ವಾಷಿಂಗ್ಟನ್: 2020ರ ಅಮೆರಿಕ ಚುನಾವಣೆಯಲ್ಲಿ ಕಾನೂನು ಬಾಹಿರ ಕೃತ್ಯಗಳು ಹಾಗೂ ಭ್ರಷ್ಟಾಚಾರದ ಮಾರ್ಗಗಳ ಮೂಲಕ ತಮ್ಮ ಪರವಾದ ಫಲಿತಾಂಶ ಪಡೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಕಳೆದ ವರ್ಷ ಕ್ಯಾಪಿಟಲ್ ಹಿಲ್ಸ್ ಮೇಲೆ ನಡೆದ ದಾಳಿಯ ಬಗ್ಗೆ ತನಿಖೆ ನಡೆಸುತ್ತಿರುವ ಸದನ ಸಮಿತಿಯ ಅಧ್ಯಕ್ಷರು ಟ್ರಂಪ್ ವಿರುದ್ಧ ಈ ಆರೋಪ ಮಾಡಿದ್ದಾರೆ.
ದಾಳಿಗಳ ಬಗ್ಗೆ ನಡೆದ ಸಾರ್ವಜನಿಕ ವಿಚಾರಣೆಯ ಟಿವಿ ಪ್ರಸಾರದಲ್ಲಿ ಮಾತನಾಡಿದ ಸದನ ಸಮಿತಿಯ ಅಧ್ಯಕ್ಷ ಬೆನ್ನಿ ಥಾಮ್ಸನ್, ಯಾವುದನ್ನು ಅವರು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕರೆದಿದ್ದರೋ ಅದರ ಹೊಣೆಗಾರಿಕೆಯನ್ನು ಅವರ ಮೇಲೆ ಹೊರಿಸಬೇಕಿದೆ ಎಂದರು.
ಚುನಾವಣಾ ಫಲಿತಾಂಶಗಳನ್ನು ತನ್ನ ಪರವಾಗಿ ತಿರುಗಿಸಿಕೊಳ್ಳಲು ತನಗೆ ಸಾಧ್ಯವಿರುವುದೆಲ್ಲವನ್ನೂ ಮಾಡಿದ ಅಧ್ಯಕ್ಷರ ಬಗ್ಗೆ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಸದನ ಸಮಿತಿಯು ಸಾಕಷ್ಟು ತಿಳಿದುಕೊಂಡಿದೆ. ಆತ ಸುಳ್ಳು ಹೇಳಿದ, ಬೆದರಿಕೆ ಹಾಕಿದ, ಸತ್ಯದ ಪ್ರಮಾಣಕ್ಕೆ ವಂಚನೆ ಮಾಡಿದ. ಆತ ನಮ್ಮ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಹಾಳು ಮಾಡಲು ಯತ್ನಿಸಿದ. ಯಾರ ಹೆದರಿಕೆಯೂ ಇಲ್ಲದೇ ಕಾನೂನುಬಾಹಿರ ಮತ್ತು ಭ್ರಷ್ಟಾಚಾರದ ಮಾರ್ಗದಲ್ಲಿ ಸಾಗಿದ ಎಂದು ಅವರು ಹೇಳಿದರು.