ಕರ್ನಾಟಕ

karnataka

ETV Bharat / international

ಟರ್ಕಿ ಭೂಕಂಪ ಸಂತ್ರಸ್ತರ ನೆರವಿಗೆ ಧಾವಿಸಿದ ರೊನಾಲ್ಡೋ... ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ - ಭೂಕಂಪ ಪೀಡಿತರ ನೆರವಿಗೆ ಧಾವಿಸಿದ ರೊನಾಲ್ಡೋ

ಟರ್ಕಿಯಲ್ಲಿ ಕಂಡು ಬರುತ್ತಿರುವ ದೃಶ್ಯಗಳು ರಣಭಯಂಕರವಾಗಿವೆ. ಅಲ್ಲಿನ ಹವಾಮಾನ ಪರಿಸ್ಥಿತಿಯು ಪರಿಹಾರ ಕಾರ್ಯಾಚರಣೆಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದೆ.

Turkey Syria Earthquakes  Cristiano Ronaldo's Jersey
ಟರ್ಕಿ ಭೂಕಂಪ ಸಂತ್ರಸ್ತರ ನೆರವಿಗೆ ಧಾವಿಸಿದ ರೊನಾಲ್ಡೋ.

By

Published : Feb 9, 2023, 9:55 AM IST

ಅಂಕಾರಾ/ಡಮಾಸ್ಕಸ್: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 15383ಕ್ಕೆ ಏರಿಕೆ ಆಗಿದೆ. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಸಂಸ್ಥೆ (AFAD) ನೀಡಿರುವ ವರದಿ ಪ್ರಕಾರ ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ ಪ್ರಸ್ತುತ 12,391 ಕ್ಕೆ ಹೆಚ್ಚಳವಾಗಿದ್ದು, 62,914 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ.

7.8 ತೀವ್ರತೆಯ ಭೂಕಂಪದ ನಂತರ 6,000 ಕ್ಕೂ ಹೆಚ್ಚು ಕಟ್ಟಡಗಳು ಕುಸಿತ ಕಂಡಿವೆ. ಟರ್ಕಿಶ್​ನ 10 ಪ್ರದೇಶಗಳಾದ ಕಹ್ರಮನ್‌ಮರಸ್, ಗಾಜಿಯಾಂಟೆಪ್, ಹಟೇ, ಉಸ್ಮಾನಿಯೆ, ಅಡಿಯಾಮಾನ್, ಮಲತ್ಯ, ಸಾನ್ಲಿಯುರ್ಫಾ, ಅದಾನ, ದಿಯಾರ್‌ಬಾಕ್‌ನಲ್ಲಿ ಇದುವರೆಗೆ 13 ದಶಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಸಿರಿಯಾದಲ್ಲಿ, ಕನಿಷ್ಠ 2,992 ಸಾವುಗಳು ಸಂಭವಿಸಿವೆ. 1,730 ಸಾವುಗಳು ವಾಯುವ್ಯದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಆಗಿದೆ ಎಂದು ವರದಿಯಾಗಿದೆ. ದೇಶದ ಸರ್ಕಾರಿ ನಿಯಂತ್ರಿತ ಭಾಗಗಳಲ್ಲಿ 1,262 ಸಾವುಗಳು ದಾಖಲಾಗಿವೆ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಸೋಮವಾರ ಸಂಭವಿಸಿದ ಭಾರಿ ದುರಂತದ ನಂತರ, 70 ದೇಶಗಳು ಮತ್ತು 14 ಅಂತಾರಾಷ್ಟ್ರೀಯ ಸಂಸ್ಥೆಗಳು ಟರ್ಕಿ ದೇಶಕ್ಕೆ ಪರಿಹಾರವನ್ನು ನೀಡಿವೆ ಎಂದು ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗೆ ಯುಎಇ, ಇರಾಕ್, ಇರಾನ್, ಲಿಬಿಯಾ, ಈಜಿಪ್ಟ್, ಅಲ್ಜೀರಿಯಾ ಮತ್ತು ಭಾರತ ಸರ್ಕಾರಗಳು ನಿಯಂತ್ರಿತ ವಿಮಾನ ನಿಲ್ದಾಣಗಳಿಗೆ ನೇರವಾಗಿ ಪರಿಹಾರವನ್ನು ಕಳುಹಿ ಕೊಟ್ಟಿವೆ ಎಂದು ಅಮೆರಿಕದ ಪ್ರಮುಖ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನ, ಸೌದಿ ಅರೇಬಿಯಾ, ಕತಾರ್, ಓಮನ್, ಚೀನಾ, ಕೆನಡಾ ಮತ್ತು ವ್ಯಾಟಿಕನ್‌ನಂತಹ ಇತರ ರಾಷ್ಟ್ರಗಳು ಸಹ ಸಹಾಯದ ವಾಗ್ದಾನ ಮಾಡಿವೆ. ಆದರೂ ಆ ಪರಿಹಾರವನ್ನು ನೇರವಾಗಿ ಸಿರಿಯಾದಲ್ಲಿನ ಆಡಳಿತಕ್ಕೆ ಕಳುಹಿಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಂತ್ರಸ್ತರ ನೆರವಿಗೆ ಬರುವಂತೆ ಅಲ್ಲಿನ ಸರ್ಕಾರ ಮಾಡಿಕೊಂಡಿರುವ ಮನವಿ ಮೆರೆಗೆ ಸಿರಿಯಾಕ್ಕೆ 3.5 ಮಿಲಿಯನ್ ಯುರೋಗಳನ್ನು ಸಹಾಯಕ್ಕಾಗಿ ಕಳುಹಿಸುವುದಾಗಿ EU ದೃಢಪಡಿಸಿದೆ.

ಭೂಕಂಪ ಪೀಡಿತರ ನೆರವಿಗೆ ಧಾವಿಸಿದ ರೊನಾಲ್ಡೋ:ಭೂಕಂಪದಿಂದ ಉಭಯ ದೇಶಗಳ ಕೋಟ್ಯಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪಾಲುದಾರರಾಗಿರುವ ಫುಟ್ಬಾಲ್ ಆಟಗಾರ್ತಿ ಮೇರಿಹ್ ಡೆಮಿರಾಲ್ ಅವರಿಗೆ ಉಡುಗೊರೆಯಾಗಿ ನೀಡಲಾದ ಜೆರ್ಸಿಯನ್ನು ಹರಾಜು ಹಾಕಲು ನಿರ್ಧರಿಸಿದ್ದಾರೆ. ರೊನಾಲ್ಡೊ ಅವರ ಈ ಜೆರ್ಸಿಯು ಅವರು ಯುವೆಂಟಸ್‌ಗಾಗಿ ಫುಟ್‌ಬಾಲ್ ಆಡುತ್ತಿದ್ದ ಸಮಯದಲ್ಲಿ ಉಪಯೋಗಿಸುತ್ತಿದ್ದುದಾಗಿದೆ.

ದುರಂತದ ಬಗ್ಗೆ ಡಬ್ಲ್ಯೂಎಚ್​ಒ ಆತಂಕ:ಈ ನಡುವೆಸಿರಿಯಾ ಮತ್ತು ಟರ್ಕಿಯಲ್ಲಿ ಉಂಟಾದ ಭೂಕಂಪನದ ಭೀಕರತೆ ಕಂಡರೆ 20 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಳ್ಳುವ ಆತಂಕವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಮತ್ತೊಂದು ಕಡೆ ಟರ್ಕಿ- ಸಿರಿಯಾದಲ್ಲಿ ಪಾಶ್ಚಾತ್ಯ ಕಂಪನಿಗಳು ಉಂಟಾಗುತ್ತಿವೆ. ಶೀತಗಾಳಿ, ಚಳಿ, ಗಾಯದ ಸಮಸ್ಯೆ, ಆಹಾರ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ.

ಇದನ್ನೂ ಓದಿ:ಟರ್ಕಿ, ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 15 ಸಾವಿರಕ್ಕೆ.. ಓರ್ವ ಭಾರತೀಯ ನಾಪತ್ತೆ

ABOUT THE AUTHOR

...view details