ಕರ್ನಾಟಕ

karnataka

ETV Bharat / international

ನಾಳೆ ಉಕ್ರೇನ್- ರಷ್ಯಾ ನಡುವೆ ಮತ್ತೊಂದು ಸುತ್ತಿನ ಶಾಂತಿ ಮಾತುಕತೆ - ಉಕ್ರೇನ್ ಮತ್ತು ರಷ್ಯಾ ಸಂಘರ್ಷ

ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಮುಂದುವರೆದಿದ್ದು, ಶಾಂತಿ ಮಾತುಕತೆ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪುನಾರಂಭವಾಗಲಿದೆ ಎಂದು ಉಕ್ರೇನ್ ನಿಯೋಗದ ಮುಖ್ಯಸ್ಥರು ತಿಳಿಸಿದ್ದಾರೆ.

Ukraine, Russia talks resume Friday by video
ಉಕ್ರೇನ್ ಮತ್ತು ರಷ್ಯಾ ನಡುವಿನ ಶಾಂತಿ ಮಾತುಕತೆ ಮುಂದುವರಿಕೆ

By

Published : Mar 31, 2022, 2:31 PM IST

ಇಸ್ತಾಂಬುಲ್(ಟರ್ಕಿ): ಶಾಂತಿ ಒಪ್ಪಂದಕ್ಕಾಗಿ ಉಕ್ರೇನ್ ಮತ್ತು ರಷ್ಯಾ ನಡುವಿನ ಮಾತುಕತೆ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪುನಾರಂಭವಾಗಲಿದೆ ಎಂದು ಉಕ್ರೇನ್ ನಿಯೋಗದ ಮುಖ್ಯಸ್ಥರು ತಿಳಿಸಿದ್ದಾರೆ. ಈ ಮಾತುಕತೆಯಲ್ಲಿ ಡೇವಿಡ್ ಅರಾಖಮಿಯಾ ಅವರು ಭಾಗಿಯಾಗಿದ್ದಾರೆ. ಡೇವಿಡ್ ಅರಾಖಮಿಯಾ ಉಕ್ರೇನಿಯನ್ ನಿಯೋಗದ ಸದಸ್ಯರಾಗಿದ್ದು, ಉಕ್ರೇನ್​ ಸಂಸತ್ತಿನಲ್ಲಿ ಆಡಳಿತ ಪಕ್ಷದ ಒಂದು ಗುಂಪನ್ನು ಸಹ ಮುನ್ನಡೆಸುತ್ತಿದ್ದಾರೆ.

ಎರಡು ವಾರಗಳ ಹಿಂದೆ ಮಾತುಕತೆ ನಡೆದಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಮತ್ತೊಮ್ಮೆ ನಿಯೋಗಗಳು ಇಸ್ತಾಂಬುಲ್‌ನಲ್ಲಿ ಭೇಟಿಯಾಗಿವೆ. ಈಗಾಗಲೇ ನ್ಯಾಟೋಗೆ ಸೇರಲು ತನ್ನ ಪ್ರಯತ್ನ ಕೈಬಿಡುವುದನ್ನು ತಟಸ್ಥವೆಂದು ಉಕ್ರೇನ್ ಘೋಷಿಸಲು ನಿರ್ಧರಿಸಿದೆ. ರಷ್ಯಾದ ರಾಜತಾಂತ್ರಿಕರು ಉಕ್ರೇನ್ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ತೈಲ ಬೆಲೆ ನಿಯಂತ್ರಣಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೊಸ ಪ್ಲಾನ್‌..!

ABOUT THE AUTHOR

...view details