ವಾಷಿಂಗ್ಟನ್:ಮಾಸ್ಕೋದೊಂದಿಗಿನ ನವದೆಹಲಿಯ ಸಂಬಂಧವು ಹಲವಾರು ದಶಕಗಳಿಂದ ಬೆಳೆಯುತ್ತಾ ಬಂದಿರುವುದು ಗೊತ್ತಿರುವ ವಿಚಾರ. ಇದಕ್ಕೆ ಅಮೆರಿಕ ಸರ್ಕಾರಕ್ಕೆ ಇಷ್ಟ ಇಲ್ಲದಿರುವುದು ಸಹ ಎಲ್ಲರಿಗೂ ತಿಳಿದ ಸಂಗತಿ. ರಷ್ಯಾ ಮತ್ತು ಭಾರತ ನಡುವಿನ ಸಂಬಂಧ ಇಷ್ಟಪಡದಿದ್ದರೂ ಬೈಡನ್ ಆಡಳಿತ ‘ಭಾರತಕ್ಕಾಗಿ ಅಮೆರಿಕ ಇದೆ’ ಎಂದು ಮತ್ತೆ ಪುನರುಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್, ನಾವು ನಮ್ಮ ಭಾರತೀಯ ಪಾಲುದಾರರೊಂದಿಗೆ ಹಲವಾರು ಚರ್ಚೆಗಳನ್ನು ನಡೆಸಿದ್ದೇವೆ. ನಾವು ಗಮನಿಸಿರುವ ಅಂಶವೆಂದರೆ ಮಾಸ್ಕೋದೊಂದಿಗೆ ಪ್ರತಿಯೊಂದು ದೇಶವೂ ವಿಭಿನ್ನ ಸಂಬಂಧವನ್ನು ಹೊಂದಿದೆ. ರಷ್ಯಾದೊಂದಿಗೆ ಭಾರತದ ಸಂಬಂಧವು ಹಲವಾರು ದಶಕಗಳಿಂದ ಅಭಿವೃದ್ಧಿಗೊಂಡಿದೆ ಎಂದು ಹೇಳಿದರು.
ಓದಿ:ಹಣದುಬ್ಬರದ ಭಯ: ಅಮೆರಿಕ ಬಳಿಕ ಬಡ್ಡಿದರ ಹೆಚ್ಚಿಸಿದ ಸ್ವಿಸ್
ಎರಡು ದಶಕಗಳಿಗೂ ಹೆಚ್ಚು ಕಾಲ ಉಭಯ ರಾಷ್ಟ್ರಗಳ ನಡುವೆ ಸಂಬಂಧ ಸುಧಾರಿಸಿದೆ. ಇದು ನಿಜವಾಗಿಯೂ ಕ್ಲಿಂಟನ್ ಆಡಳಿತಕ್ಕೆ ಮತ್ತು ಜಾರ್ಜ್ ಡಬ್ಲ್ಯೂ ಬುಷ್ ಆಡಳಿತಕ್ಕೆ ಸಲ್ಲುತ್ತದೆ. ಭಾರತದೊಂದಿಗಿನ ಪಾಲುದಾರಿಕೆ ಅಮೆರಿಕ ಬಯಸಿದೆ. ಭದ್ರತಾ ಕ್ಷೇತ್ರದಲ್ಲಿ ಭಾರತಕ್ಕೆ ಆಯ್ಕೆಯ ಪಾಲುದಾರರಾಗಲು ಅಮೆರಿಕ ಪ್ರಯತ್ನಿಸಿದೆ. ನಾವು ಎಲ್ಲಾ ಸಮಯದಲ್ಲಿ ನಮ್ಮ ಭಾರತೀಯ ಪಾಲುದಾರರ ಜೊತೆ ಇರುತ್ತೇವೆ ಎಂದು ಪ್ರೈಸ್ ಇದೇ ವೇಳೆ ಸ್ಪಷ್ಟಪಡಿಸಿದರು.
ನಾವು ನಮ್ಮ ಭಾರತೀಯ ಪಾಲುದಾರರೊಂದಿಗೆ ಬಹಳ ಹಿಂದೆಯೇ '2+2' ಸಂವಾದವನ್ನು ನಡೆಸಿದ್ದೇವೆ. I2U2 ಸಂದರ್ಭದಲ್ಲಿ ನಾವು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯನ್ನು ಎದುರು ನೋಡುತ್ತೇವೆ. ಯುಎಇ ಮತ್ತು ಇಸ್ರೇಲ್ ಜೊತೆಗೆ ನಾವು ಹೊಂದಿರುವ ವ್ಯವಸ್ಥೆ ಭಾರತದ ಜೊತೆಗೂ ಹೊಂದುತ್ತೇವೆ., ಸಹಜವಾಗಿ ಕ್ವಾಡ್ ಸೇರಿದಂತೆ ನಾವು ಹೊಂದಿರುವ ಅನೇಕ ಪಾಲುದಾರಿಕೆಗಳಲ್ಲಿ ಭಾರತವನ್ನು ಸೇರಿಸಿಕೊಳ್ಳುತ್ತೇವೆ ಎಂದು ಅವರು ಇದೇ ವೇಳೆ ಹೇಳಿದರು.