ಕರ್ನಾಟಕ

karnataka

ETV Bharat / international

ವಲಸಿಗರಿಗೆ ಕೆಲಸದ ಅನುಮತಿ ಕಾರ್ಡ್​​ಗಳ ಅವಧಿ ವಿಸ್ತರಿಸಿದ ಅಮೆರಿಕ ಸರ್ಕಾರ - ಎಚ್​​-1ಬಿ ವೀಸಾ ಅವಧಿ ವಿಸ್ತರಣೆ

ಅಮೆರಿಕಕ್ಕೆ ಕೆಲಸಕ್ಕಾಗಿ ವಲಸೆ ಹೋದವರಿಗೆ ಅಮೆರಿಕ ಸರ್ಕಾರ ಖುಷಿ ಸುದ್ದಿ ನೀಡಿದೆ. ಅವರು ಕೆಲಸದ ಅನುಮತಿ ಕಾಲಾವಧಿಯಿಂದ 180 ದಿನಗಳು ಅಂದರೆ ಒಂದೂವರೆ ವರ್ಷ ವಿಸ್ತರಣೆ ಮಾಡಿದೆ. ಇದರಿಂದ ಭಾರತ ಸೇರಿ ಇತರೆ ದೇಶಗಳ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

extension of Employment Authorisation Cards
ಕಾರ್ಡ್​​ಗಳ ಅವಧಿ ವಿಸ್ತರಿಸಿದ ಅಮೆರಿಕ ಸರ್ಕಾರ

By

Published : May 4, 2022, 5:15 PM IST

ವಾಷಿಂಗ್ಟನ್ (ಅಮೆರಿಕ): ವಲಸಿಗರ ವೀಸಾದ ಕಾಲಾವಧಿಯನ್ನು ಅಮೆರಿಕ ಸರ್ಕಾರ ವಿಸ್ತರಿಸಿದೆ. ಗ್ರೀನ್ ಕಾರ್ಡ್‌ಗಳನ್ನು ಬಯಸುವವರು ಮತ್ತು ಪತಿ-ಪತ್ನಿಯ ಎಚ್​​-1ಬಿ ವೀಸಾ ಸೇರಿ ಕೆಲ ವಲಸಿಗರಿಗೆ ಕೆಲಸದ ಪರವಾನಗಿಯನ್ನು ಹೆಚ್ಚುವರಿ 18 ತಿಂಗಳವರೆಗೆ ಬಳಸಲು ಅನುಮತಿಸಲಾಗಿದೆ. ಇದರಿಂದ ಅಮೆರಿಕದಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರಿಗೆ ಅನುಕೂಲವಾಗಿದೆ.

ಗ್ರೀನ್ ಕಾರ್ಡ್ ಅಂದರೆ ಅಧಿಕೃತವಾಗಿ ಅನುಮತಿ ವಾಸದ ಕಾರ್ಡ್​​ ಎಂದೇ ಕರೆಯಲ್ಪಡುತ್ತದೆ. ಇದು ವಲಸಿಗರಿಗೆ ನೀಡಲಾದ ದಾಖಲೆಯಾಗಿದ್ದು, ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸುವ ಸವಲತ್ತು ನೀಡಲಾಗಿದೆ ಎಂಬುದಕ್ಕೆ ಇದು ಒಂದು ಸಾಕ್ಷಿ ಅಥವಾ ದಾಖಲೆಯಾಗಿದೆ. ಜೋ ಬೈಡನ್ ಸರ್ಕಾರದ ಈ ಘೋಷಣೆಯ ಇಂದಿನಿಂದಲೇ (ಮೇ 4) ಜಾರಿಗೆ ಬಂದಿದೆ. ಹೆಚ್ಚುವರಿ ಈ 180 ದಿನಗಳೊಂದಿಗೆ ಈ ಕಾರ್ಡ್​​ಗಳ ಅವಧಿ 540 ದಿನಗಳಿಗೆ ಸ್ವಯಂಪ್ರೇರಿತವಾಗಿ ವಿಸ್ತರಣೆಯಾಗಲಿದೆ ಎಂದು ಗೃಹ ಭದ್ರತೆ ಇಲಾಖೆ ಹೇಳಿದೆ.

ಅಮೆರಿಕದ ಈ ಕ್ರಮದಿಂದ ಸುಮಾರು 87,000 ವಲಸಿಗರಿಗೆ ತಕ್ಷಣಕ್ಕೆ ಅನುಕೂಲವಾಗಿದೆ. 30 ದಿನಗಳಲ್ಲಿ ಕಾರ್ಡ್​​​ ಅವಧಿ ಮುಗಿಯುವುದು ತಪ್ಪಲಿದೆ. ಅಲ್ಲದೇ, ಒಟ್ಟಾರೆಯಾಗಿ 4.20 ಲಕ್ಷ ಜನರಿಗೆ ಇದರಿಂದ ಸಹಾಯವಾಗಲಿದೆ. ಈ ದೊಡ್ಡ ಸಂಖ್ಯೆಯ ಜನರಿಗೆ ಕೆಲಸದ ಪರವಾನಗಿ ನವೀಕರಿಸಲು ಸಾಧ್ಯವಾಗಲಿದೆ.

ABOUT THE AUTHOR

...view details