ಕರ್ನಾಟಕ

karnataka

ETV Bharat / international

ನಕಲಿ ಶಿಶ್ನ ಬಳಸಿ ಲೈಂಗಿಕ ವಂಚನೆ; ತೃತೀಯಲಿಂಗಿಗೆ 10 ವರ್ಷ ಜೈಲು ಶಿಕ್ಷೆ - ತೃತೀಯಲಿಂಗಿ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿದ ಲಂಡನ್​ ನ್ಯಾಯಾಲಯ

ಮಹಿಳೆಯರನ್ನು ಲೈಂಗಿಕವಾಗಿ ಮೋಸಗೊಳಿಸಲು ಪ್ರಾಸ್ಥೆಟಿಕ್ ಶಿಶ್ನವನ್ನು ಬಳಸಿದ ತೃತೀಯ ಲಿಂಗಿ ವ್ಯಕ್ತಿಗೆ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Trans man uses prosthetic penis to trick women into sex  Trans man gets 10 years prison  transgender man prison in London  transgender man news  ಮಹಿಳೆಯರನ್ನು ಲೈಂಗಿಕವಾಗಿ ಮೋಸಗೊಳಿಸಲು ನಕಲಿ ಶಿಶ್ನ ಬಳಸಿದ ತೃತೀಯ ಲಿಂಗಿ ವ್ಯಕ್ತಿ  ತೃತೀಯಲಿಂಗಿ ವ್ಯಕ್ತಿಗೆ 10 ವರ್ಷ ಜೈಲು ಶಿಕ್ಷೆ  ತೃತೀಯಲಿಂಗಿ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿದ ಲಂಡನ್​ ನ್ಯಾಯಾಲಯ  ತೃತೀಯಲಿಂಗಿ ವ್ಯಕ್ತಿ ಸುದ್ದಿ
ಮಹಿಳೆಯರನ್ನು ಲೈಂಗಿಕವಾಗಿ ಮೋಸಗೊಳಿಸಲು ನಕಲಿ ಶಿಶ್ನ ಬಳಕೆ

By

Published : Jul 29, 2022, 2:28 PM IST

ಲಂಡನ್​:ನಕಲಿ ಶಿಶ್ನ ಬಳಸಿ ಇಬ್ಬರು ಮಹಿಳೆಯರು ಮತ್ತು ಹದಿಹರೆಯದವರನ್ನು ಲೈಂಗಿಕ ಸಂಬಂಧಕ್ಕೆ ಪ್ರಚೋದಿಸಿ ಬಳಸಿದ ತೃತೀಯಲಿಂಗಿ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹನ್ನಾ ವಾಲ್ಟರ್ಸ್ ಎಂಬ ವ್ಯಕ್ತಿ ಹೆಣ್ಣಾಗಿ ಹುಟ್ಟಿ ಈಗ ಪುರುಷ ಎಂದು ಗುರುತಿಸಿಕೊಂಡಿರುವ 32 ವರ್ಷದ ತರ್ಜಿತ್ ಸಿಂಗ್ ಸಂಭೋಗದ ಸಮಯದಲ್ಲಿ ಬಟ್ಟೆ ಧರಿಸುತ್ತಿದ್ದ. ಮತ್ತು ಕತ್ತಲೆಯಲ್ಲಿ ಪ್ರಾಸ್ಥೆಟಿಕ್ ಶಿಶ್ನ ಬಳಸುತ್ತಿದ್ದ. ಈ ವರ್ಷಾರಂಭದಲ್ಲಿ ಸ್ನಾರೆಸ್‌ಬ್ರೂಕ್ ಕ್ರೌನ್ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ನಂತರ ಸಿಂಗ್​ಗೆ ಇದೀಗ ದೈಹಿಕ ಹಾನಿ ಮತ್ತು ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೋರ್ಟ್‌ ಶಿಕ್ಷೆ ವಿಧಿಸಿತು.

ಭವಿಷ್ಯದಲ್ಲಿ ಸಿಂಗ್​ನಿಂದ ಸಾರ್ವಜನಿಕರಿಗೆ ಗಂಭೀರವಾಗಿ ಹಾನಿಯಾಗುವ ಅಪಾಯವಿದೆ. ಮೂವರು ಸಂತ್ರಸ್ತೆಯರ ವಿರುದ್ಧ ಪದೇ ಪದೇ ಹಿಂಸಾಚಾರ ಮತ್ತು ಹಲ್ಲೆ ಮಾಡಿದ ಈತ ‘ಅಪಾಯಕಾರಿ ಅಪರಾಧಿ’. ಸಿಂಗ್​ ಒಬ್ಬ ನಿಪುಣ ಮತ್ತು ಸುಳ್ಳುಗಾರ. ಪ್ರಾಮಾಣಿಕವಾಗಿ ಸಂಭಾಷಣೆ ನಡೆಸುವ ಬದಲು ಸಿಂಗ್ ಮೋಸದ ಮಾರ್ಗವನ್ನು ಆರಿಸಿಕೊಂಡ ಎಂದು ನ್ಯಾಯಾಧೀಶ ಆಸ್ಕರ್ ಡೆಲ್ ಫ್ಯಾಬ್ರೊ ಬುಧವಾರ ತೀರ್ಪಿನಲ್ಲಿ ತಿಳಿಸಿದ್ದಾರೆ.

"ಈ ಘಟನೆ ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ನಾನು ತೀವ್ರ ಆತಂಕ ಮತ್ತು ಖಿನ್ನತೆಗೊಳಗಾಗಿದ್ದಾನೆ. ನಾನು ಇದರಿಂದ ಹೊರಬರಲು ಖಿನ್ನತೆಯ ಔಷಧಿ ತೆಗೆದುಕೊಳ್ಳಬೇಕಾಗಿತ್ತು" ಎಂದು ಓರ್ವ ಸಂತ್ರಸ್ತೆ ನ್ಯಾಯಾಲಯದಲ್ಲಿ ಹೇಳಿದರು. ಇನ್ನೊಬ್ಬ ಸಂತ್ರಸ್ತೆ ತನ್ನ ದೂರಿನಲ್ಲಿ, "ಆ ಸಮಯದಲ್ಲಿ ನನಗೆ ಕೇವಲ 16 ವರ್ಷ ವಯಸ್ಸಾಗಿತ್ತು. ನನ್ನ ಜೀವನದ ಅತ್ಯಂತ ದುರ್ಬಲ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಆರೋಪಿ ಕುತಂತ್ರದಾಟಕ್ಕೆ ನನ್ನನ್ನು ಬಳಸಿಕೊಂಡ" ಬೇಸರಿಸಿದ್ದಾರೆ.

"ಈ ಘಟನೆಯಿಂದ ನನ್ನ ಜೀವನದ ಅಮೂಲ್ಯ ಸಮಯವನ್ನು ನಾನು ಕಳೆದುಕೊಂಡೆ. ಅಧ್ಯಯನ ಮತ್ತು ಕಾಲೇಜು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ದೀರ್ಘಕಾಲದವರೆಗೆ ನಾನು ಮನೆಯಿಂದ ಹೊರ ಹೋಗಲು ಹೆದರುತ್ತಿದ್ದೆ" ಎಂದು 3ನೇ ಸಂತ್ರಸ್ತೆ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

ಇದನ್ನೂ ಓದಿ:ಆಲಮಟ್ಟಿ ಡ್ಯಾಂ ಬಳಿ ಬುರ್ಖಾ ಧರಿಸಿ ಬಂದಿದ್ದ ವ್ಯಕ್ತಿ.. ಪೊದೆ ಹಿಂದೆ ಬಟ್ಟೆ ತೆಗೆದಿದ್ದನ್ನು ಕಂಡು ಖಾಕಿ ಶಾಕ್!​

ABOUT THE AUTHOR

...view details