ಲಂಡನ್: ಲಂಡನ್ ಸಂಸತ್ ಭವನದ ಮುಂದೆ ಇರುವ ವಿಶ್ವಮಾನವ ಸಂದೇಶ ಸಾರಿದ ಸಮಾಜ ಸುಧಾರಕ, ಕ್ರಾಂತಿಯೋಗಿ ಬಸವೇಶ್ವರರ ಪ್ರತಿಮೆಗೆ ಕೇಂದ್ರದ ಐಟಿ, ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ರಾಜೀವ್ ಚಂದ್ರಶೇಖರ್ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಂಡನ್ನಲ್ಲಿ ಬಸವಣ್ಣನ ತತ್ವ ಹಾಗೂ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದಕ್ಕೆ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ಗೆ ಧನ್ಯವಾದ ತಿಳಿಸಿದರು.