ವಾಷಿಂಗ್ಟನ್(ಅಮೆರಿಕ):ಪೋಷಕಾಂಶಗಳಿಂದ ವಂಚಿತವಾದ ಪುಟ್ಟ ಮಕ್ಕಳಿಗೆ, ಎದೆ ಹಾಲು ಸಮಸ್ಯೆಯಿಂದ ಬಳಲುತ್ತಿರುವ ತಾಯಂದಿರಿಗೆ ಸಹಾಯವಾಗಿ ಅಮೆರಿಕದ ಮಹಿಳೆಯೊಬ್ಬರು ತನ್ನ 118 ಲೀಟರ್ ಎದೆಹಾಲನ್ನು ಮಾರಾಟ ಮಾಡಿದ ಕುತೂಹಲಕಾರಿ ವಿಷಯ ಬೆಳಕಿಗೆ ಬಂದಿದೆ. ಯುರೋಪ್ ರಾಷ್ಟ್ರಗಳಲ್ಲಿ ತಾಯಂದಿರಲ್ಲಿ ಎದೆಹಾಲಿನ ಕೊರತೆ ಹೆಚ್ಚಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದೇ ವೇಳೆ ಇಂತಹ ಕೊರತೆಯಿಂದ ಬಳಲುತ್ತಿರುವ ತಾಯಿ ಮತ್ತು ಮಕ್ಕಳಿಗೆ ಅಮೆರಿಕದ ಉತಾಹ್ ಪ್ರದೇಶದ ಮಹಿಳೆ ಅಲಿಸ್ಸಾ ಚಿಟ್ಟಿ ಎಂಬುವರು ತಮ್ಮ ಎದೆಹಾಲನ್ನ ಸಂಗ್ರಹಿಸಿ ಮಾರಾಟ ಮಾಡಿದ್ದಾರೆ.
ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ಅಲಿಸ್ಸಾ ಚಿಟ್ಟಿ, ತಾನು ಎದೆಹಾಲನ್ನು ಸಂಗ್ರಹಿಸಿ ಮೂರು ಫ್ರಿಡ್ಜ್ಗಳಲ್ಲಿ ಶೇಖರಿಸಿಟ್ಟಿದ್ದೆ. ಇದನ್ನು ಬಳಿಕ ಮಾರಾಟ ಮಾಡಿದೆ. ಒಂದು ಲೀಟರ್ ಎದೆಹಾಲಿಗೆ 1 ಔನ್ಸ್(77.48 ಡಾಲರ್) ನಿಗದಿ ಮಾಡಿದೆ. ಒಟ್ಟಾರೆ ನಾನು 118 ಲೀಟರ್ ಎದೆಹಾಲು ಮಾರಾಟ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.