ಲಂಡನ್:ಕನ್ಸರ್ವೇಟಿವ್ ಪಕ್ಷದ ಸಹೋದ್ಯೋಗಿಯನ್ನು ಅವಮಾನಿಸಿದ ಪ್ರಕರಣದಲ್ಲಿ ಗೇವಿನ್ ವಿಲಿಯಮ್ಸನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪ್ರತಿಪಕ್ಷಗಳಿಂದ ಒತ್ತಡಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
"ಗೇವಿನ್ ಅವರು ಪ್ರಧಾನಿ ಸುನಕ್ ಅವರ ಆತ್ಮೀಯ ಗೆಳೆಯರಾಗಿದ್ದಾರೆ. ಸುನಕ್ ಅವರು ಮಂತ್ರಿಗಳನ್ನು ಆಯ್ಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಪ್ರತಿ ವಾರ ಸದನದಲ್ಲಿ ನಡೆಯುವ ಪ್ರಧಾನಮಂತ್ರಿಗಳ ಪ್ರಶ್ನೋತ್ತರ ಸಂದರ್ಭದಲ್ಲಿ ಈ ಕುರಿತು ಚರ್ಚಿಸಲಾಗುವುದು" ಎಂದು ಲೇಬರ್ ಪಕ್ಷದ ನಾಯಕ ಸರ್ ಕೀರ್ ಸ್ಟಾರ್ಮರ್ ತಿಳಿಸಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಜೇಕ್ ಬೆರ್ರಿ ಅವರು ತಮ್ಮ ವಿರುದ್ಧದ ಮಾನನಷ್ಟ ದೂರಿನ ಬಗ್ಗೆ ರಿಷಿ ಸುನಕ್ ಅವರಿಗೆ ಸಚಿವ ಸ್ಥಾನವನ್ನು ನೀಡುವ ಒಂದು ದಿನದ ಮೊದಲೇ ತಿಳಿಸಿದ್ದರು. ವಿಲಿಯಮ್ಸನ್ ಮಂಗಳವಾರ ರಾತ್ರಿ ರಾಜೀನಾಮೆ ನೀಡಿದರು.
ಅವರನ್ನು ಸಚಿವರನ್ನಾಗಿ ನೇಮಿಸಿದ್ದಕ್ಕೆ ವಿಷಾದಿಸುತ್ತೇನೆ. ಜೀವನದಲ್ಲಿ ನೈತಿಕತೆ ಅತ್ಯಂತ ಮುಖ್ಯ. ವಿಲಿಯಮ್ಸನ್ ಅವರ ರಾಜೀನಾಮೆಯನ್ನು ನಾನು ಬಹಳ ದುಃಖದಿಂದ ಅಂಗೀಕರಿಸುತ್ತೇನೆ. ಕಾರ್ಯದಲ್ಲಿ ನಿಮ್ಮ ನಿಷ್ಠೆ ಮತ್ತು ವೈಯಕ್ತಿಕ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ರಿಷಿ ಸುನಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹಲೋ ವಿಜಯ್ ಮಾಮ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ವಿಡಿಯೋ ಕಾಲ್ ಚಾಟಿಂಗ್.. ಯಾರೀ ಮಾಮಾ!