ಯುನೈಟೆಡ್ ನೇಷನ್ಸ್( ಅಮೆರಿಕ):ಚೀನಾ ಹಾಗೂ ರಷ್ಯಾ ಉತ್ತರ ಕೊರಿಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುವ ಅಮೆರಿಕ ನಿರ್ಧಾರಕ್ಕೆ ವಿಶ್ವಸಂಸ್ಥೆಯಲ್ಲಿ ತಡೆಯೊಡ್ಡಿರುವ ತಮ್ಮ ವಿಟೋ ಅಧಿಕಾರವನ್ನು ಬುಧವಾರ ಮೊದಲ ಸಾಮಾನ್ಯ ಸಭೆಯಲ್ಲಿ ಸಮರ್ಥಿಸಿಕೊಂಡಿವೆ.
ಮಿತ್ರರಾಷ್ಟ್ರಗಳೂ ಕೂಡ ಯುಎಸ್ನ ನಿರ್ಬಂಧಗಳನ್ನು ಹೇರುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕೊರಿಯನ್ ಪರ್ಯಾಯ ದ್ವೀಪದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗೆ ಅಮೆರಿಕವೇ ಕಾರಣ ಎಂದು ದೂಷಿಸಿದ್ದಾರೆ. ಸದ್ಯಕ್ಕೆ ಉತ್ತರ ಕೊರಿಯಾ ಮತ್ತು ಬಿಡೆನ್ ಆಡಳಿತದ ಮಾತುಕತ ನಡೆಸಿ, ಸಮಸ್ಯೆ ಪರಿಹರಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಸುಮಾರು 70 ದೇಶಗಳು ಬಹಿರಂಗ ಸಭೆಯಲ್ಲಿ ಮಾತನಾಡಲು ಸಹಿ ಹಾಕಿದ್ದವು. ಬುಧವಾರ ಸಾಮಾನ್ಯ ಸಭೆಯಲ್ಲಿ, ಖಾಯಂ ಸದಸ್ಯ ಅಥವಾ ವೀಟೋ ಚಲಾಯಿಸುವ ಸದಸ್ಯರಿಗೆ ಸ್ಪೀಕರ್ ಪಟ್ಟಿಯಲ್ಲಿ ಆದ್ಯತೆ ನೀಡಲಾಗಿತ್ತು.
ಭಾನುವಾರ ಒಂದೇ ದಿನ ಎಂಟು ಕ್ಷಿಪಣಿಗಳನ್ನು ಹಾರಿಸುವ ಮೂಲಕ ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಒಡ್ಡಿರುವ ಉತ್ತರ ಕೊರಿಯಾದ ಮೇಲೆ ಇನ್ನಷ್ಟು ನಿರ್ಬಂಧ ಜಾರಿಗೊಳಿಸುವ ನಿರ್ಣಯವನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಆದರೆ, ಈ ನಿರ್ಣಯಕ್ಕೆ ರಷ್ಯಾ ಮತ್ತು ಚೀನಾ ತಮ್ಮ ವಿಟೋ ಅಧಿಕಾರ ಬಳಸಿ ತಡೆಯೊಡ್ಡಿತ್ತು.
ಉತ್ತರ ಕೊರಿಯಾ ಈ ಕ್ಷಿಪಣಿ ಪರೀಕ್ಷೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ಸಂದರ್ಭ ನಡೆಸಿತ್ತು. ಇದನ್ನು ಖಂಡಿಸಿದ್ದ ಅಮೆರಿಕ, ಆ ದೇಶದ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವಸಂಸ್ಥೆಯಲ್ಲಿ ನಿರ್ಣಯ ಮಂಡಿಸಿತ್ತು. ಆಗ 13 ಸದಸ್ಯರ ಬೆಂಬಲ ದೊರೆತರೂ ರಷ್ಯಾ ಮತ್ತು ಚೀನಾದ ಬೆಂಬಲ ನೀಡದೇ ತಡೆಯೊಡ್ಡಿದ್ದವು.
7ನೇ ಪರಮಾಣು ಪರೀಕ್ಷೆಗೆ ಕೊರಿಯಾ ಸಿದ್ಧತೆ:ಉತ್ತರ ಕೊರಿಯಾ ಸಂಭಾವ್ಯ ಏಳನೇ ಪರಮಾಣು ಪರೀಕ್ಷೆಗೆ ಸಿದ್ಧತೆಗಳನ್ನು ಅಂತಿಮಗೊಳಿಸುತ್ತಿರುವುದರಿಂದ ದಾಖಲೆ ಸಂಖ್ಯೆಯ ಉಡಾವಣೆಗಳು ನಡೆದಿವೆ. ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಪೂರ್ವಾಪೇಕ್ಷೆಗಳಿಲ್ಲದೆ ನಾವು ಪ್ಯೊಂಗ್ಯಾಂಗ್‌ನೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಹೇಳಿದ್ದಾರೆ.
ಕೊರಿಯನ್ ಪರ್ಯಾಯ ದ್ವೀಪದ ಸಂಪೂರ್ಣ ಅಣ್ವಸ್ತ್ರೀಕರಣವನ್ನು ಸಾಧಿಸಲು ನಿರ್ಬಂಧಗಳನ್ನು ಸಡಿಲಿಸುವ ಬಗ್ಗೆ ಚರ್ಚಿಸಲು ಅಮೆರಿಕ ಸಿದ್ಧ. ಆದರೆ ದುರಾದೃಷ್ಟವಶಾತ್, ಡಿಪಿಆರ್‌ಕೆ ಕೇವಲ ಪ್ರದೇಶ ಮಾತ್ರವಲ್ಲದೇ ಜಗತ್ತನ್ನು ಬೆದರಿಸುವ ಉಡಾವಣೆಗಳ ಮೂಲಕ ಪ್ರತಿಕ್ರಿಯಿಸಿದೆ ಎಂದು ಯುಎಸ್ ಉಪ ರಾಯಭಾರಿ ಜೆಫ್ರಿ ಡೆ ಲಾರೆಂಟಿಸ್ ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ತಿಳಿಸಿದ್ದಾರೆ.
ಅಮೆರಿಕ ವಿರುದ್ಧ ಹರಿಹಾಯ್ದ ಚೀನಾ: ವಿಶ್ವಸಂಸ್ಥೆಯ ಚೀನಾ ರಾಯಭಾರಿ ಝಾಂಗ್ ಜುನ್ ಮಾತನಾಡಿ, ಯುನೈಟೆಡ್ ಸ್ಟೇಟ್ಸ್ DPRK ತೆಗೆದುಕೊಂಡ ಸಕಾರಾತ್ಮಕ ಕ್ರಮಗಳನ್ನು ನಿರ್ಲಕ್ಷಿಸಿ, ತಮ್ಮ ಹಳೆಯ ಹಾದಿಯನ್ನೇ ಅನುಸಿರಿಸಿದೆ. ಇದು ಅಮೆರಿಕ ಮೇಲಿನ ನಂಬಿಕೆ ಇನ್ನಷ್ಟು ಕುಸಿಯುವಂತೆ ಮಾಡಿದ್ದು, ಮಾತುಕತೆ ಮುಂದುವರಿಸುವುದು ಅಸಾಧ್ಯ.
ಟ್ರಂಪ್ ಆಡಳಿತ ಸಮಯದಲ್ಲಿ ಡಿಪಿಆರ್‌ಕೆ ಹಾಗೂ ಯುಎಸ್ ನಡುವೆ ನಡೆದ ಸಂವಾದದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಕಡೆಗಣಿಸಿರುವುದು ಪರ್ಯಾಯ ದ್ವೀಪದಲ್ಲಿನ ಉದ್ವಿಗ್ನೆತೆಗೆ ಕಾರಣವಾಗಿರಬಹುದು. ಪರಿಸ್ಥಿತಿ ಎಲ್ಲಿಗೆ ತಲುಪುತ್ತದೆ ಎಂಬುದು ಅಮೆರಿಕ ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಅವಲಂಬನೆಯಾಗಿದೆ ಎಂದು ಆರೋಪಿಸಿದರು.
ಭದ್ರತಾ ಖಾತರಿ ನೀಡುವಲ್ಲಿ ವಿಫಲ- ರಷ್ಯಾ:ವಿಶ್ವಸಂಸ್ಥೆಯಲ್ಲಿರುವರಷ್ಯಾದ ಉಪ ರಾಯಭಾರಿ ಅನ್ನಾ ಎವಿಸ್ಟಿಗ್ನೀವಾ ಮಾತನಾಡಿ, ಡಿಪಿಆರ್‌ಕೆ ವಿರುದ್ಧದ ಹೊಸ ನಿರ್ಬಂಧಗಳು ಕೊನೆಗೊಳ್ಳಲಿವೆ. ಪ್ರಸ್ತುತ ನಿರ್ಬಂಧಗಳು ಈ ಪ್ರದೇಶದಲ್ಲಿ ಭದ್ರತೆಯನ್ನು ಖಾತರಿಪಡಿಸುವಲ್ಲಿ ವಿಫಲವಾಗಿವೆ. ಉತ್ತರ ಕೊರಿಯಾದ ಸಮಸ್ಯೆಯನ್ನು ಗಂಭೀರವಾಗಿ ಪರಿಹರಿಸುವ ಯಾರಾದರೂ, ನಿರ್ಬಂಧಗಳನ್ನು ಹೇರಿ ಪ್ಯೊಂಗ್ಯಾಂಗ್ ಅನ್ನು ನಿಶ್ಯಸ್ತ್ರಗೊಳಿಸಬಹುದು ಎನ್ನುವ ನಿರೀಕ್ಷೆ ನಿರರ್ಥಕ ಎಂಬುದನ್ನು ಬಹಳ ಹಿಂದೆಯೇ ಸಾಬೀತಾಗಿದೆ ಎಂದರು.
ನನ್ನ ಮೇಲಿನ ಎಲ್ಲ ನಿರ್ಬಂಧಗಳು ಕಾನೂನು ಬಾಹಿರ:ಉತ್ತರ ಕೊರಿಯಾದ ಯುಎನ್ ರಾಯಭಾರಿ ಕಿಮ್ ಸಾಂಗ್, ಕೊರಿಯನ್ ಪರ್ಯಾಯ ದ್ವೀಪದಲ್ಲಿ ಮತ್ತು ಪ್ರದೇಶದಲ್ಲಿ ಯಾವುದೇ ಸಂಭಾವ್ಯ ಭದ್ರತಾ ಬಿಕ್ಕಟ್ಟು ಇಲ್ಲ. ತನ್ನ ದೇಶದ ಆತ್ಮರಕ್ಷಣೆಯ ಹಕ್ಕನ್ನು ಉಲ್ಲಂಘಿಸುವ ಎಲ್ಲ ನಿರ್ಬಂಧಗಳನ್ನು ಮತ್ತು ಪ್ರಸ್ತಾವಿತ ಅಮೆರಿಕದ ನಿರ್ಣಯವನ್ನು ಕಾನೂನುಬಾಹಿರ ಎಂದು ಖಂಡಿಸಿದ್ದಾರೆ.
ಇದನ್ನೂ ಓದಿ:ಅಮೆರಿಕ - ದ.ಕೊರಿಯಾ ನೌಕಾ ಸಮರಾಭ್ಯಾಸ.. ಎಂಟು ಕ್ಷಿಪಣಿಗಳ ಸರಣಿ ಪರೀಕ್ಷೆ ನಡೆಸಿದ ಉ.ಕೊರಿಯಾ!