ನ್ಯೂಯಾರ್ಕ್ (ಅಮೆರಿಕಾ):ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಮಾನವೀಯ ವಿರಾಮ, ಗಾಜಾಕ್ಕೆ ಹೆಚ್ಚಿನ ನೆರವು ಒದಗಿಸಲು ಕರೆ ನೀಡುವ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ಶುಕ್ರವಾರ ಅಂಗೀಕರಿಸಿದೆ. ಯುದ್ಧಕ್ಕೆ ಶಾಶ್ವತ ವಿರಾಮ ಹಾಕಲು ಪೂರಕ ವಾತಾವರಣ ಸೃಷ್ಟಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿರ್ಣಯ ಹೇಳುತ್ತದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಅಮೆರಿಕದ ಗೈರು ಹಾಜರಾತಿ ಮಧ್ಯೆಯೇ ಗಾಜಾಗೆ ನೆರವು ನೀಡುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿರ್ಣಯ ಅಂಗೀಕಾರ ಮಾಡಿದೆ. ಯುಎಸ್ ಮತ್ತೊಮ್ಮೆ ಗಾಜಾಕ್ಕೆ ನೆರವು ನೀಡುವ ನಿರ್ಣಯದ ಮೇಲೆ ಮತ ಚಲಾಯಿಸಲು ವಿಳಂಬ ಮಾಡಿದೆ. ಜೊತೆಗೆ ನಿರ್ಣಯವನ್ನು ದುರ್ಬಲಗೊಳಿಸಲು ಕೂಡ ಅಮೆರಿಕ ನಿರಾಕರಿಸಿದೆ. ಪರಿಷ್ಕೃತ ಕರಡು ಪ್ರಸ್ತಾವನೆ ಮೇಲೆ ಯುಎನ್ ಸದಸ್ಯರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ.
ಯುಎಸ್ ರಾಯಭಾರಿ ಲಿಂಡಾ ಥಾಮಸ್ ಗ್ರೀನ್‌ಫೀಲ್ಡ್ ಅವರು, ಈ ನಿರ್ಣಯವನ್ನು ಅಮೆರಿಕ ಬೆಂಬಲಿಸುತ್ತದೆ. ಆದರೆ, ಪ್ರಸ್ತಾವವನ್ನು ದುರ್ಬಲಗೊಳಿಸಲಾಗುತ್ತಿದೆ ಎಂಬುದು ಸರಿಯಲ್ಲ. ಕರಡು ನಿರ್ಣಯವು ಅತ್ಯಂತ ಪ್ರಬಲವಾಗಿದೆ. ಅರಬ್ ದೇಶಗಳ ಕಡೆಯಿಂದ ಸಂಪೂರ್ಣ ಬೆಂಬಲ ಲಭಿಸಿದೆ. ಗಾಜಾಕ್ಕೆ ಮಾನವೀಯ ನೆರವಿನ ಅಗತ್ಯತೆಯನ್ನು ಒತ್ತಿ ಹೇಳುತ್ತದೆ ಎಂದು ತಿಳಿಸಿದ್ದಾರೆ.