ಕರ್ನಾಟಕ

karnataka

ETV Bharat / international

ಯುಎಸ್ ಏರ್‌ಶೋದಲ್ಲಿ 2 ವಿಮಾನಗಳ ಮಧ್ಯೆ ಡಿಕ್ಕಿ; 6 ಸಾವು ಶಂಕೆ- ವಿಡಿಯೋ

ಅಮೆರಿಕದ ಟೆಕ್ಸಾಸ್​ ನಗರದ ಬಳಿ ನಡೆದ ವೈಮಾನಿಕ ಪ್ರದರ್ಶನದಲ್ಲಿ 2ನೇ ವಿಶ್ವಯುದ್ಧ ಕಾಲದ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿವೆ.

Two  aircraft collide at Dallas air show
ವಿಶ್ವಯುದ್ಧ ಕಾಲದ ವಿಮಾನಗಳು ಪರಸ್ಪರ ಡಿಕ್ಕಿ

By

Published : Nov 13, 2022, 8:27 AM IST

ಡಲ್ಲಾಸ್ (ಯುಎಸ್):2ನೇವಿಶ್ವಯುದ್ಧದ ಸ್ಮರಣಾರ್ಥವಾಗಿ ನಿನ್ನೆ (ಶನಿವಾರ) ನಡೆದ ವೈಮಾನಿಕ ಪ್ರದರ್ಶನದಲ್ಲಿ ಎರಡು ವಿಮಾನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಆರು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಮೆರಿಕದ ಟೆಕ್ಸಾಸ್​ ನಗರದಲ್ಲಿ ಘಟನೆ ನಡೆಯಿತು.

ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ಬಾಂಬರ್ ಮತ್ತು ಬೆಲ್ ಪಿ-63 ಕಿಂಗ್‌ಕೋಬ್ರಾ ಎಂಬ ಯುದ್ಧವಿಮಾನಗಳು ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್‌ಪೋರ್ಟ್‌ನಲ್ಲಿ ನಡೆದ ಏರ್‌ಶೋನಲ್ಲಿ ಭಾಗಿಯಾಗಿದ್ದವು. ಮಧ್ಯಾಹ್ನ 1.20ರ ಸುಮಾರಿಗೆ ಹಾರಾಟದ ಸಂದರ್ಭದಲ್ಲಿ ಎರಡೂ ಯುದ್ಧವಿಮಾನಗಳ ರೆಕ್ಕೆಗಳು ಸ್ಪರ್ಶಿಸಿ ಅವಘಡ ಸಂಭವಿಸಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತಿಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಲಾದ ವಿಡಿಯೋದಲ್ಲಿ, B-17 ಬಾಂಬರ್ ಯುದ್ಧ ವಿಮಾನ ನೆಲದಿಂದ ನೇರವಾಗಿ ಆಕಾಶದೆತ್ತರಕ್ಕೆ ಹಾರುತ್ತಿದ್ದು ಮತ್ತೊಂದೆಡೆಯಿಂದ P-63 ಕಿಂಗ್‌ಕೋಬ್ರಾ ವಿಮಾನ ಎಡದಿಂದ ಹಾರಿ ಬಂದಿದೆ. ಬಳಿಕ ಎರಡೂ ವಿಮಾನಗಳ ನಡುವೆ ಪರಸ್ಪರ ಘರ್ಷಣೆಯಾಗಿದೆ. ಅವಘಡಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

2019ರ ಅ. 2 ರಂದು ಕನೆಕ್ಟಿಕಟ್‌ನ ವಿಂಡ್ಸರ್ ಲಾಕ್ಸ್‌ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದರು.

ಇದನ್ನೂ ಓದಿ:ದ.ಕೊರಿಯಾ ವಾಯುಪಡೆಯ ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ, ಮೂವರು ದುರ್ಮರಣ

ABOUT THE AUTHOR

...view details