ಕೀವ್:ಜರ್ಮನಿಯಿಂದ ಸರಬರಾಜು ಮಾಡಲಾದ ಮಾರ್ಸ್ II ಮಲ್ಟಿಪಲ್ ರಾಕೆಟ್ ಲಾಂಚರ್‌ಗಳು ಉಕ್ರೇನ್‌ಗೆ ಆಗಮಿಸಿವೆ ಎಂದು ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವ್ಯವಸ್ಥೆಗಳಿಗಾಗಿ ಜರ್ಮನಿಗೆ ಮತ್ತು ವೈಯಕ್ತಿಕವಾಗಿ ನನ್ನ ಸಹೋದ್ಯೋಗಿ ರಕ್ಷಣಾ ಸಚಿವ ಕ್ರಿಸ್ಟೀನ್ ಲ್ಯಾಂಬ್ರೆಕ್ಟ್ ಅವರಿಗೆ ಧನ್ಯವಾದಗಳು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಲ್ಯಾಂಬ್ರೆಕ್ಟ್ ಕಳೆದ ವಾರ ಮೂರು ಕ್ಷಿಪಣಿ ಲಾಂಚರ್‌ಗಳನ್ನು ಈಗಾಗಲೇ ಘೋಷಿಸಿದ್ದರು. ಅದರ ಜೊತೆಗೆ ಜರ್ಮನಿಯು ಈಗಾಗಲೇ ಉಕ್ರೇನ್‌ಗೆ ಲೆಪರ್ಡ್ ಆ್ಯಂಟಿ ಏರ್ಕ್ರಾಫ್ಟ್ ಟ್ಯಾಂಕ್‌ಗಳು ಮತ್ತು ಸ್ವಯಂ ಚಾಲಿತ ಹೊವಿಟ್ಜರ್ 2000 ಫಿರಂಗಿ ವ್ಯವಸ್ಥೆಗಳಂತಹ ಭಾರಿ ಶಸ್ತ್ರಾಸ್ತ್ರಗಳನ್ನು ತಲುಪಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.