ವಾಷಿಂಗ್ಟನ್(ಅಮೆರಿಕ): ಪೂರ್ವ ಸಿರಿಯಾದಲ್ಲಿ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಬೆಂಬಲಿತ ಗುಂಪುಗಳು ಬಳಸುವ ಸೌಲಭ್ಯದ ವಿರುದ್ಧ ಯುನೈಟೆಡ್ ಸ್ಟೇಟ್ಸ್ (ಯುಎಸ್‌ಎ) ಆತ್ಮರಕ್ಷಣಾ ವೈಮಾನಿಕ ದಾಳಿ ನಡೆಸಿದೆ ಎಂದು ಶ್ವೇತಭವನ ಗುರುವಾರ ಹೇಳಿದೆ.
ಇರಾಕ್ ಮತ್ತು ಸಿರಿಯಾದಲ್ಲಿನ ಅಮೆರಿಕ ಮತ್ತು ಒಕ್ಕೂಟದ ನೆಲೆಗಳ ವಿರುದ್ಧ ಐಆರ್‌ಜಿಸಿ ಮತ್ತು ಸಂಯೋಜಿತ ಗುಂಪುಗಳು ನಡೆಸಿದ ಇತ್ತೀಚಿನ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ವೈಮಾನಿಕ ದಾಳಿ ನಡೆಸಲಾಯಿತು ಎಂದು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಒಲಿವಿಯಾ ಡಾಲ್ಟನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. "ಅಧ್ಯಕ್ಷ ಜೋ ಬೈಡನ್ ಅವರು ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಅಂಗಸಂಸ್ಥೆ ಗುಂಪುಗಳು ಬಳಸುವ ಸೌಲಭ್ಯದ ವಿರುದ್ಧ ಪೂರ್ವ ಸಿರಿಯಾದಲ್ಲಿ ಸ್ವಯಂ-ರಕ್ಷಣಾ ವೈಮಾನಿಕ ದಾಳಿ ನಡೆಸಲು ಯುಎಸ್ ಮಿಲಿಟರಿಗೆ ನಿರ್ದೇಶಿಸಿದ್ದಾರೆ" ಎಂದು ಡಾಲ್ಟನ್ ಹೇಳಿದರು.
ಐಸಿಸ್ ಅನ್ನು ಸೋಲಿಸುವ ಕಾರ್ಯಾಚರಣೆಯ ಭಾಗವಾಗಿ ಇರಾಕ್ ಮತ್ತು ಸಿರಿಯಾದಲ್ಲಿರುವ ಯುಎಸ್ ಪಡೆಗಳ ಮೇಲೆ ದಾಳಿ ಮಾಡಲು ನೇರವಾಗಿ ಜವಾಬ್ದಾರರಾಗಿರುವ ಈ ಗುಂಪುಗಳನ್ನು ಕುಗ್ಗಿಸುವ ಗುರಿಯಿಂದ ಯುಎಸ್ ಈ ದಾಳಿ ನಡೆದಿದೆ. ಯುನೈಟೆಡ್ ಸ್ಟೇಟ್ಸ್ ಸರ್ಕಾರವು ನಮ್ಮ ಜನರನ್ನು ಮತ್ತು ನಮ್ಮ ಸೌಲಭ್ಯಗಳನ್ನು ರಕ್ಷಿಸಲು ಮತ್ತಷ್ಟು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧ ಎಂದು ಅವರು ತಿಳಿಸಿದರು.