ಕೀವ್(ಉಕ್ರೇನ್) :ಯುದ್ಧ ಪೀಡಿತ ಉಕ್ರೇನ್‌ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭೇಟಿ ನೀಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೂಡಿ ಬ್ರಿಟನ್ ಪ್ರಧಾನಿ ರಾಜಧಾನಿ ಕೀವ್ನಲ್ಲಿ ಪರಿಶೀಲನೆ ನಡೆಸಿದರಲ್ಲದೆ, ಉಕ್ರೇನ್ ನಾಗರಿಕರನ್ನು ಮಾತನಾಡಿಸಿ ಧೈರ್ಯ ತುಂಬಿದರು. ಜಾನ್ಸನ್ ರಷ್ಯಾ ದಾಳಿ ನಂತರ ಉಕ್ರೇನ್‌ಗೆ ಇತ್ತೀಚಿಗೆ ಭೇಟಿ ನೀಡಿದ ಯುರೋಪಿಯನ್ ನಾಯಕರಾಗಿದ್ದಾರೆ.
ಉಕ್ರೇನಿಯನ್ ಪಟ್ಟಣಗಳಲ್ಲಿ ಪತ್ತೆಯಾದ ನಾಗರಿಕರ ಮೃತದೇಹಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಖ್ಯಾತಿಯನ್ನು ಶಾಶ್ವತವಾಗಿ ಕಲುಷಿತಗೊಳಿಸಿದೆ. ಬುಕಾ ಮತ್ತು ಇರ್ಪಿನ್‌ನಂತಹ ಸ್ಥಳಗಳಲ್ಲಿ ಪುಟಿನ್ ಯುದ್ಧಾಪರಾಧಗಳನ್ನು ಮಾಡಿದ್ದಾರೆ.
ಇದು ಅವರ ಸರ್ಕಾರದ ಖ್ಯಾತಿಯನ್ನೂ ಕಲುಷಿತಗೊಳಿಸಿದೆ ಎಂದು ಬ್ರಿಟನ್ ಪ್ರಧಾನಿ ಜಾನ್ಸನ್ ಹೇಳಿದ್ದಾರೆ. ಅಲ್ಲದೇ, ಕೀವ್ ಮೇಲೆ ರಷ್ಯಾದ ಆಕ್ರಮಣ ಮತ್ತು ವಿರೋಧಾಭಾಸಗಳನ್ನು ಹಿಮೆಟ್ಟಿಸಿದ ಉಕ್ರೇನ್ ಬಗ್ಗೆ ಅವರು ಹೊಗಳಿದ್ದಾರೆ.
ಕೆಲವೇ ದಿನಗಳಲ್ಲಿ ಇಡೀ ಉಕ್ರೇನ್ ಅನ್ನು ಆವರಿಸಬಹುದೆಂದು ರಷ್ಯನ್ನರು ನಂಬಿದ್ದರು ಮತ್ತು ಕೆಲವೇ ಗಂಟೆಗಳಲ್ಲಿ ಕೀವ್ ಸೇನೆಗಳು ಶಸ್ತ್ರಗಳನ್ನು ತ್ಯಾಗ ಮಾಡುತ್ತಿವೆ ಎಂದೂ ಭಾವಿಸಿದ್ದರು. ಅವರ ಎಲ್ಲಾ ಉಲ್ಟಾ ಆಗಿದೆ. ಉಕ್ರೇನ್ನ ಜನತೆ ಸಿಂಹದ ರೀತಿಯ ಧೈರ್ಯವನ್ನು ತೋರಿಸಿದ್ದಾರೆ. ಜತೆಗೆ ಜಗತ್ತು ಹೊಸ ವೀರರನ್ನು ಕಂಡುಕೊಂಡಿದೆ. ಆ ವೀರರೇ ಉಕ್ರೇನ್ ಜನತೆ ಎಂದೂ ಬ್ರಿಟನ್ ಪ್ರಧಾನಿ ಬಣ್ಣಿಸಿದ್ದಾರೆ ಎಂದು ವರದಿಯಾಗಿದೆ.