ನ್ಯೂಯಾರ್ಕ್:ಟ್ವಿಟರ್, ಉದ್ಯಮಿ ಎಲಾನ್ ಮಸ್ಕ್ ಅವರ ಒಡೆತನಕ್ಕೆ ಬಂದಿದೆ. ಆದರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ವಿಟರ್ ಖಾತೆಯನ್ನು ಮರು ಚಾಲನೆಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಅವರ ಖಾತೆಯನ್ನು ಟ್ವಿಟರ್ ಬ್ಯಾನ್ ಮಾಡಿತ್ತು. ಟ್ವಿಟರ್ಗೆ ಸೆಡ್ಡು ಹೊಡೆದಿದ್ದ ಡೊನಾಲ್ಡ್ ಟ್ರಂಪ್, ತಮ್ಮದೇ ವೇದಿಕೆಯಾದ ಟ್ರೂತ್ ಸೋಶಿಯಲ್ ಆರಂಭಿಸಿದ್ದರು. ಈ ವೇದಿಕೆ ಮೇಲೆಯೇ ಹೆಚ್ಚು ಗಮನ ಹರಿಸುವುದಾಗಿ ಟ್ರಂಪ್ ಫಾಕ್ಸ್ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದಾರೆ.
ನಾನು ಟ್ವಿಟರ್ಗೆ ಮರಳುತ್ತಿಲ್ಲ. ನಾನು ಸತ್ಯದ ದಾರಿಯಲ್ಲೇ ಉಳಿಯಲಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿರುವ ಮಾಜಿ ಅಧ್ಯಕ್ಷ ಟ್ರಂಪ್, ಎಲಾನ್ ಟ್ವಿಟರ್ ಅನ್ನು ಖರೀದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವರು ಅದನ್ನು ಸುಧಾರಿಸುತ್ತಾರೆ ಮತ್ತು ಅವರು ಒಳ್ಳೆಯ ವ್ಯಕ್ತಿ, ಆದರೆ ನಾನು ಸತ್ಯದ ಮಾರ್ಗದಲ್ಲೇ ಉಳಿಯುತ್ತೇನೆ ಎಂದಿದ್ದಾರೆ.