ಮೆಕ್ಸಿಕೋ:ಉಷ್ಣವಲಯದ ಚಂಡಮಾರುತ ಲಿಡಿಯಾ ಅಬ್ಬರಕ್ಕೆ ಮೆಕ್ಸಿಕೋ ತತ್ತರಿಸಿ ಹೋಗಿದೆ. ಚಂಡಮಾರುತದ ಆರ್ಭಟಕ್ಕೆ ಸೋಮವಾರ ಮೆಕ್ಸಿಕೋದ ದಕ್ಷಿಣ ಪೆಸಿಫಿಕ್ ಕರಾವಳಿಯಲ್ಲಿ ಭೂಕುಸಿತ ಉಂಟಾಗಿದೆ. ಉಷ್ಣವಲಯದ ಚಂಡಮಾರುತ ಲಿಡಿಯಾ ಅಬ್ಬರಕ್ಕೆ ದೇಶವು ಎರಡನೇ ಬಾರಿ ತುತ್ತಾಗಿದೆ. ಜೊತೆಗೆ ಮಂಗಳವಾರವೂ ದೇಶದ ವಿವಿಧ ಭಾಗದಲ್ಲಿ ಚಂಡಮಾರುತವಾಗಿ ಅಪ್ಪಳಿಸುವ ನಿರೀಕ್ಷೆಯಿದೆ.
65 ಕಿಮೀ ವೇಗದಲ್ಲಿ ಚಲಿಸುತ್ತಿರುವ ಲಿಡಿಯಾ ಚಂಡಮಾರುತ:ಲಿಡಿಯಾ ಚಂಡಮಾರುತ ಗಂಟೆಗೆ ಸುಮಾರು 60 mph (95 kph) ವೇಗವಾಗಿ ಗಾಳಿ ಬೀಸುತ್ತಿದೆ. ಈ ಚಂಡಮಾರುತ ರೆಸಾರ್ಟ್ ಪಟ್ಟಣವಾದ ಜಿಹುವಾಟಾನೆಜೋದಿಂದ ಪೂರ್ವದಲ್ಲಿ ಸುಮಾರು 65 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ಇದರ ಪರಿಣಾಮವಾಗಿ ಮೆಕ್ಸಿಕೋದ ಸಿವಿಲ್ ಡಿಫೆನ್ಸ್ ಕಚೇರಿಯು ಮ್ಯಾಕ್ಸ್ ಗೆರೆರೋ ಮತ್ತು ಮೈಕೋಕಾನ್ ರಾಜ್ಯಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಭಾಗದ ಕೆಲವು ಕಡೆಗಳಲ್ಲಿ ಚಂಡಮಾರುತವು ಶೀಘ್ರವೇ ದುರ್ಬಲಗೊಳ್ಳುವ ನಿರೀಕ್ಷೆಯಿದೆ.
ಪಶ್ಚಿಮ ಪೆಸಿಫಿಕ್ ಕರಾವಳಿಯ ಉತ್ತರದ ಭಾಗದಲ್ಲಿ ಎಫೆಕ್ಟ್:ಆದಾಗ್ಯೂ, ಅಮೆರಿಕದ ರಾಷ್ಟ್ರೀಯ ಹರಿಕೇನ್ ಸೆಂಟರ್ ಮತ್ತು ಮೆಕ್ಸಿಕನ್ ಅಧಿಕಾರಿಗಳು, ಚಂಡಮಾರುತ ಹಾಗೂ ಧಾರಾಕಾರ ಮಳೆಯಿಂದ ಹಠಾತ್ ಪ್ರವಾಹದ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಲಿಡಿಯಾ ಚಂಡಮಾರುತ ಮೆಕ್ಸಿಕೋದ ಪಶ್ಚಿಮ ಪೆಸಿಫಿಕ್ ಕರಾವಳಿಯ ಉತ್ತರದ ಭಾಗದಲ್ಲಿ ತಮ್ಮ ಅಬ್ಬರವನ್ನು ಮುಂದುವರಿಸಲಿದೆ. ಪೋರ್ಟೊ ವಲ್ಲರ್ಟಾದ ರೆಸಾರ್ಟ್‌ನ ಉತ್ತರದ ಕರಾವಳಿಯ ವಿಸ್ತಾರದಲ್ಲಿ ಮಂಗಳವಾರ 100 mph (160 kph) ವೇಗದ ಗಾಳಿ ಬೀಸುತ್ತಿದ್ದು, ಈ ಚಂಡಮಾರುತದ ಎಫೆಕ್ಟ್ಗೆ ಭೂಕುಸಿತ ಉಂಟಾಗುವ ಸಾಧ್ಯತೆಯು ಕೂಡ ಹೆಚ್ಚಿದೆ.