ವಾಷಿಂಗ್ಟನ್ (ಅಮೆರಿಕ) : 7,000 ಕ್ಕೂ ಹೆಚ್ಚು ಸಂತ್ರಸ್ತರಿಗೆ ಬರೋಬ್ಬರಿ 13 ಮಿಲಿಯನ್ ಡಾಲರ್‌ಗಿಂತ ಅಧಿಕ ವಂಚಿಸಿರುವ ತಾಂತ್ರಿಕ ಬೆಂಬಲ ಹಗರಣದಲ್ಲಿ (technical support scam) ಭಾಗಿಯಾಗಿರುವ ಆರೋಪ ಕೇಳಿ ಬಂದ ಹಿನ್ನೆಲೆ ಭಾರತೀಯ ಅಮೆರಿಕನ್ ಮೂಲದ ವ್ಯಕ್ತಿಯನ್ನು ನ್ಯೂಜೆರ್ಸಿಯಲ್ಲಿ ಬಂಧಿಸಲಾಗಿದೆ ಎಂದು ಅಮೆರಿಕದ ಅಟಾರ್ನಿ ಗುರುವಾರ ಹೇಳಿದರು.
ಸಾಫ್ಟ್‌ವೇರ್ ಕಂಪನಿ ಹೆಸರಿನಲ್ಲಿ ವಂಚನೆಗೆ ಸಂಚು ರೂಪಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋಜ್ ಯಾದವ್ ಎಂಬಾತನನ್ನು ಬಂಧಿಸಲಾಗಿದೆ. ನಿನ್ನೆ ನೆವಾರ್ಕ್ ಫೆಡರಲ್ ನ್ಯಾಯಾಲಯದಲ್ಲಿ ಅಮೆರಿಕದ ಮ್ಯಾಜಿಸ್ಟ್ರೇಟ್ ಕೋರ್ಟ್ನ ಜೋಸ್ ಆರ್ ಅಲ್ಮಾಂಟೆ ಅವರ ಮುಂದೆ ವಿಚಾರಣೆಗೆ ಹಾಜರು ಪಡಿಸಲಾಯಿತು.
ಈ ವೇಳೆ ವಾದ ಮಂಡಿಸಿದ ವಕೀಲ ಫಿಲಿಪ್ R. ಸಾಲಿಂಗರ್ ಅವರು, ಆರೋಪಿಗಳು ಪ್ರಮುಖ ಸಾಫ್ಟ್‌ವೇರ್ ಕಂಪನಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳುವ ಮೂಲಕ ಅನೇಕ ಮಂದಿಯನ್ನು ದಾರಿತಪ್ಪಿಸಿದ್ದಾರೆ. ಸಾಫ್ಟ್‌ವೇರ್ ಕಂಪನಿಯ ಜನಪ್ರಿಯ ಲೆಕ್ಕಪತ್ರ ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ತಾಂತ್ರಿಕ ಬೆಂಬಲವನ್ನು ನೀಡುವುದಾಗಿ ಹೇಳಿದ್ದು, ಆನಂತರ ಸಾಫ್ಟ್‌ವೇರ್ ಕಂಪನಿಯಿಂದ ಅಧಿಕೃತವಲ್ಲದ ಬೆಂಬಲ ಸೇವೆಗಳಿಗಾಗಿ ಸಂತ್ರಸ್ತರಿಗೆ ಅತಿಯಾದ ಶುಲ್ಕವನ್ನು ವಿಧಿಸಿದ್ದಾರೆ. ಕಂಪನಿಯು ಯಾವುದೇ ಶುಲ್ಕವನ್ನು ವಿಧಿಸಲು ಎಂದಿಗೂ ಯಾದವ್ ಮತ್ತು ಆತನ ಸಹಚರರಿಗೆ ಅಧಿಕಾರ ನೀಡರಲಿಲ್ಲ ಎಂದು ವಾದಿಸಿದರು.
ಇದನ್ನೂ ಓದಿ :Server Hack : ಅಮೆಜಾನ್ ಕಂಪನಿ ಸರ್ವರ್ ಹ್ಯಾಕ್, ಕೋಟ್ಯಂತರ ಹಣ ವಂಚನೆ ; ಓರ್ವನ ಬಂಧನ