ಫಿಲಡೆಲ್ಫಿಯಾ (ಯುಎಸ್ಎ):ಇಲ್ಲಿನ ಕೆನ್ಸಿಂಗ್ಟನ್ ವ್ಯಾಪ್ತಿಯಲ್ಲಿರುವ ಬಾರ್‌ನ ಹೊರ ಭಾಗದಲ್ಲಿ ಶನಿವಾರ ರಾತ್ರಿ ಕನಿಷ್ಠ 12 ಜನರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಮಾಹಿತಿ ಮೂಲಗಳ ಪ್ರಕಾರ, ಪೂರ್ವ ಅಲೆಘೆನಿ ಮತ್ತು ಕೆನ್ಸಿಂಗ್ಟನ್ ಅವೆನ್ಯೂ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಇಲ್ಲಿ ಎಷ್ಟು ಜನರಿದ್ದರು ಮತ್ತು ಗುಂಡಿನ ದಾಳಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: 12 ಜನರಿಗೆ ತೀವ್ರ ಗಾಯ - ಅಮೆರಿಕದ ಫಿಲಡೆಲ್ಫಿಯಾದಲ್ಲಿ ಗುಂಡಿನ ದಾಳಿ
ಅಮೆರಿಕದ ಫಿಲಡೆಲ್ಫಿಯಾ ಪ್ರದೇಶದ ಕೆನ್ಸಿಂಗ್ಟನ್ ವ್ಯಾಪ್ತಿಗೆ ಬರುವ ಬಾರ್‌ವೊಂದರ ಹೊರಗೆ ಶನಿವಾರ ರಾತ್ರಿ ಹಲವು ಜನರ ಮೇಲೆ ಗುಂಡಿನ ದಾಳಿ ನಡೆದಿದೆ.
ಅಮೇರಿಕದ ಫಿಲಡೆಲ್ಫಿಯಾ ಬಾರ್ ಶೂಟ್‌ನಲ್ಲಿ 12 ಜನರಿಗೆ ಗಾಯ
ಅಧ್ಯಕ್ಷ ಜೋ ಬೈಡೆನ್ ದುಃಖ ವ್ಯಕ್ತಪಡಿಸಿ, ಸಾಮೂಹಿಕ ಗುಂಡಿನ ದಾಳಿಯ ಭೀಕರ ಹೊರೆ ಅನುಭವಿಸಿದ ಅನೇಕ ಕುಟುಂಬಗಳಿಗೆ ಸಾಂತ್ವನಗಳು. ಅವರಿಗಾಗಿ ನಾವು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಉತ್ತರ ಕೆರೊಲಿನಾದ ರೇಲಿಯಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಐವರು ಸಾವನ್ನಪ್ಪಿದ್ದರು.
Last Updated : Nov 6, 2022, 1:32 PM IST