ಕರ್ನಾಟಕ

karnataka

ETV Bharat / international

ನ್ಯೂಯಾರ್ಕ್​ನಲ್ಲಿ ಮಳೆ ಅಬ್ಬರ.. ಜನಜೀವನ ಅಸ್ತವ್ಯಸ್ತ, ತುರ್ತು ಪರಿಸ್ಥಿತಿ ಘೋಷಣೆ - ಜಲಾವೃತಗೊಂಡ ಮಹಾನಗರ

Declaration of Emergency: ಬಿರುಗಾಳಿ ಸಹಿತ ಮಳೆ ಅಬ್ಬರಕ್ಕೆ ನ್ಯೂಯಾರ್ಕ್ ನಗರ ನಲುಗಿದೆ. ಕೆಲವು ಪ್ರದೇಶಗಳಲ್ಲಿ ರಾತ್ರಿಯಿಡೀ 13 ಸೆಂಟಿಮೀಟರ್‌ಗಳಷ್ಟು ಮಳೆ ಬಿದ್ದಿದೆ. ದಿನವೀಡಿ 18 ಸೆಂಟಿಮೀಟರ್‌ಗಳಷ್ಟು ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಶುಕ್ರವಾರ ತಿಳಿಸಿದ್ದಾರೆ.

Declaration of Emergency
ನ್ಯೂಯಾರ್ಕ್​ನಲ್ಲಿ ಮಳೆ ಅಬ್ಬರ, ಜನಜೀವನ ಅಸ್ತವ್ಯಸ್ತ, ತುರ್ತು ಪರಿಸ್ಥಿತಿ ಘೋಷಣೆ

By ETV Bharat Karnataka Team

Published : Sep 30, 2023, 10:02 AM IST

ನ್ಯೂಯಾರ್ಕ್: ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಅಮೆರಿಕದ ಈಶಾನ್ಯ ರಾಜ್ಯಗಳು ಸಂಕಷ್ಟಕ್ಕೆ ಸಿಲುಕಿವೆ. ವಿಶೇಷವಾಗಿ ದೇಶದ ಆರ್ಥಿಕ ರಾಜಧಾನಿ ನ್ಯೂಯಾರ್ಕ್ ನಗರವು ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಇದರಿಂದ ಗವರ್ನರ್ ಕ್ಯಾಥಿ ಹೊಚುಲ್ ಅವರು, ನ್ಯೂಯಾರ್ಕ್ ನಗರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.

ಶುಕ್ರವಾರ ರಾತ್ರಿ ಏಕಾಏಕಿ ಸುರಿದ ಮಳೆಗೆ ನಗರದ ರಸ್ತೆಗಳು ಜಲಾವೃತಗೊಂಡಿವೆ. ಪ್ರವಾಹದ ನೀರು ನುಗ್ಗಿದ ಕಾರಣ ಸುರಂಗ ಮಾರ್ಗಗಳು ಮತ್ತು ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಧಾರಾಕಾರ ಮಳೆಯಿಂದ ಪ್ರವಾಹ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಬಹಿರಂಗಪಡಿಸಿದೆ. ಜನರು ಮನೆಯಿಂದ ಹೊರಗೆ ಬರದಂತೆ ನಗರ ಮೇಯರ್ ಎರಿಕ್ ಆಡಮ್ಸ್ ಮನವಿ ಮಾಡಿದ್ದಾರೆ. ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಮಾಹಿತಿ:ಶುಕ್ರವಾರ, ನ್ಯೂಯಾರ್ಕ್ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಬಿರುಗಾಳಿ ಸಹಿತ ಅಬ್ಬರದ ಮಳೆಗೆ ನಗರದ ಸುರಂಗಮಾರ್ಗಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಮುಖ ಬೀದಿಗಳು ಮತ್ತು ಹೆದ್ದಾರಿಗಳಲ್ಲಿ ಜಲಾವೃತ್ತವಾಗಿದೆ. ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಟ ವಿಳಂಬವಾಗಿವೆ. ರಾತ್ರಿಯಿಡೀ ಕೆಲವು ಪ್ರದೇಶಗಳಲ್ಲಿ 5 ಇಂಚುಗಳಷ್ಟು (13 ಸೆಂಟಿಮೀಟರ್‌ಗಳು) ಮಳೆ ಬಿದ್ದಿದೆ. ದಿನವಿಡೀ 7 ಇಂಚುಗಳಷ್ಟು (18 ಸೆಂಟಿಮೀಟರ್‌ಗಳು) ಹೆಚ್ಚು ಮಳೆ ಬೀಳುವ ನಿರೀಕ್ಷೆಯಿದೆ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಶುಕ್ರವಾರ ತಿಳಿಸಿದ್ದಾರೆ.

''ಇನ್ನು ಮಳೆ ಕಡಿಮೆಯಾಗಿಲ್ಲ. ಮಳೆ ಮುಂದುವರೆದಿರುವುದರಿಂದ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇದರಿಂದ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ'' ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಧ್ಯಾಹ್ನದ ವೇಳೆಗೆ ಯಾವುದೇ ಸಾವುಗಳು ಅಥವಾ ಗಂಭೀರ ಗಾಯಗಳು ವರದಿಯಾಗಿಲ್ಲ ಎಂದು ನಗರ ಅಧಿಕಾರಿಗಳು ತಿಳಿಸಿದ್ದಾರೆ. ಜನರು ಮನೆಯಿಂದ ಹೊರಗೆ ಬರಬಾರದು ಎಂದು ಮೇಯರ್ ಎರಿಕ್ ಆಡಮ್ಸ್ ಒತ್ತಾಯಿಸಿದರು.

ಜಲಾವೃತಗೊಂಡ ಮಹಾನಗರದಲ್ಲಿ ಸಂಚರಿಸಲು ನಿವಾಸಿಗಳು ಹರಸಾಹಸ ಪಟ್ಟರು. ಮ್ಯಾನ್‌ಹ್ಯಾಟನ್‌ನ ಪೂರ್ವ ಭಾಗದಲ್ಲಿ ವಾಹನ ಸಂಚಾರ ಸ್ಥಗಿತವಾಯಿತು. ಕೆಲವು ಚಾಲಕರು ನೀರಿನಲ್ಲಿ ಸಿಲುಕಿದ್ದ ತಮ್ಮ ವಾಹನಗಳನ್ನು ಅಲ್ಲೇ ಬಿಟ್ಟು ಹೋದರು. ಬ್ರೂಕ್ಲಿನ್‌ನ ಸೌತ್ ವಿಲಿಯಮ್ಸ್‌ಬರ್ಗ್‌ನ ಬೀದಿಯಲ್ಲಿ, ಕಾರ್ಮಿಕರು ತಮ್ಮ ಮೊಣಕಾಲುಗಳವರೆಗೆ ನೀರಿನಲ್ಲಿ ಓಡಾಡುವುದು ಕಂಡುಬಂದಿತ್ತು. ಮಳೆಯು ಸ್ವಲ್ಪಮಟ್ಟಿಗೆ ನಿಧಾನವಾಗುತ್ತಿದ್ದಂತೆ, ಬ್ರೂಕ್ಲಿನ್ ನಿವಾಸಿಗಳು ಹಾನಿಯನ್ನು ಸಮೀಕ್ಷೆ ಮಾಡಲು ತಮ್ಮ ಮನೆಗಳಿಂದ ಹೊರಬಂದರು ಮತ್ತು ಅನೇಕ ನೆಲಮಾಳಿಗೆಯಲ್ಲಿ ಶೇಖರಣೆಗೊಂಡ ನೀರನ್ನು ಬರಿದಾಗಿಸಲು ಪ್ರಾರಂಭಿಸಿದರು.

ಕೆಲವು ರಸ್ತೆಗಳ ಮಧ್ಯದಲ್ಲಿ ಸೊಂಟದವರೆಗೂ ನೀರು ತುಂಬಿ ಹರಿಯುತ್ತಿತ್ತು. ಕೆಲವು ಜನರು ಹಾಲಿನ ಪೆಟ್ಟಿಗೆಗಳು ಮತ್ತು ಮರದ ಹಲಗೆಗಳ ಸಹಾಯದಿಂದ ರಸ್ತೆಗಳನ್ನು ದಾಟಿದರು. ಪರಿಸರ ಸಂರಕ್ಷಣಾ ಆಯುಕ್ತ ರೋಹಿತ್ ಟಿ. ಅಗರ್‌ವಾಲಾ ಅವರು, ಬ್ರೂಕ್ಲಿನ್ ನೇವಿ ಯಾರ್ಡ್‌ನಲ್ಲಿ ಒಂದೇ ಗಂಟೆಯಲ್ಲಿ 2.5 ಇಂಚುಗಳಷ್ಟು (6 ಸೆಂಟಿಮೀಟರ್‌ಗಳು) ಮಳೆ ಸುರಿದಿದ್ದರಿಂದ ಸುತ್ತಮುತ್ತಲಿನ ಒಳಚರಂಡಿಗಳು ಕಟ್ಟಿಕೊಂಡಿದ್ದವು. ಸಾಮಾಜಿಕ ಜಾಲಾತಾಣಗಲ್ಲಿ ಪೋಸ್ಟ್ ಮಾಡಲಾದ ಫೋಟೋಗಳು ಮತ್ತು ವೀಡಿಯೊಗಳನ್ನು ಸುರಂಗಮಾರ್ಗ ನಿಲ್ದಾಣಗಳು ಮತ್ತು ನೆಲಮಾಳಿಗೆಗಳಲ್ಲಿ ವೇಗವಾಗಿ ನೀರು ಹರಿಯುತ್ತಿರುವ ದೃಶ್ಯಗಳು ಕಂಡುಬಂದಿವೆ.

ಇದನ್ನೂ ಓದಿ:ಬಲೂಚಿಸ್ತಾನದಲ್ಲಿ ಮಸೀದಿ ಬಳಿ ಭಾರಿ ಸ್ಫೋಟ; 35 ಸಾವು, 100 ಜನರಿಗೆ ಗಾಯ

ABOUT THE AUTHOR

...view details