ಕರ್ನಾಟಕ

karnataka

ETV Bharat / international

ಅವಳಿ ಬಾಂಬ್ ಸ್ಫೋಟ ಘಟನೆ; 35 ಶಂಕಿತರನ್ನು ಬಂಧಿಸಿದ ಇರಾನ್ ಗುಪ್ತಚರ ಇಲಾಖೆ

ಕಾಸಿಮ್ ಸೊಲೈಮಾನಿ ಸಮಾಧಿಯ ಬಳಿ ಬಾಂಬ್ ಸ್ಫೋಟಿಸಿದ ಸಂಚಿನಲ್ಲಿ ಭಾಗಿಯಾದ ಆರೋಪದ ಮೇಲೆ ಇರಾನ್ 35 ಜನರನ್ನು ಬಂಧಿಸಿದೆ.

35 arrested over Iran twin bombings
35 arrested over Iran twin bombings

By ETV Bharat Karnataka Team

Published : Jan 12, 2024, 1:20 PM IST

ಟೆಹ್ರಾನ್ (ಇರಾನ್): ಆಗ್ನೇಯ ನಗರ ಕೆರ್ಮನ್​ನಲ್ಲಿ ಜನವರಿ 3ರಂದು ನಡೆದ ಅವಳಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ದೇಶದ ಆರು ಪ್ರಾಂತ್ಯಗಳಲ್ಲಿ ಒಟ್ಟು 35 ಜನರನ್ನು ಬಂಧಿಸಲಾಗಿದೆ ಎಂದು ಇರಾನ್ ಗುಪ್ತಚರ ಸಚಿವಾಲಯ ಪ್ರಕಟಿಸಿದೆ. ಜನವರಿ 3 ರಂದು ಜನರಲ್ ಕಾಸಿಮ್ ಸೊಲೈಮಾನಿ ಅವರ ಸಮಾಧಿಯ ಬಳಿ ಸಂಭವಿಸಿದ ಭಯೋತ್ಪಾದಕ ದಾಳಿಯ ಬಗ್ಗೆ ಸಚಿವಾಲಯ ಗುರುವಾರ ಅಧಿಕೃತ ಹೇಳಿಕೆಯಲ್ಲಿ ಹೆಚ್ಚುವರಿ ವಿವರಗಳನ್ನು ಒದಗಿಸಿದೆ. ಈ ದಾಳಿಯಲ್ಲಿ 90 ಜನ ಮೃತಪಟ್ಟು, ಸುಮಾರು 280 ಜನರಿಗೆ ಗಾಯಗಳಾಗಿವೆ.

ಕೆರ್ಮನ್, ಸಿಸ್ತಾನ್ ಮತ್ತು ಬಲುಚೆಸ್ತಾನ್, ಖೊರಾಸನ್ ರಝಾವಿ, ಇಸ್ಫಹಾನ್, ಟೆಹ್ರಾನ್ ಮತ್ತು ಪಶ್ಚಿಮ ಅಜರ್​ ಬೈಜಾನ್ ಪ್ರಾಂತ್ಯಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಸ್ತುತ ವಿದೇಶದಲ್ಲಿ ನೆಲೆಸಿರುವ ದಾಳಿಯಲ್ಲಿ ಭಾಗಿಯಾಗಿರುವ ಕೆಲ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ನಿರಂತರ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ದಶಕಗಳಲ್ಲಿ ಇರಾನ್ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾದ ಜನವರಿ 3ರ ದಾಳಿಯನ್ನು ಯೋಜಿಸಿದವರು ಮತ್ತು ದಾಳಿ ಮಾಡಿದವರನ್ನು ಗುರುತಿಸಲು ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಅದು ಹೇಳಿದೆ.

ಸಚಿವಾಲಯದ ಮಾಹಿತಿಯ ಪ್ರಕಾರ, ಅಬ್ದುಲ್ಲಾ ತಾಜಿಕಿ ಹೆಸರಿನ ತಾಜಿಕ್ ಪ್ರಜೆ ದಾಳಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಮನೆಯಲ್ಲಿಯೇ ಬಾಂಬ್​ಗಳನ್ನು ತಯಾರಿಸುವಲ್ಲಿ ಪರಿಣಿತನಾದ ತಾಜಿಕಿ 2023 ರ ಡಿಸೆಂಬರ್ 19 ರಂದು ಆಗ್ನೇಯ ಗಡಿಯ ಮೂಲಕ ಅಕ್ರಮವಾಗಿ ಇರಾನ್ ಪ್ರವೇಶಿಸಿದ್ದ ಮತ್ತು ಅವಳಿ ಬಾಂಬ್​ ದಾಳಿಗೂ ಎರಡು ದಿನಗಳ ಮೊದಲು ದೇಶ ತೊರೆದಿದ್ದಾನೆ ಎಂದು ಸಚಿವಾಲಯ ಹೇಳಿದೆ.

ಆತ್ಮಾಹುತಿ ಬಾಂಬರ್​ಗಳಲ್ಲಿ ಒಬ್ಬನನ್ನು ತಾಜಿಕ್ ಪ್ರಜೆ 24 ವರ್ಷದ ಬಾಜಿರೊವ್ ಇಸ್ರೇಲಿ ಎಂದು ಸಚಿವಾಲಯ ಗುರುತಿಸಿದೆ. ಈತ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳ ಬಗ್ಗೆ ತರಬೇತಿ ಪಡೆದ ನಂತರ ಟೆಲಿಗ್ರಾಮ್ ಮೆಸೇಜಿಂಗ್ ಪ್ಲಾಟ್​ಫಾರ್ಮ್​ ಮೂಲಕ ಮೂಲಕ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಗುಂಪಿಗೆ ಸೇರಿಕೊಂಡಿದ್ದ. ಘಟನೆ ನಡೆದ ದಿನ ಭಯೋತ್ಪಾದಕರು ಆರಂಭದಲ್ಲಿ ಸೊಲೈಮಾನಿ ಸಮಾಧಿಯ ಮೇಲೆಯೇ ಬಾಂಬ್ ಸ್ಫೋಟಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಸ್ಥಳದಲ್ಲಿ ಭದ್ರತೆ ಬಿಗಿಯಾಗಿದ್ದುದರಿಂದ ಒಬ್ಬಾತ ಸಮಾಧಿಯಿಂದ 700 ಮೀಟರ್​ ದೂರದಲ್ಲಿ ಹಾಗೂ ಮತ್ತೊಬ್ಬ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಬಾಂಬ್ ಸ್ಫೋಟಿಸಿದ್ದ.

ಇದನ್ನೂ ಓದಿ: ರಾಮಾಯಣ ವಿಶ್ವದ ಭೌಗೋಳಿಕ ಸೇತುವೆ: ರಾಯಭಾರಿ ಸಂಧು

ABOUT THE AUTHOR

...view details