ಬೆಂಗಳೂರು:ಕೊರೊನಾ ಕಾರಣದಿಂದಾಗಿ ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಕಡಿತಗೊಂಡಿತ್ತು. ಇದೀಗ ಸಾಂಕ್ರಾಮಿಕ ತಗ್ಗಿದ ಕಾರಣ ಬೆಂಗಳೂರಿನಿಂದ ಹಲವು ದೇಶಗಳಿಗೆ ವಿಮಾನಯಾನ ಸೇವೆ ಮರುಸ್ಥಾಪಿಸಲಾಗಿದೆ. ಅದರಂತೆ ವರ್ಷಾಂತ್ಯದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಯುನೈಟೆಡ್ ಏರ್‌ಲೈನ್ಸ್ ಸಂಸ್ಥೆಯು ವಿಮಾನಯಾನ ಶುರು ಮಾಡಲಿದೆ.
ಯುನೈಟೆಡ್ ಏರ್‌ಲೈನ್ಸ್ 2022 ರ ಕೊನೆಯಲ್ಲಿ ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ದೈನಂದಿನ ವಿಮಾನಯಾನವನ್ನು ಪ್ರಾರಂಭಿಸಲಿದೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿಕೆಯಲ್ಲಿ ತಿಳಿಸಿದೆ.
ಆಸ್ಟ್ರೇಲಿಯಾದ ರಾಷ್ಟ್ರೀಯ ವಾಹಕ ಕ್ವಾಂಟಾಸ್ ಕೂಡ ಸೆಪ್ಟೆಂಬರ್ 14 ರಿಂದ ಸಿಡ್ನಿಗೆ ವಾರಕ್ಕೆ ನಾಲ್ಕು ವಿಮಾನಗಳನ್ನು ಪ್ರಾರಂಭಿಸಲಿದೆ. ಟೆಲ್ ಅವಿವ್‌ನ (ಏರ್ ಇಂಡಿಯಾ) ಎರಡು ವಿಮಾನಗಳು ವಾರಕ್ಕೆ ಎರಡು ಬಾರಿ, ಅಮೆರಿಕನ್ ಏರ್ಲೈನ್ಸ್ನ ಸಿಯಾಟಲ್ ದೈನಂದಿನ ವಿಮಾನಗಳನ್ನು ಸಹ ಮುಂದಿನ ದಿನಗಳಲ್ಲಿ ಯೋಜಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗ ಹರಡುವ ಕೆಲವು ತಿಂಗಳ ಮೊದಲು ಪ್ರಾರಂಭಿಸಲಾದ ಈ ಹೊಸ ಮಾರ್ಗಗಳನ್ನು ಈಗಾಗಲೇ ಮರು ಸಂಪರ್ಕಿಸಲಾಗಿದೆ.