ಕೀವ್:ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಬ್ಬ 'ಭಯೋತ್ಪಾದಕ’ ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ವಿಶ್ವಸಂಸ್ಥೆಯಿಂದ ರಷ್ಯಾವನ್ನು ಹೊರಹಾಕುವಂತೆ ಅವರು ಒತ್ತಾಯಿಸಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಉಕ್ರೇನ್ ನೆಲದಲ್ಲಿ ರಷ್ಯಾದ ಆಕ್ರಮಣಕಾರರ ಕ್ರಮಗಳನ್ನು ತನಿಖೆ ಮಾಡಲು ಮತ್ತು ದೇಶವನ್ನು ಹೊಣೆಗಾರರನ್ನಾಗಿ ಮಾಡಲು ಅಂತಾರಾಷ್ಟ್ರೀಯ ನ್ಯಾಯಮಂಡಳಿಯನ್ನು ಸ್ಥಾಪಿಸುವಂತೆ ಅವರು ಒತ್ತಾಯಿಸಿದರು.
ಜನರ ಹತ್ಯೆಯನ್ನು ತಡೆಯಲು ನಾವು ತುರ್ತಾಗಿ ಕಾರ್ಯನಿರ್ವಹಿಸಬೇಕಾಗಿದೆ. ಇಲ್ಲದಿದ್ದರೆ ರಷ್ಯಾದ "ಭಯೋತ್ಪಾದಕ ಚಟುವಟಿಕೆ" ಇತರ ಯುರೋಪಿಯನ್ ರಾಷ್ಟ್ರಗಳು ಮತ್ತು ಏಷ್ಯಾಕ್ಕೆ ಹರಡುತ್ತದೆ. ಬಾಲ್ಟಿಕ್ ರಾಜ್ಯಗಳು, ಪೋಲೆಂಡ್, ಮೊಲ್ಡೊವಾ ಮತ್ತು ಖಜಕಿಸ್ತಾನ್ ಅನ್ನು ಪ್ರತ್ಯೇಕಿಸುತ್ತದೆ ಎಂದು ಇದೇ ವೇಳೆ ಝೆಲೆನ್ಸ್ಕಿ ಕಳವಳ ವ್ಯಕ್ತಪಡಿಸಿದ್ದಾರೆ.
ವಿಶ್ವಸಂಸ್ಥೆಯಿಂದ ಹೊರಹಾಕುವಂತೆ ಒತ್ತಾಯ: 193 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆಯಿಂದ ರಷ್ಯಾವನ್ನು ಹೊರಹಾಕುವಂತೆ ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ. ಯುಎನ್ ಚಾರ್ಟರ್ನ ಆರ್ಟಿಕಲ್ 6 ಅನ್ನು ಉಲ್ಲೇಖಿಸಿ, "ಪ್ರಸ್ತುತ ಚಾರ್ಟರ್ನಲ್ಲಿರುವ ತತ್ವಗಳನ್ನು ನಿರಂತರವಾಗಿ ಉಲ್ಲಂಘಿಸಿದ ಸದಸ್ಯರನ್ನು ಶಿಫಾರಸಿನ ಮೇರೆಗೆ ಸಾಮಾನ್ಯ ಸಭೆಯ ಸಂಘಟನೆಯಿಂದ ಹೊರಹಾಕಬಹುದು" ಎಂದು ಹೇಳಿದ್ದಾರೆ.
ಉಚ್ಚಾಟನೆ ಅಸಾಧ್ಯ: "ಆದಾಗ್ಯೂ, ರಷ್ಯಾದ ಉಚ್ಚಾಟನೆಯು ವಾಸ್ತವಿಕವಾಗಿ ಅಸಾಧ್ಯವಾಗಿದೆ. ವಿಶ್ವಸಂಸ್ಥೆಯ ಶಾಸ್ವತ ಸದಸ್ಯನಾಗಿರುವ ರಷ್ಯಾವನ್ನು ವಿಶ್ವಸಂಸ್ಥೆಯಿಂದ ಹೊರ ಹಾಕುವುದು ಅಸಾಧ್ಯವಾಗಿದೆ. ಏಕೆಂದರೆ ರಷ್ಯಾಗೆ ವಿಶ್ವಸಂಸ್ಥೆಯಲ್ಲಿ ವಿಟೋ ಅಧಿಕಾರ ಇರುವುದರಿಂದ ಈ ನಿರ್ಧಾರ ಕೈಗೊಳ್ಳುವುದು ಅಸಾಧ್ಯವಾಗಿದೆ.
ಇದನ್ನೂ ಓದಿ:ರಷ್ಯಾದ ಮೇಲೆ ಗರಿಷ್ಠ ನಿರ್ಬಂಧ ಹೇರಿ.. ದಾವೋಸ್ ಸಭೆಯಲ್ಲಿ ವಿಶ್ವ ರಾಷ್ಟ್ರಗಳಿಗೆ ಉಕ್ರೇನ್ ಅಧ್ಯಕ್ಷರ ಮನವಿ