ಕರ್ನಾಟಕ

karnataka

ETV Bharat / international

ಯುಎಸ್​ನಲ್ಲಿ ಹೆಲಿಕಾಪ್ಟರ್ ಪತನ: ಹವಾಮಾನ ತಜ್ಞ ಸೇರಿ ಇಬ್ಬರು ಸಾವು - ಹೆಲಿಕಾಪ್ಟರ್ ದುರಂತದಲ್ಲಿ ಹವಾಮಾನಶಾಸ್ತ್ರಜ್ಞ ಸಾವು

ಯುಎಸ್​ನಲ್ಲಿ ಮಂಗಳವಾರ ಹೆಲಿಕಾಪ್ಟರ್ ಪತನಗೊಂಡಿದೆ. ಪೈಲಟ್ ಮತ್ತು ಟೆಲಿವಿಷನ್ ಹವಾಮಾನ ಶಾಸ್ತ್ರಜ್ಞರೊಬ್ಬರು ಸಾವನ್ನಪ್ಪಿದ್ದಾರೆ.

helicopter crash
ಹೆಲಿಕಾಪ್ಟರ್ ಪತನ

By

Published : Nov 23, 2022, 9:45 AM IST

ಯುನೈಟೆಡ್ ಸ್ಟೇಟ್ಸ್: ಯುಎಸ್​ನಲ್ಲಿ ಹೆಲಿಕಾಪ್ಟರ್ ಪತನವಾಗಿದ್ದು, ​ದುರಂತದಲ್ಲಿ ಪೈಲಟ್ ಮತ್ತು ಉತ್ತರ ಕೆರೊಲಿನಾ ದೂರದರ್ಶನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಹವಾಮಾನ ಶಾಸ್ತ್ರಜ್ಞರೊಬ್ಬರು ಸಾವನ್ನಪ್ಪಿದ್ದಾರೆ.

ರಾಬಿನ್ಸನ್ ಆರ್44 ಎಂಬ ಹೆಲಿಕಾಪ್ಟರ್ ಚಾರ್ಲೊಟ್ ಎಂಬಲ್ಲಿ ನೆಲಕ್ಕಪ್ಪಳಿಸಿದ್ದು, ಹವಾಮಾನ ಶಾಸ್ತ್ರಜ್ಞ ಜೇಸನ್ ಮೈಯರ್ಸ್ ಮತ್ತು ಪೈಲಟ್ ಚಿಪ್ ತಯಾಗ್ ಎಂಬುವರು ಮೃತಪಟ್ಟಿದ್ದಾರೆ. ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಹೆದ್ದಾರಿಗೆ ಬೀಳುತ್ತಿದ್ದ ಹೆಲಿಕಾಪ್ಟರ್ ಅನ್ನು ಪೈಲಟ್‌ ತಕ್ಷಣ ಬೇರೆಡೆಗೆ ತಿರುಗಿಸಿದ್ದು ದೊಡ್ಡ ದುರಂತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಹೋದ್ಯೋಗಿಯ ಸಾವಿಗೆ WBTV ತಂಡ ಕಂಬನಿ ಮಿಡಿದಿದೆ.

ಇದನ್ನೂ ಓದಿ:ಹೆಲಿಕಾಪ್ಟರ್ ದುರ್ಘಟನೆ: ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಸೇನಾ ಪೈಲಟ್ ಅಂತ್ಯಕ್ರಿಯೆ

ಲಘು ವಿಮಾನವೊಂದು ಸೋಮವಾರ ಕೊಲಂಬಿಯಾದ ಎರಡನೇ ಅತಿದೊಡ್ಡ ನಗರ ಮೆಡೆಲಿನ್‌ನ ವಸತಿ ಪ್ರದೇಶದಲ್ಲಿ ಪತನಗೊಂಡು ಎಂಟು ಮಂದಿ ಸಾವನ್ನಪ್ಪಿದ್ದರು.

ABOUT THE AUTHOR

...view details