ಕರ್ನಾಟಕ

karnataka

ETV Bharat / international

ಒಪ್ಪಂದ ಮುರಿದ ಎಲೋನ್​ ಮಸ್ಕ್​ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾದ ಟ್ವಿಟರ್‌

ಟ್ವಿಟರ್ ಸಂಸ್ಥೆ​ ಎಲಾನ್‌ ಮಸ್ಕ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ತಯಾರಿ ನಡೆಸುತ್ತಿದೆ. ಇದಕ್ಕಾಗಿ ನ್ಯೂಯಾರ್ಕ್ ಮೂಲದ ಪ್ರತಿಷ್ಟಿತ ಕಾನೂನು ಸಂಸ್ಥೆಯನ್ನು ನೇಮಿಸಿಕೊಂಡಿದೆ.

Elon Musk and Twitter
ಎಲೋನ್​ ಮಸ್ಕ್​ ಹಾಗೂ ಟ್ವಿಟರ್​

By

Published : Jul 11, 2022, 10:00 AM IST

ವಾಷಿಂಗ್ಟನ್​:44 ಶತಕೋಟಿ ಅಮೆರಿಕನ್ ಡಾಲರ್‌ ನೀಡಿ ಸಾಮಾಜಿಕ ಮಾಧ್ಯಮ ಟ್ವಿಟರ್​ ಖರೀದಿಸುವ ಒಪ್ಪಂದಿಂದ ಹಿಂದೆ ಸರಿದಿರುವ ಟೆಸ್ಲಾ ಮತ್ತು ಸ್ಪೇಸ್​ಎಕ್ಸ್ ಸಿಇಒ ಎಲೋನ್ ಮಸ್ಕ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಟ್ವಿಟರ್​ ನಿರ್ಧರಿಸಿದೆ. ನಕಲಿ ಖಾತೆಗಳಿಗೆ ಸಂಬಂಧಿಸಿದಂತೆ ಟ್ವಿಟರ್​ ಸಂಪೂರ್ಣ ಮಾಹಿತಿ ನೀಡಿಲ್ಲ ಮತ್ತು ವಿಲೀನ ಒಪ್ಪಂದದ ಹಲವಾರು ನಿಬಂಧನೆಗಳನ್ನು ಟ್ವಿಟರ್‌ ಉಲ್ಲಂಘಿಸಿದೆ ಎಂದು ಆರೋಪಿಸಿ ಮಸ್ಕ್​ ಒಪ್ಪಂದಕ್ಕೆ ಗುಡ್​ ಬೈ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್,​ ಮಸ್ಕ್ ವಿರುದ್ಧ ಮೊಕದ್ದಮೆ ಹೂಡಲು ತಯಾರಿ ನಡೆಸುತ್ತಿದ್ದು, ನ್ಯೂಯಾರ್ಕ್ ಮೂಲದ ಪ್ರತಿಷ್ಠಿತ ಕಾನೂನು ಸಂಸ್ಥೆ ವಾಚ್‌ಟೆಲ್, ಲಿಪ್ಟನ್, ರೋಸೆನ್ ಮತ್ತು ಕ್ಯಾಟ್ಜ್ ಎಲ್‌ಎಲ್‌ಪಿಯನ್ನು ನೇಮಿಸಿಕೊಂಡಿದೆ. ಮುಂದಿನ ವಾರ ಡೆಲವೇರ್‌ನಲ್ಲಿ ಮೊಕದ್ದಮೆ ಹೂಡಲಿದೆ. ಮಸ್ಕ್ ಅವರನ್ನು ವಕೀಲರಾದ ಕ್ವಿನ್ ಇಮ್ಯಾನುಯೆಲ್ ಉರ್ಕ್ಹಾರ್ಟ್ ಮತ್ತು ಸುಲ್ಲಿವಾನ್ ಪ್ರತಿನಿಧಿಸಲಿದ್ದಾರೆ.

ಟ್ವಿಟರ್‌ ಅಧ್ಯಕ್ಷ ಬ್ರೆಟ್ ಟೇಲರ್ ಮಾತನಾಡಿ, ಟ್ವಿಟರ್ ಮಂಡಳಿ ನಿಯಮಗಳ ಪ್ರಕಾರ ಮಸ್ಕ್‌ನೊಂದಿಗಿನ ಒಪ್ಪಂದವನ್ನು ಅಂತ್ಯಗೊಳಿಸಲು ಬದ್ಧವಾಗಿದೆ. ಹಿಂದಿನ ಒಪ್ಪಂದದ ಪ್ರಕಾರ ಮುಂದೇನಾದರೂ ಖರೀದಿ ಪ್ರಕ್ರಿಯೆ ರದ್ದಾದಲ್ಲಿ 1 ಬಿಲಿಯನ್​ ಡಾಲರ್​ ವಿರಾಮ ಶುಲ್ಕವಾಗಿ ವಿಘಟನೆಯ ಶುಲ್ಕ ನೀಡಬೇಕು. ಅದರ ಆಧಾರದ ಮೇಲೆ ಮಸ್ಕ್​ ವಿರುದ್ಧ ಕಂಪೆನಿ ದಾವೆ ಹೂಡಲಿದೆ. ಜೊತೆಗೆ ಇಡೀ ಟ್ವಿಟರ್​ ಅನ್ನು ಪೂರ್ಣವಾಗಿ ಮಸ್ಕ್​ ಖರೀದಿಸಬೇಕು ಎನ್ನುವ ನಿಟ್ಟಿನಲ್ಲೇ ಕಂಪೆನಿ ಕಾನೂನಾತ್ಮಕವಾಗಿ ಹೋರಾಡಲಿದೆ. ಡೆಲವೇರ್ ಕೋರ್ಟ್ ಆಫ್ ಚಾನ್ಸೆರಿಯಲ್ಲಿ ನಾವೇ ಮೇಲುಗೈ ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಮಸ್ಕ್ ಟ್ವಿಟರ್ ಖರೀದಿಸಲು 44 ಬಿಲಿಯನ್ ಡಾಲರ್‌ಗಳ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಆದರೆ ಕಳೆದ ಮೇ ತಿಂಗಳಲ್ಲಿ ಟ್ವಿಟರ್ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಮತ್ತು ತಾತ್ಕಾಲಿಕವಾಗಿ ಒಪ್ಪಂದವನ್ನು ಸ್ಥಗಿತಗೊಳಿಸುತ್ತಿದೆ ಎಂದು ಮಸ್ಕ್ ಘೋಷಿಸಿದ್ದರು.

ಮಸ್ಕ್ ಪರ ವಕೀಲ ಮೈಕ್ ರಿಂಗ್ಲರ್, US ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ ಪತ್ರವನ್ನು ಸಲ್ಲಿಸಿ, ಮಸ್ಕ್ ವಕೀಲ ತನ್ನ ಕ್ಲೈಂಟ್ ಸುಮಾರು ಎರಡು ತಿಂಗಳ ಕಾಲ ಟ್ವಿಟರ್‌ನಲ್ಲಿ "ನಕಲಿ ಅಥವಾ ಸ್ಪ್ಯಾಮ್" ಖಾತೆಗಳ ಬಗ್ಗೆ ಮಾಹಿತಿ ಕೋರಿದ್ದರು. ಆದರೆ, ಕಂಪನಿ ಇದನ್ನು ನೀಡಲು ವಿಫಲವಾಗಿದೆ. ಅಥವಾ ಈ ಮಾಹಿತಿಯನ್ನು ಒದಗಿಸಲು ನಿರಾಕರಿಸಿದೆ. ಕೆಲವೊಮ್ಮೆ ಟ್ವಿಟ್ಟರ್, ಎಲಾನ್‌ ಮಸ್ಕ್ ಅವರ ವಿನಂತಿಗಳನ್ನು ನಿರ್ಲಕ್ಷಿಸಿದೆ, ಕೆಲವೊಮ್ಮೆ ಅದು ಅಸಮರ್ಥನೀಯವೆಂದು ತೋರುವ ಕಾರಣಗಳಿಗಾಗಿ ಅದನ್ನು ತಿರಸ್ಕರಿಸಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ :44 ಬಿಲಿಯನ್ ಡಾಲರ್​ ಟ್ವಿಟ್ಟರ್​ ಒಪ್ಪಂದದಿಂದ ಹಿಂದೆ ಸರಿದ ಎಲೋನ್​ ಮಸ್ಕ್

ABOUT THE AUTHOR

...view details