ಕರ್ನಾಟಕ

karnataka

ETV Bharat / international

ಉಕ್ರೇನ್​​​ನಲ್ಲಿ ಶಾಂತಿ ಸ್ಥಾಪಿಸಬೇಕಾದರೆ ಮಾತುಕತೆಯೊಂದೇ ಪರಿಹಾರ: ಬೈಡನ್​​

ನಿನ್ನೆಗೆ ಉಕ್ರೇನ್​ ಮತ್ತು ರಷ್ಯಾ ಯುದ್ಧ ಆರಂಭವಾಗಿ 100 ದಿನ ಕಳೆದಿವೆ . ಅಮೆರಿಕ ಎರಡು ರಾಷ್ಟ್ರಗಳಿಗೆ ಸಲಹೆವೊಂದನ್ನು ನೀಡಿದೆ. ಉಕ್ರೇನ್​ನಲ್ಲಿ ಶಾಂತಿ ಸ್ಥಾಪಿಸಬೇಕಾದರೆ ಒಪ್ಪಂದದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತವಾಗಿದೆ ಎಂದು ಬೈಡನ್​ ಹೇಳಿದ್ದಾರೆ.

Ukraine settlement needed for peace says Biden, Russia and Ukraine war, America President Joe Biden news, ಶಾಂತಿಗಾಗಿ ಉಕ್ರೇನ್​ಗೆ ಒಪ್ಪಂದದ ಅಗತ್ಯವಿದೆ ಎಂದ ಬೈಡನ್, ರಷ್ಯಾ ಮತ್ತು ಉಕ್ರೇನ್ ಯುದ್ಧ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸುದ್ದಿ,
ಶಾಂತಿಗಾಗಿ ಉಕ್ರೇನ್​ಗೆ ಒಪ್ಪಂದದ ಅಗತ್ಯವಿದೆ

By

Published : Jun 4, 2022, 8:07 AM IST

ರೆಹೋಬೋತ್ ಬೀಚ್:ಉಕ್ರೇನ್‌ನಲ್ಲಿ ರಷ್ಯಾದ ಯುದ್ಧ ಕೊನೆಗೊಳಿಸಲು ಮಾತುಕತೆ ಮೂಲಕ ಇತ್ಯರ್ಥ ಪಡಿಸುವುದು ಅಗತ್ಯ ಎಂದು ಅಧ್ಯಕ್ಷ ಜೋ ಬೈಡನ್ ಅಭಿಪ್ರಾಯಪಟ್ಟಿದ್ದಾರೆ. ಯುದ್ಧವನ್ನು ಕೊನೆಗೊಳಿಸಲು ಮತ್ತು ಈ ಪ್ರದೇಶದಲ್ಲಿ ಶಾಂತಿ ತರಲು ಉಕ್ರೇನ್ ತನ್ನ ಕೆಲವು ಪ್ರದೇಶವನ್ನು ರಷ್ಯಾಕ್ಕೆ ಬಿಟ್ಟುಕೊಡಬೇಕೇ ಎಂದು ಪ್ರಶ್ನಿಸಿದಾಗ, ಉಕ್ರೇನ್ ಇಲ್ಲದೇ ಯುನೈಟೆಡ್ ಸ್ಟೇಟ್ಸ್ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಬೈಡನ್​ ಉತ್ತರಿಸಿದರು.

ಓದಿ:ಶಸ್ತ್ರಾಸ್ತ್ರಗಳನ್ನು ಖರೀದಿಸಲು ಕನಿಷ್ಠ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸಬೇಕು : ಜೋ ಬೈಡನ್​​

ಇದು ಅವರ ಪ್ರದೇಶವಾಗಿದೆ. ಅವರು ಏನು ಮಾಡಬೇಕು.. ಏನು ಮಾಡಬಾರದು.. ಎಂದು ನಾನು ಅವರಿಗೆ ಹೇಳಲು ಹೋಗುವುದಿಲ್ಲ. ಆದರೆ, ಕೆಲವು ಹಂತದಲ್ಲಿ ಇಲ್ಲಿ ಸಂಧಾನ ಸಭೆ ಅಥವಾ ಮಾತುಕತೆ ಮೂಲಕ ಯುದ್ಧವನ್ನು ಕೊನೆಗೊಳಿಸಬೇಕು ಎಂದು ನನಗೆ ತೋರುತ್ತದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು.

ಓದಿ:ರಷ್ಯಾದ ಬ್ಯುಸಿನೆಸ್​ ಸೆಂಟರ್​​ಗೆ ಬೆಂಕಿ: ಜನರ ರಕ್ಷಣಾ ಕಾರ್ಯಕ್ಕೆ 3 ಹೆಲಿಕಾಪ್ಟರ್‌ ಬಳಕೆ

ಅಂತಹ ಒಪ್ಪಂದವು ಹೇಗಿರುತ್ತದೆ ಎಂದು ತನಗೆ ತಿಳಿದಿಲ್ಲ. ಆದರೆ, ಉಕ್ರೇನಿಯನ್ನರು ತಮ್ಮನ್ನು ರಕ್ಷಿಸಿಕೊಳ್ಳಲು ಅಮೆರಿಕ ಸಹಾಯ ಮಾಡುವುದನ್ನು ಮುಂದುವರಿಸುತ್ತದೆ ಎಂದು ಬೈಡನ್​ ತಮ್ಮ ಮನದಾಳದ ಮಾತುಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡರು.


ABOUT THE AUTHOR

...view details