ಕರ್ನಾಟಕ

karnataka

ETV Bharat / international

ಉಕ್ರೇನ್‌ನ ಬಖ್ಮುತ್ ನಗರ ವ್ಯಾಗ್ನರ್ ಖಾಸಗಿ ಸೇನೆಯ ವಶಕ್ಕೆ: ರಷ್ಯಾಧ್ಯಕ್ಷ ಪುಟಿನ್ ಅಭಿನಂದನೆ - ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ರಷ್ಯಾ ಸೈನಿಕರ ಸಹಾಯದಿಂದ ವ್ಯಾಗ್ನರ್ ಎಂಬ ಖಾಸಗಿ ಸೈನ್ಯವು ಬಖ್ಮುತ್ ನಗರವನ್ನು ವಶಪಡಿಸಿಕೊಂಡಿದೆ ಎಂದು ರಷ್ಯಾ ಹೇಳಿದೆ.

Wagner claims control of Bakhmut
ಬಖ್ಮುತ್ ನಗರ ವ್ಯಾಗ್ನರ್ ಗುಂಪಿನ ವಶಕ್ಕೆ: ಪುಟಿನ್ ಅಭಿನಂದನೆ

By

Published : May 21, 2023, 11:34 AM IST

Updated : May 21, 2023, 11:51 AM IST

ಮಾಸ್ಕೋ: ರಷ್ಯಾ ದೇಶದ ಸೈನಿಕರ ಬೆಂಬಲದೊಂದಿಗೆ ಖಾಸಗಿ ಮಿಲಿಟರಿ ಸಂಸ್ಥೆಯಾದ ವ್ಯಾಗ್ನರ್ ಸೇನೆಯ ಪಡೆಗಳು ಉಕ್ರೇನ್ ನಗರವಾದ ಬಖ್ಮುತ್ ಅನ್ನು ವಶಪಡಿಸಿಕೊಂಡಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಭಾನುವಾರ ಮುಂಜಾನೆ ತಿಳಿಸಿದೆ. ಟೆಲಿಗ್ರಾಮ್ ಚಾನೆಲ್‌ನಲ್ಲಿ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಹೇಳಿಕೆ ನೀಡಿದ ಸುಮಾರು ಎಂಟು ಗಂಟೆಗಳ ನಂತರ ರಕ್ಷಣಾ ಸಚಿವಾಲಯ ಈ ಮಾಹಿತಿ ನೀಡಿತು. ಇದೇ ಸಮಯದಲ್ಲಿ ಉಕ್ರೇನಿಯನ್ ಅಧಿಕಾರಿಗಳು ಬಖ್ಮುತ್ ನಗರದಲ್ಲಿ ಹೋರಾಟ ಮುಂದುವರೆಸಿರುವುದಾಗಿ ಹೇಳಿದ್ದಾರೆ.

ಪುಟಿನ್ ಅಭಿನಂದನೆ: ಪೂರ್ವ ಉಕ್ರೇನ್‌ನಲ್ಲಿ ಬಖ್ಮುತ್ ನಗರ ವಶಪಡಿಸಿಕೊಂಡ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವ್ಯಾಗ್ನರ್ ಖಾಸಗಿ ಮಿಲಿಟರಿ ಮತ್ತು ರಷ್ಯಾದ ಪಡೆಗಳ ಆಕ್ರಮಣ ತಂಡಗಳನ್ನು ಅಭಿನಂದಿಸಿದ್ದಾರೆ. ಆರ್ಟಿಯೊಮೊವ್ಸ್ಕ್ ಅನ್ನು ಸ್ವತಂತ್ರಗೊಳಿಸುವ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವುದರೊಂದಿಗೆ, ಅಗತ್ಯವಿರುವ ನೆರವು ನೀಡುವುದಾಗಿ ಅವರು ತಿಳಿಸಿದರು.

ಪೂರ್ವ ಉಕ್ರೇನ್‌ನಲ್ಲಿರುವ ಈ ನಗರಕ್ಕಾಗಿ ಕಳೆದ ಎಂಟು ತಿಂಗಳುಗಳಿಂದ ನಡೆಯುತ್ತಿರುವ ಈ ಸಂಘರ್ಷ ಅತ್ಯಂತ ಭೀಕರವಾಗಿದೆ. ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಶನಿವಾರ ಮಧ್ಯಾಹ್ನದ ಹೊತ್ತಿಗೆ ನಗರವು ಸಂಪೂರ್ಣ ರಷ್ಯಾದ ನಿಯಂತ್ರಣಕ್ಕೆ ಬಂದಿತು ಎಂದು ಹೇಳಿದರು. ಆದರೆ ಉಕ್ರೇನಿಯನ್ ಉಪ ರಕ್ಷಣಾ ಸಚಿವ ಹನ್ನಾ ಮಲಿಯಾರ್ ಅವರು ಹೋರಾಟ ಮುಂದುವರೆದಿದ್ದು, ಪರಿಸ್ಥಿತಿ ಗಂಭೀರವಾಗಿದೆ. ನಮ್ಮ ಸೈನಿಕರು ಈ ಪ್ರದೇಶದಲ್ಲಿ ಕೆಲವು ಕೈಗಾರಿಕಾ ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ನಿಯಂತ್ರಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ರಷ್ಯಾ ಪಡೆಗಳು ಬಖ್ಮುತ್ ಮೇಲೆ ಹಿಡಿತ ಸಾಧಿಸಿದರೆ, ಅವರು ಇನ್ನೂ ಉಕ್ರೇನಿಯನ್ ನಿಯಂತ್ರಣದಲ್ಲಿರುವ ಡೊನೆಟ್ಸ್ಕ್ ಪ್ರದೇಶದ ಉಳಿದ ಭಾಗವನ್ನೂ ವಶಪಡಿಸಿಕೊಳ್ಳುವ ಬೃಹತ್ ಕಾರ್ಯ ಮಾಡಬೇಕಾಗುತ್ತದೆ. ಇದರಲ್ಲಿ ಹಲವಾರು ಭದ್ರವಾದ ಪ್ರದೇಶಗಳು ಸೇರಿವೆ. ಬಖ್ಮುತ್ ಯುದ್ಧದಲ್ಲಿ ಯಾವ ಕಡೆಯವರು ಹೆಚ್ಚಿನ ಬೆಲೆ ತೆತ್ತಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಷ್ಯಾ ಮತ್ತು ಉಕ್ರೇನ್ ಎರಡೂ ಪಡೆಗಳಲ್ಲಿ ಅಧಿಕ ಸಾವು-ನೋವುಗಳ ಸಂಭವಿಸಿರುವ ಶಂಕೆಯಿದೆ. ಈ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಮಾರ್ಚ್‌ನಲ್ಲಿ ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಬಖ್ಮುತ್ ನಗರದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದರು. ಅದರ ಪತನವು ರಷ್ಯಾದ ಒಪ್ಪಂದಕ್ಕೆ ಅಂತಾರಾಷ್ಟ್ರೀಯ ಬೆಂಬಲವನ್ನು ಒಟ್ಟುಗೂಡಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಕೀವ್​ ಸ್ವೀಕಾರಾರ್ಹವಲ್ಲದ ರಾಜಿ ಮಾಡಬೇಕಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದರು.

ಬಖ್ಮುತ್ ವಶ ಉಕ್ರೇನ್‌ಗೆ ಹೊಡೆತವಾಗಿದೆ ಮತ್ತು ರಷ್ಯಾಕ್ಕೆ ಕೆಲವು ಯುದ್ಧತಂತ್ರದ ಪ್ರಯೋಜನಗಳನ್ನು ನೀಡುತ್ತದೆ. ಯುದ್ಧದ ಫಲಿತಾಂಶಕ್ಕೆ ನಿರ್ಣಾಯಕವೆಂದು ಸಾಬೀತುಪಡಿಸುವುದಿಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ. ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರು ನಗರವನ್ನು ವಶಪಡಿಸಿಕೊಳ್ಳುವುದರಿಂದ ರಷ್ಯಾ ತನ್ನ ಆಕ್ರಮಣವನ್ನು ಡೊನೆಟ್ಸ್ಕ್ ಪ್ರದೇಶಕ್ಕೆ ಮುಂದುವರೆಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ. ಇದು ಸೆಪ್ಟೆಂಬರ್‌ನಲ್ಲಿ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ನಾಲ್ಕು ಉಕ್ರೇನಿಯನ್ ಪ್ರಾಂತ್ಯಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:ಹಿರೋಷಿಮಾದಲ್ಲಿ ಪ್ರಧಾನಿ ಮೋದಿ - ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಡುವೆ ದ್ವಿಪಕ್ಷೀಯ ಸಭೆ?

Last Updated : May 21, 2023, 11:51 AM IST

ABOUT THE AUTHOR

...view details