ಜರ್ಮನಿ: G-7 ನ ಹಣಕಾಸು ಮಂತ್ರಿಗಳು ಉಕ್ರೇನ್ - ರಷ್ಯಾ ಯುದ್ಧ ಮತ್ತು ಕೊರೊನಾ ಪರಿಣಾಮಗಳನ್ನು ಎದುರಿಸುತ್ತಿದ್ದು, ಜಾಗತಿಕ ಆರ್ಥಿಕತೆ ಸುಧಾರಿಸಲು ಪ್ರಮುಖ ಯೋಜನೆಗಳ ಜಾರಿಗೆ ತರಲು ಮುಂದಾಗಿದ್ದಾರೆ.
ನಿರಾಶ್ರಿತರ ಬಿಕ್ಕಟ್ಟು, ಹೆಚ್ಚಿನ ಹಣದುಬ್ಬರ, ಯುದ್ಧ ಮತ್ತು ಹವಾಮಾನ ಬದಲಾವಣೆಯಿಂದ ಉಲ್ಬಣಗೊಂಡ ಆಹಾರ ಅಭದ್ರತೆ ಮತ್ತು ಬಹುವರ್ಷದ ಸಾಂಕ್ರಾಮಿಕವು ಈ ನಾಯಕರ ಗಮನ ಸೆಳೆದಿದೆ. ಜರ್ಮನಿಯ ಹಣಕಾಸು ಸಚಿವ ಕ್ರಿಶ್ಚಿಯನ್ ಲಿಂಡ್ನರ್ನ ಸಭೆಯ ಆತಿಥ್ಯ ವಹಿಸಿದ್ದು, ರಷ್ಯಾದ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಕ್ರೇನ್‌ಗೆ ಹೆಚ್ಚಿನ ಹಣವನ್ನು ನೀಡಲು ವಿಶ್ವದ ಪ್ರಮುಖ ಪ್ರಜಾಪ್ರಭುತ್ವಗಳು ಒಪ್ಪಿಕೊಳ್ಳಬಹುದು ಎಂದು ಆಶಿಸಿದ್ದಾರೆ.
ಜರ್ಮನಿಯ ಕೊಯೆನಿಗ್ಸ್‌ವಿಂಟರ್‌ನಲ್ಲಿ ಜಿ-7 ಹಣಕಾಸು ಮಂತ್ರಿಗಳ ಸಭೆಗೆ ಮುಂಚಿತವಾಗಿ ಲಿಂಡ್ನರ್ ಸುದ್ದಿಗಾರರ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಉಕ್ರೇನ್‌ಗೆ ಹೆಚ್ಚಿನ ಹಣಕಾಸಿನ ಸಹಾಯ ಬೇಕಾಗಬಹುದು ಎಂದಿದ್ದಾರೆ.
ಈ G-7 ಸಭೆಯಲ್ಲಿ ನಿಧಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ನಂಬಿದ್ದೇನೆ. ಪರಿಣಾಮ ಮುಂದಿನ ದಿನಗಳಲ್ಲಿ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಆಹಾರ ಅಭದ್ರತೆ ಬಗ್ಗೆ ಪ್ರಮುಖ ಚರ್ಚೆ:ಈ ಸಭೆ ಆರಂಭವಾಗುವ ಮುನ್ನವೇ ಆಹಾರದ ಅಭದ್ರತೆ ಪ್ರಮುಖ ಚರ್ಚೆಯಾಗಿದೆ. ಬುಧವಾರ ಯುಎಸ್ ಮತ್ತು ಇತರ ಅಧಿಕಾರಿಗಳು ಹೆಚ್ಚುತ್ತಿರುವ ದುರ್ಬಲವಾದ ವಿಶ್ವ ಆರ್ಥಿಕತೆಯನ್ನು ಎದುರಿಸುತ್ತಿರುವ ಅಪಾಯವನ್ನು ಪರಿಹರಿಸಲು ಬಹು-ಶತಕೋಟಿ ಡಾಲರ್ ಯೋಜನೆಯನ್ನು ಪ್ರಸ್ತಾಪ ಮಾಡಿದ್ದರು. ಇದಕ್ಕೆ ಜಾಗತಿಕ ಅಭಿವೃದ್ಧಿ ಬ್ಯಾಂಕ್‌ಗಳು ಮತ್ತು ಇತರ ಗುಂಪುಗಳು ಈ ಪ್ರಯತ್ನದಲ್ಲಿ ಸಹಕರಿಸಿವೆ.