ಕರ್ನಾಟಕ

karnataka

ETV Bharat / international

ಕೆನಡಾದಲ್ಲೂ ನಿಗೂಢ ಸಾಧನ ಹಾರಾಟ; ಹೊಡೆದುರುಳಿಸಿದ ಅಮೆರಿಕದ F-22 ಯುದ್ಧ ವಿಮಾನ - ಈಟಿವಿ ಭಾರತ ಕನ್ನಡ

ಕೆನಡಾದ ಯುಕಾನ್​ ಪ್ರದೇಶದ ಆಗಸದಲ್ಲಿ ಹಾರುತ್ತಿದ್ದ ನಿಗೂಢ ವಸ್ತುವನ್ನು ಪ್ರಧಾನಿ ಜಸ್ಟಿನ್​ ಟ್ರೂಡೋ ಅನುಮತಿ ಪಡೆದು ಅಮೆರಿಕ ಸೇನೆ ಹೊಡೆದುರುಳಿಸಿದೆ.

trudeau
ಪ್ರಧಾನಿ ಜಸ್ಟಿನ್​ ಟ್ರೂಡೋ

By

Published : Feb 12, 2023, 9:09 AM IST

ಒಟ್ಟಾವಾ (ಕೆನಡಾ) : ಅಮೆರಿಕದಲ್ಲಿ ಚೀನಾದ ನಿಗೂಢ ಗೂಢಾಚಾರಿಕೆ ಬಲೂನ್​ ಹೊಡೆದು ಹಾಕಿದ ಬಳಿಕ ಮತ್ತೊಂದು ನಿಗೂಢ ವಸ್ತುವನ್ನು ಉಡಾಯಿಸಲಾಗಿತ್ತು. ಇದೀಗ ಕೆನಡಾದಲ್ಲೂ ಹಾರುತ್ತಿದ್ದ ನಿಗೂಢ ಸಾಧನವನ್ನು ಅಮೆರಿಕದ ಎಫ್‌-22 ಯುದ್ಧ ವಿಮಾನ ನೆಲಕ್ಕುರುಳಿಸಿದೆ ಎಂದು ಕೆನಾಡ ಪ್ರಧಾನಿ ಜಸ್ಟಿನ್​ ಟ್ರೂಡೋ ತಿಳಿಸಿದ್ದಾರೆ. ಶಂಕಿತ ವಸ್ತು ಎಷ್ಟು ಎತ್ತರದಲ್ಲಿ ಹಾರುತ್ತಿತ್ತು ಮತ್ತು ಆ ವಸ್ತು ಯಾವುದೆಂದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಉತ್ತರ ಅಮೆರಿಕದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್, ಯುಎಸ್-ಕೆನಡಾದ ಸಂಯೋಜಿತ ಸಂಸ್ಥೆಯು ಎರಡು ರಾಷ್ಟ್ರಗಳ ಮೇಲೆ ವಾಯುಪ್ರದೇಶದ ಹಂಚಿಕೆಗೆ ರಕ್ಷಣೆ ಒದಗಿಸುತ್ತದೆ. ಇದು ಉತ್ತರ ಕೆನಡಾದ ಮೇಲೆ ಹೆಚ್ಚಿನ ಎತ್ತರದಲ್ಲಿ ಹಾರುತ್ತಿದ್ದ ಅನುಮಾನಾಸ್ಪದ ವಸ್ತುವನ್ನು ಪತ್ತೆ ಹಚ್ಚಿದೆ. ಕೆನಡಾ ಪ್ರಧಾನಿ ಟ್ರೂಡೋ ಆದೇಶದ ಮೇರೆಗೆ ನಿಗೂಢ ಸಾಧನವನ್ನು ಹೊಡೆದುರುಳಿಸಲಾಗಿದೆ. ಈ ಬಗ್ಗೆ ಟ್ರೂಡೋ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರೊಂದಿಗೆ ಮಾತನಾಡಿದ್ದಾರೆ. ಬಳಿಕವಷ್ಟೇ ಶಂಕಿತ ವಸ್ತುವನ್ನು ಹೊಡೆದುರುಳಿಸಲು ಆದೇಶಿಸಲಾಗಿತ್ತು.

ಇದನ್ನೂ ಓದಿ:ಚೀನಾದಿಂದ ಸಾರ್ವಭೌಮತ್ವಕ್ಕೆ ಧಕ್ಕೆಯಾದಲ್ಲಿ ಕಠಿಣ​ ಕ್ರಮ: ಯುಎಸ್​ ಅಧ್ಯಕ್ಷ ಜೋ ಬೈಡೆನ್​

"ಹೊಡೆದು ಹಾಕಿರುವ ಶಂಕಿತ ವಸ್ತುವನ್ನು ಗುರುತಿಸಿಲ್ಲ ಎಂದು ಟ್ರೂಡೋ ಹೇಳಿದ್ದಾರೆ. ಆದರೆ ಸೇನೆಗೆ ಮಾಹಿತಿ ಇದೆ. ತಕ್ಷಣ ವಿವರಗಳನ್ನು ಬಹಿರಂಗಪಡಿಸಿಲ್ಲ" ಎಂದು ಎನ್​ಒಆರ್​ಎಡಿ ವಕ್ತಾರ ಮೇಜ್​ ಒಲಿವಿಯರ್​ ಗ್ಯಾಲೆಂಟ್​ ತಿಳಿಸಿದ್ದಾರೆ. ಎಫ್​-22 ಫೈಟರ್​ ಜೆಟ್​ಗಳು ಏಳು ದಿನಗಳಲ್ಲಿ ಅಮೆರಿಕ ಮತ್ತು ಕೆನಡಾದ ಮೇಲಿನ ವಾಯುಪ್ರದೇಶದಲ್ಲಿ ಮೂರು ಶಂಕಿತ ವಸ್ತುವನ್ನು ಹೊಡೆದುರುಳಿಸಿವೆ. ನಿಖರವಾಗಿ ಇದು ಏನು, ಯಾಕಾಗಿ ಈ ಭಾಗಗಳಲ್ಲಿ ಸುಳಿದಾಡುತ್ತಿದೆ ಮತ್ತು ಯಾರು ಕಳುಹಿಸಿದ್ದಾರೆ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಮೆರಿಕದಲ್ಲಿ ಮೊದಲಿಗೆ ಹೊಡೆದು ಹಾಕಿದ್ದ ಶಂಕಿತ ವಸ್ತುವನ್ನು ಚೀನಾದ ಸ್ಪೈ ಬಲೂನ್​ ಎಂದು ನಂಬಲಾಗಿತ್ತು. ಆದರೆ ಉಳಿದ ಇನ್ನೆರಡು ಯಾವುದೆಂದು ಗುರುತಿಸಲಾಗಿಲ್ಲ.

ಕೆನಡಾದಲ್ಲಿ ಹೊಡೆದುರುಳಿಸಲಾದ ಶಂಕಿತ ವಸ್ತು ಕಡಿಮೆ ಜನಸಂದಣಿ ಪ್ರದೇಶವಾದ ಯುಕಾನ್​ನಲ್ಲಿ ಕಂಡುಬಂದಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್​ ಕಿರ್ಬಿ ಅವರು, ಅಮೆರಿಕದ ಅಲಾಸ್ಕಾದಲ್ಲಿ ಒಂದು ಕಾರು ಗಾತ್ರದ ವಸ್ತುವನ್ನು ಹೊಡೆದು ಹಾಕಲಾಗಿದೆ ಎಂದು ಹೇಳಿದ ಒಂದು ದಿನದ ನಂತರ ಈ ದಾಳಿ ನಡೆದಿದೆ. ಅದರಲ್ಲಿ ಕಣ್ಗಾವಲು ಉಪಕರಣವಿದೆಯೇ, ಎಲ್ಲಿಂದ ಬಂತು ಮತ್ತು ಯಾವ ಉದ್ದೇಶ ಹೊಂದಿದೆ ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ. "ಈ ರೀತಿಯ ಶಂಕಿತ ವಸ್ತುಗಳು ಕಂಡುಬರುತ್ತಿರುವುದು ಚೀನಾ ನಡೆಸುತ್ತಿರುವ ದೊಡ್ಡ ಕಣ್ಗಾವಲು ಕಾರ್ಯಕ್ರಮದ ಒಂದು ಭಾಗ" ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್​ ಹೇಳಿದೆ. "ಇತ್ತೀಚಿನ ಚೀನಾದ ಬಲೂನ್​ಗಳು ಐದು ಖಂಡಗಳ ಡಜನ್​ಗಟ್ಟಲೆ ರಾಷ್ಟ್ರಗಳ ಮೇಲೆ ಹಾರಿವೆ" ಎಂದು ಅಮೆರಿಕ ತಿಳಿಸಿದೆ.

ಇದನ್ನೂ ಓದಿ:ಪ್ರಬಲ ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ : 21 ಸಾವಿರಕ್ಕೂ ಅಧಿಕ ಮಂದಿ ಬಲಿ.. ಆಹಾರಕ್ಕಾಗಿ ಬದುಕುಳಿದವರ ಪರದಾಟ

ABOUT THE AUTHOR

...view details