ಕರ್ನಾಟಕ

karnataka

ETV Bharat / international

ಚೀನಾ-ತೈವಾನ್ ಬಿಕ್ಕಟ್ಟು: ದ್ವೀಪ ರಾಷ್ಟ್ರಕ್ಕೆ ಅಮೆರಿಕದ ಶಸ್ತ್ರಾಸ್ತ್ರ ಬಲ

ಚೀನಾ-ತೈವಾನ್​ ಬಿಕ್ಕಟ್ಟಿನ ಮಧ್ಯೆ ದ್ವೀಪ ರಾಷ್ಟ್ರ ತೈವಾನ್​​ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಲು ಅಮೆರಿಕ ಮಹತ್ವದ ನಿರ್ಧಾರ ಕೈಗೊಂಡಿದೆ.

Taiwan tensions rise with China
Taiwan tensions rise with China

By

Published : Sep 3, 2022, 7:57 AM IST

ವಾಷಿಂಗ್ಟನ್​​(ಅಮೆರಿಕ): ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೊಸಿ ಭೇಟಿಯ ನಂತರ ತೈವಾನ್-ಚೀನಾ ಸಂಬಂಧ ಸಂಪೂರ್ಣ ಹದಗೆಟ್ಟಿದ್ದು, ಉಭಯ ದೇಶಗಳ ಮಧ್ಯೆ ಯುದ್ಧದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಚೀನಾ-ತೈವಾನ್​ ಬಿಕ್ಕಟ್ಟಿನ ನಡುವೆ ಮಹತ್ವದ ನಿರ್ಧಾರ ಕೈಗೊಂಡಿರುವ ಅಮೆರಿಕ ತೈವಾನ್​​​​​​​ಗೆ ಹೆಚ್ಚಿನ ಶಸ್ತ್ರಾಸ್ತ್ರ ಮಾರಾಟ ಮಾಡಲು ನಿರ್ಧಾರ ಕೈಗೊಂಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್​ ಸರ್ಕಾರ ಈ ಮಹತ್ವದ ಪ್ರಕಟಣೆ ಘೋಷಿಸಿದೆ.

ಈ ಹಿಂದಿನಿಂದಲೂ ತೈವಾನ್​ ತನ್ನ ದೇಶದ ಅವಿಭಾಜ್ಯ ಅಂಗ ಎಂದು ಚೀನಾ ಹೇಳಿಕೊಳ್ಳುತ್ತಲೇ ಇದ್ದು, ಆದರೆ, ತೈವಾನ್​ ಸ್ವತಂತ್ರ ದ್ವೀಪ ಎಂದು ತಿಳಿಸಿದೆ. ಕಳೆದ ಕೆಲ ದಿನಗಳಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕದ ಜನಪ್ರತಿನಿಧಿ ಸಭೆಯ ಅಧ್ಯಕ್ಷೆ ನ್ಯಾನ್ಸಿ ಪೆಲೋಸಿ ತೈವಾನ್​​ ದೇಶಕ್ಕೆ ಭೇಟಿ ನೀಡಿದ್ದು, ಚೀನಾ ಕಣ್ಣನ್ನು ಕೆಂಪಾಗಿಸಿದೆ.

ತೈವಾನ್​​​ಗೆ ಅಮೆರಿಕ ಶಸ್ತ್ರಾಸ್ತ್ರ ಮಾರಾಟ: ತೈವಾನ್​​ಗೆ USD1 ಬಿಲಿಯನ್​ ಡಾಲರ್​​​ಗಿಂತಲೂ ಹೆಚ್ಚಿನ ಶಸ್ತ್ರಾಸ್ತ್ರ ಮಾರಾಟ ಮಾಡಲು ಬೈಡನ್​ ಸರ್ಕಾರ ಮುಂದಾಗಿದೆ. ಇದರಲ್ಲಿ ಮುಖ್ಯವಾಗಿ USD355 ಮಿಲಿಯನ್ ಹಾರ್ಪೂನ್​​ ವಾಯು-ಸಮುದ್ರ ಕ್ಷಿಪಣಿ, USD85 ಮಿಲಿಯನ್​ ಸೈಡ್​​ವಿಂಡರ್​​ ಏರ್​​-ಟು-ಏರ್​​ ಕ್ಷಿಪಣಿ ನೀಡಲು ಮುಂದಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದರ ಜೊತೆಗೆ USD655 ಮಿಲಿಯನ್​​​ ಸಾಗಾಣಿಕೆ ಪ್ಯಾಕೇಜ್​ಅನ್ನು ಸಹ ಘೋಷಣೆ ಮಾಡಿದೆ. ಮುಖ್ಯವಾಗಿ ವಾಯು ರಕ್ಷಣೆಯ ಎಚ್ಚರಿಕೆ ಉದ್ದೇಶದಿಂದ ಈ ಶಸ್ತ್ರಾಸ್ತ್ರ ಮಾರಾಟ ಮಾಡಲು ನಿರ್ಧರಿಸಿದೆ.

ಉಭಯ ದೇಶಗಳ ನಡುವಿನ ಬಿಕ್ಕಟ್ಟು ಹೆಚ್ಚಾಗುತ್ತಿದ್ದಂತೆ ಚೀನಾ ಈಗಾಗಲೇ ತೈವಾನ್​ ಗಡಿ ಪ್ರದೇಶದ ಬಳಿ ಮಿಲಿಟರಿ ಅಭ್ಯಾಸ ಆರಂಭಿಸಿದೆ. ಹೀಗಾಗಿ, ತೈವಾನ್​​ ತನ್ನ ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮುಂದಾಗಿದ್ದು, ಯುಎಸ್​​-ತೈವಾನ್​ ನಡುವೆ ಶಸ್ತ್ರಾಸ್ತ್ರ ಒಪ್ಪಂದ ಏರ್ಪಟ್ಟಿದೆ. ತೈವಾನ್​ ಮಿಲಿಟರಿ ಪ್ರದೇಶದಲ್ಲಿ ಸಂಶಯಾಸ್ಪದವಾಗಿ ಹಾರಾಡುತ್ತಿದ್ದ ಡ್ರೋನ್​ ಅಲ್ಲಿನ ಸೇನೆ ಹೊಡೆದು ಉರುಳಿಸಿದೆ. ತೈವಾನ್​ ವಿರುದ್ಧ ಮಿಲಿಟರಿ ಸಾಮರ್ಥ್ಯ ತೋರಿಸುವುದಕ್ಕಿಂತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಅಮೆರಿಕ ಒತ್ತಾಯ ಸಹ ಮಾಡಿದೆ.

ತೈವಾನ್​ ದ್ವೀಪ ರಾಷ್ಟ್ರದ ಸುತ್ತಮುತ್ತಲೂ ಚೀನಾ 66 ಯುದ್ಧ ವಿಮಾನ, 14 ಯುದ್ಧನೌಕೆಗಳನ್ನು ಸನ್ನದ್ಧಗೊಳಿಸಿದೆ. ಜೊತೆಗೆ ಸೈನಿಕರಿಗೆ ಎಚ್ಚರದಿಂದ ಇರುವಂತೆ ತಿಳಿಸಿದೆ. ಆದರೆ, ತೈವಾನ್ ರಕ್ಷಣೆಗೆ ಮುಂದಾಗಿರುವ ಅಮೆರಿಕ ತನ್ನ ಯುದ್ಧ ನೌಕೆಗಳ ಮೂಲಕ ಪಹರೆ ನಡೆಸುತ್ತಿದೆ.

ABOUT THE AUTHOR

...view details