ಕರ್ನಾಟಕ

karnataka

ETV Bharat / international

ಟ್ವಿಟರ್​ ಪದಗಳ ಮಿತಿ 280 ರಿಂದ 4000 ಕ್ಕೆ ಹೆಚ್ಚಳ: ಬಳಕೆದಾರರ ಪ್ರಶ್ನೆಗೆ ಹೌದು ಎಂದ ಎಲಾನ್​ ಮಸ್ಕ್​ - ಟ್ವಿಟರ್​ನ ಸಿಇಒ ಎಲಾನ್​ ಮಸ್ಕ್​

ಯಾವುದೇ ಟ್ವೀಟ್​ಗಳ ಮೇಲೆ ಟಿಪ್ಪಣಿ ಬರೆಯಬಹುದಾದ 'ಕಮ್ಯೂನಿಟಿ ನೋಟ್ಸ್​' ಎಂಬ ಹೊಸ ಆಪ್ಷನ್​ ಅನ್ನು ಟ್ವಿಟರ್​ ಭಾನುವಾರದಿಂದ ತನ್ನ ಬಳಕೆದಾರರಿಗೆ ನೀಡಿದೆ.

Twitter CEO Elon Musk
ಟ್ವಿಟರ್​ನ ಸಿಇಒ ಎಲಾನ್​ ಮಸ್ಕ್​

By

Published : Dec 12, 2022, 2:06 PM IST

ಮೈಕ್ರೋ ಬ್ಲಾಗಿಂಗ್​ ಪ್ಲಾಟ್‌ಫಾರ್ಮ್ ಟ್ವಿಟರ್​ನಲ್ಲಿ ಅಕ್ಷರಗಳ ಮಿತಿಯನ್ನು 280 ರಿಂದ 4000ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಹರಿದಾಡುತ್ತಿದ್ದ ಸುದ್ದಿಯನ್ನು ಇದೀಗ ಸ್ವತಃ ಟ್ವಿಟರ್​ನ ಸಿಇಒ ಎಲಾನ್ ಮಸ್ಕ್ ಖಚಿತಪಡಿಸಿದ್ದಾರೆ.

ಇಂದು ಎಲಾನ್​ ಮಸ್ಕ್​ ಟ್ವಿಟರ್​ನಲ್ಲಿ ತಮ್ಮ ಮೇಲೆ ಪ್ರಶ್ನೆಗಳ ದಾಳಿ ಮಾಡುವಂತೆ ಬಳಕೆದಾರರಿಗೆ ಕೇಳಿಕೊಂಡಿದ್ದು, ಈ ವೇಳೆ 'ಟ್ವಿಟ್ಟರ್ ಅಕ್ಷರಗಳನ್ನು 280 ರಿಂದ 4000ಕ್ಕೆ ಹೆಚ್ಚಿಸಲು ನಿರ್ಧರಿಸಿರುವುದು ನಿಜವೇ ಎಲಾನ್?' ಎಂದು​ ಬಳಕೆದಾದರೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಎಲಾನ್​ ಮಸ್ಕ್​ ಹೌದು ಎಂದು ಉತ್ತರಿಸಿದ್ದಾರೆ.

ಇದರ ಬೆನ್ನಲ್ಲೇ ಹಲವು ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದು, ಇದು ದೊಡ್ಡ ಸಮಸ್ಯೆಯಾಗುತ್ತದೆ. ಟ್ವಿಟರ್​ನ ಉದ್ದೇಶ ತ್ವರಿತವಾಗಿ ಸುದ್ದಿ ನೀಡುವುದು. ಒಂದು ವೇಳೆ ಅಕ್ಷರಗಳ ಮಿತಿಯನ್ನು ಹೆಚ್ಚಿಸಿದರೆ ನೈಜ ಮಾಹಿತಿ ಕಳೆದುಹೋಗುತ್ತದೆ ಎಂದು ಒಬ್ಬರು ಹೇಳಿದರೆ, 4000 ಪದಗಳೆಂದರೆ ಅದು ಪ್ರಬಂಧವಾಗುತ್ತದೆ ಟ್ವೀಟ್​ ಅಲ್ಲ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಟ್ವಿಟರ್​ ಭಾನುವಾರದಿಂದ ಎಲ್ಲಾ ಬಳಕೆದಾರರಿಗೆ 'ಕಮ್ಯೂನಿಟಿ ನೋಟ್ಸ್​' ಎನ್ನುವ ಹೊಸ ಆಪ್ಷನ್​ ಒಂದನ್ನು ನೀಡಿದ್ದು, ಕಮ್ಯೂನಿಟಿ ನೋಟ್ಸ್​ ಮೂಲಕ ಉತ್ತಮ ಮಾಹಿತಿಯುಳ್ಳ ಜಗತ್ತನ್ನು ನಿರ್ಮಿಸುವ ಗುರಿಯನ್ನು ಟ್ವಿಟರ್ ಹೊಂದಿದೆ. ಇಲ್ಲಿ ಟ್ವಿಟ್ಟರ್​ ಬಳಕೆದಾರರು ಯಾವುದೇ ಟ್ವೀಟ್​ ಮೇಲೆ ಟಿಪ್ಪಣಿಗಳನ್ನು ಬರೆಯಬಹುದು. ವಿವಿಧ ದೃಷ್ಟಿಕೋನಗಳಿಂದ ಸಾಕಷ್ಟು ಬಳಕೆದಾರರು ಅವು ಸಹಾಯಕವಾಗಿವೆ ಎಂದು ರೇಟ್ ಮಾಡಿದರೆ, ಆ ಟಿಪ್ಪಣಿಯನ್ನು ಟ್ವೀಟ್‌ನಲ್ಲಿ ಸಾರ್ವಜನಿಕವಾಗಿ ತೋರಿಸಲಾಗುತ್ತದೆ ಎಂದು ಟ್ವಿಟ್ಟರ್​ ತಿಳಿಸಿದೆ.

ಇದನ್ನೂ ಓದಿ:ಭಾರತದಲ್ಲಿ ಮಕ್ಕಳ ಲೈಂಗಿಕ ಶೋಷಣೆ, ನಗ್ನತೆಗೆ ಉತ್ತೇಜನೆ: ತಿಂಗಳಲ್ಲಿ 44 ಸಾವಿರ ಟ್ವಿಟರ್​ ಖಾತೆಗಳು ರದ್ದು

ABOUT THE AUTHOR

...view details