ನ್ಯೂಯಾರ್ಕ್(ಅಮೆರಿಕ):ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನ ನಡೆಯುತ್ತಿದೆ. ವಿವಿಧ ದೇಶದ ಅಧ್ಯಕ್ಷರು, ಮುಖ್ಯಸ್ಥರು ಜಗತ್ತಿನ ಪ್ರಮುಖ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ. ಅಧಿವೇಶನದಲ್ಲಿ ಭಾಗಿಯಾಗಿ ಮಾತನಾಡಿರುವ ಟರ್ಕಿ ಅಧ್ಯಕ್ಷ ರಿಸೆಪ್ ಎರ್ಡೋಗನ್, ಕಾಶ್ಮೀರದ ವಿವಾದ ಕೆದಕಿದರು.
ಭಾರತ-ಪಾಕಿಸ್ತಾನದ ನಡುವೆ ಇನ್ನೂ ಶಾಂತಿ ಸ್ಥಾಪನೆಯಾಗಿಲ್ಲ ಎಂದು ಹೇಳಿರುವ ಟರ್ಕಿ ಅಧ್ಯಕ್ಷ, 75 ವರ್ಷಗಳ ಹಿಂದೆ ಉಭಯ ದೇಶಗಳು ಸಾರ್ವಭೌಮತ್ವ ಹಾಗೂ ಸ್ವಾತಂತ್ರ್ಯ ಸ್ಥಾಪಿಸಿವೆ. ಆದರೆ, ಕಾಶ್ಮೀರ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಶಾಂತಿ, ಒಗ್ಗಟ್ಟು ಕಂಡು ಬಂದಿಲ್ಲ. ಇದು ಅತ್ಯಂತ ದುರದೃಷ್ಟಕರ ಎಂದರು.