಎ)ಯಲ್ಲಿದ್ದಾಗಿನಿಂದ ಅವರು ಈ ಬಗ್ಗೆ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. "ನಾವು ಸಬ್ಸಿಡಿ ಬಗ್ಗೆ ಕಳವಳಗೊಂಡಿದ್ದೇವೆ. ಅಕ್ಕಿ ಮತ್ತು ಗೋಧಿಗೆ ಸಬ್ಸಿಡಿ ನೀಡುವುದರಿಂದ ಆಗುವ ತೊಂದರೆಗಳನ್ನು ಪರಿಹರಿಸಬೇಕಿದೆ ಎಂದು ಕೃಷಿ ಇಲಾಖೆ(USDA) ಅಧೀನ ಕಾರ್ಯದರ್ಶಿ ಅಲೆಕ್ಸಿಸ್ ಟೇಲರ್ ಹೇಳಿದ್ದಾರೆ.

ಭಾರತ–ಅಮೆರಿಕ ಸಹಭಾಗಿತ್ವ ವಿಸ್ತರಣೆ:ಮತ್ತೊಂದೆಡೆ ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳನ್ನು ಎದುರಿಸಲು ಭಾರತದೊಂದಿಗೆ ಕಾರ್ಯತಂತ್ರ ಸಹಭಾಗಿತ್ವದ ಸಹಕಾರ ವಿಸ್ತರಣೆಗೆ ಅಮೆರಿಕ ಬದ್ಧವಾಗಿದೆ ಎಂದು ಶ್ವೇತಭವನ ಹೇಳಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್‌ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಅವರು ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳಲ್ಲಿ ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವ ವಿಸ್ತರಿಸಲು ಮಹತ್ವದ ಚರ್ಚೆ ನಡೆಸಿದರು.

ಉನ್ನತಾಧಿಕಾರಿಗಳ ನಿಯೋಗ ಕೊಂಡೊಯ್ದಿರುವ ಡೋಭಾಲ್‌ ಅವರು ಇಸ್ರೇಲ್, ಈಜಿಪ್ಟ್ ಸೇರಿ ಮಧ್ಯಪ್ರಾಚ್ಯ ದೇಶಗಳ ಪ್ರವಾಸ ಮುಗಿಸಿ ಮರಳಿರುವ ಬ್ಲಿಂಕನ್ ಅವರನ್ನು ಬುಧವಾರ ಭೇಟಿ ಮಾಡಿದರು. 'ಭಾರತದೊಂದಿಗೆ ನಮ್ಮ ಕಾರ್ಯತಂತ್ರದ ಸಹಭಾಗಿತ್ವ ಗಾಢವಾಗಿಸಲು ಡೋಭಾಲ್‌ ಅವರೊಂದಿಗೆ ಫಲಪ್ರದ ಸಭೆ ನಡೆಸಲಾಯಿತು. ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತದೊಂದಿಗೆ ನಮ್ಮ ಸಹಭಾಗಿತ್ವದ ಸಹಕಾರವನ್ನು ಮತ್ತಷ್ಟು ವಿಸ್ತರಿಸುತ್ತಿದ್ದೇವೆ’ ಎಂದು ಬ್ಲಿಂಕನ್‌ ಸಭೆಯ ನಂತರ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:ವಾಲ್​​​ಸ್ಟ್ರೀಟ್​​ನಲ್ಲಿ ಮುಂದುವರಿದ ಏರಿಳಿತ.. ಟೆಕ್​​ ಷೇರುಗಳ ಅಬ್ಬರ..ನಾಸ್ಡಾಕ್​​​​​​​​​ನಲ್ಲಿ ಉತ್ಸಾಹ

ABOUT THE AUTHOR

...view details