ಕರ್ನಾಟಕ

karnataka

ETV Bharat / international

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತಾವಾಸದ ಮೇಲೆ ಖಲಿಸ್ತಾನಿಗಳ ದಾಳಿ: ಅಮೆರಿಕ ಖಂಡನೆ - ಈಟಿವಿ ಭಾರತ ಕನ್ನಡ

ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಲಂಡನ್​ನಲ್ಲಿನ ಭಾರತೀಯ ಹೈಕಮಿಷನ್​ ಕಟ್ಟಡದ ಮೇಲೆ ಖಲಿಸ್ತಾನಿ ಧ್ವಜ ಹಾರಿಸಿರುವ ಬೆನ್ನಲ್ಲೇ ಭಾನುವಾರ ಸ್ಯಾನ್​ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದ ಮೇಲೆ ದಾಳಿ ನಡೆಸಿದ್ದರು.

us-condemns-attack-on-indian-consulate-in-san-francisco
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತಾವಾಸ ಮೇಲೆ ದಾಳಿ : ವಿಧ್ವಂಸಕ ಕೃತ್ಯ ಸ್ವೀಕಾರಾರ್ಹವಲ್ಲ ಎಂದ ಅಮೆರಿಕಾ

By

Published : Mar 21, 2023, 9:51 AM IST

ವಾಷಿಂಗ್ಟನ್​ (ಅಮೆರಿಕ) :ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಜಗತ್ತಿನ ಹಲವೆಡೆ ಭಾರತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಸಂಘಟನೆಯ ಬೆಂಬಲಿಗರು ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋ ಭಾರತೀಯ ದೂತಾವಾಸದ ಮೇಲೆ ದಾಳಿ ನಡೆಸಿದ್ದಾರೆ. ಭಾನುವಾರ ಲಂಡನ್​​ನ ಭಾರತೀಯ ಹೈಕಮಿಷನ್​​ಲ್ಲಿರುವ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ, ಖಲಿಸ್ತಾನಿ ಧ್ವಜ ಹಾರಿಸಿದ್ದರು. ಈ ಭದ್ರತಾ ಲೋಪಕ್ಕಾಗಿ ಭಾರತವು ಬ್ರಿಟನ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಇದಾದ ಬಳಿಕ ಭಾನುವಾರ ಪ್ರತ್ಯೇಕತಾವಾದಿಗಳ ಗುಂಪೊಂದು ಸ್ಯಾನ್​ ಫ್ರಾನ್ಸಿಸ್ಕೋದಲ್ಲಿನ ದೂತಾವಾಸದ ಮೇಲೆ ದಾಳಿ ಮಾಡಿದೆ. ಇದನ್ನು ಅಮೆರಿಕ ಖಂಡಿಸಿದ್ದು, ಇದು ಸಂಪೂರ್ಣವಾಗಿ ಸ್ವೀಕಾರವಲ್ಲ ಎಂದು ಹೇಳಿದೆ.

ಖಲಿಸ್ತಾನಿ ಪರ ಘೋಷಣೆ ಕೂಗಿದ ಪ್ರತಿಭಟನಾಕಾರರು ಪೊಲೀಸರು ನಿರ್ಮಿಸಿದ್ದ ತಾತ್ಕಾಲಿಕ ಭದ್ರತಾ ತಡೆಗೋಡೆಗಳನ್ನು ಮುರಿದು ಸ್ಯಾನ್‌ ಫ್ರಾನ್ಸಿಸ್ಕೋದ ಭಾರತೀಯ ದೂತಾವಾಸ ಆವರಣಕ್ಕೆ ನುಗ್ಗಿದ್ದಾರೆ. ಅಲ್ಲಿ ಎರಡು ಖಲಿಸ್ತಾನಿ ಧ್ವಜಗಳನ್ನು ಸ್ಥಾಪಿಸಿದ್ದಾರೆ. ಕೂಡಲೇ ದೂತಾವಾಸದ ಸಿಬ್ಬಂದಿ ಧ್ವಜ ತೆರವುಗೊಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರ ಗುಂಪು ದೂತಾವಾಸದ ಆವರಣ ಪ್ರವೇಶಿಸಿ ಬಾಗಿಲು ಮತ್ತು ಕಿಟಕಿಗಳಿಗೆ ಕಬ್ಬಿಣದ ರಾಡ್‌ಗಳಿಂದ ಹಾನಿ ಮಾಡಿದ್ದಾರೆ.

ಶ್ವೇತಭವನದ ಕಾರ್ಯತಂತ್ರದ ಸಂವಹನಗಳ ರಾಷ್ಟ್ರೀಯ ಭದ್ರತಾ ಮಂಡಳಿಯ ಸಂಯೋಜಕ ಜಾನ್ ಕಿರ್ಬಿ ಪ್ರತಿಕ್ರಿಯಿಸಿ, "ಈ ವಿಧ್ವಂಸಕ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದಾರೆ. "ನಮ್ಮ ವಿದೇಶಾಂಗ ಇಲಾಖೆಯು ರಾಜತಾಂತ್ರಿಕ ಭದ್ರತಾ ಸೇವೆಯು ಸ್ಥಳೀಯ ಅಧಿಕಾರಿಗಳೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಿದೆ. ನಾನು ಸ್ಯಾನ್ ಫ್ರಾನ್ಸಿಸ್ಕೊ ​​ಪೊಲೀಸರ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಆದರೆ ರಾಜತಾಂತ್ರಿಕ ಭದ್ರತಾ ಸೇವೆಯು ಸ್ಥಳೀಯ ಅಧಿಕಾರಿಗಳೊಂದಿಗೆ ತನಿಖೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ವಿದೇಶಾಂಗ ಇಲಾಖೆಯು ಹಾನಿಯನ್ನು ಸರಿಪಡಿಸಲು ಬೇಕಾದ ಕ್ರಮ ಕೈಗೊಳ್ಳುತ್ತದೆ" ಎಂದು ಇದೇ ವೇಳೆ ಹೇಳಿದ್ದಾರೆ.

"ಕೃತ್ಯದ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದ ಮೇಲಿನ ದಾಳಿಯನ್ನು ಅಮೆರಿಕ​ ಖಂಡಿಸುತ್ತದೆ. ರಾಜತಾಂತ್ರಿಕ ಸೌಲಭ್ಯಗಳ ವಿರುದ್ಧದ ಹಿಂಸಾಚಾರ ಶಿಕ್ಷಾರ್ಹ ಅಪರಾಧ. ಇಲ್ಲಿನ ಭದ್ರತೆ, ಸುರಕ್ಷತೆಯನ್ನು ಮತ್ತು ಇಲ್ಲಿ ಕೆಲಸ ಮಾಡುವ ರಾಜತಾಂತ್ರಿಕರನ್ನು ರಕ್ಷಿಸುವುದಕ್ಕೆ ನಮ್ಮ ಮೊದಲ ಆದ್ಯತೆ" ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಅಮೆರಿಕ-ಭಾರತ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ ಈ ಘಟನೆಯನ್ನು ಖಂಡಿಸಿದ್ದು," ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳನ್ನು ಕ್ಷಮಿಸುವುದಿಲ್ಲ ಮತ್ತು ಸಹಿಸುವುದಿಲ್ಲ. ರಾಜತಾಂತ್ರಿಕರು ಮತ್ತು ದೂತಾವಾಸ ಸಿಬ್ಬಂದಿ ಬಾಹ್ಯ ಹಾನಿ ಮತ್ತು ಬೆದರಿಕೆಗಳಿಂದ ಮುಕ್ತವಾದ ಸುರಕ್ಷಿತ ಮತ್ತು ಶಾಂತಿಯುತ ಕೆಲಸ ಮಾಡುವ ಹಕ್ಕು ಹೊಂದಲು ಅರ್ಹರಾಗಿದ್ದಾರೆ" ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ಲಂಡನ್‌ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ತ್ರಿವರ್ಣ ಧ್ವಜ ಕೆಳಗಿಳಿಸಿ ಖಲಿಸ್ತಾನಿಗಳ ಅಟ್ಟಹಾಸ!

ABOUT THE AUTHOR

...view details