ವಾಷಿಂಗ್ಟನ್(ಅಮೆರಿಕ):ಉಕ್ರೇನ್‌ನಲ್ಲಿ ಯುದ್ಧ ಮುಂದುವರೆದಿದೆ. ಫಿನ್‌ಲ್ಯಾಂಡ್ ಮತ್ತು ಸ್ವೀಡನ್ಗೆ ರಷ್ಯಾ ಆಗಾಗ ನ್ಯಾಟೋ ಪಡೆಯನ್ನು ಸೇರದಂತೆ ಎಚ್ಚರಿಕೆಯನ್ನೂ ಕೂಡಾ ನೀಡುತ್ತಿದೆ. ಆದರೆ, ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ದೇಶಗಳಿಗೆ ಈಗ ಅಡಕತ್ತರಿಯಲ್ಲಿ ಸಿಲುಕಿದ ಅನುಭವವಾಗುತ್ತಿದೆ. ಹೌದು, ಜೂನ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ನ್ಯಾಟೋ ಸೇರುವ ಬಗ್ಗೆ ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ನಿರ್ಧಾರವನ್ನು ಅಮೆರಿಕ ನಿರೀಕ್ಷಿಸುತ್ತಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಗುರುವಾರ ಹೇಳಿದ್ದಾರೆ.
ಎರಡೂ ದೇಶಗಳನ್ನು ನ್ಯಾಟೋಗೆ ಸೇರಿಸಿಕೊಳ್ಳಬೇಕೆಂಬ ಮಾತು ತುಂಬಾ ದಿನಗಳಿಂದ ಸಕ್ರಿಯವಾಗಿದೆ. ನ್ಯಾಟೋ ಶೃಂಗಸಭೆ ಶೀಘ್ರದಲ್ಲೇ ಬರಲಿದೆ. ಎರಡೂ ರಾಷ್ಟ್ರಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುವ ನಿರೀಕ್ಷೆಯಿದೆ ಎಂದು ಶಾಸಕಾಂಗ ಸಮಿತಿಯ ವಿಚಾರಣೆಯ ಸಂದರ್ಭದಲ್ಲಿ ಆಂಟೋನಿ ಬ್ಲಿಂಕೆನ್ ಪ್ರಶ್ನೆಯೊಂದಕ್ಕೆ ಈ ರೀತಿಯ ಸ್ಪಷ್ಟನೆ ನೀಡಿದ್ದಾರೆ.