ಕರ್ನಾಟಕ

karnataka

ETV Bharat / international

ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಮೂವರು ಮಹಿಳಾ ಉದ್ಯಮಿಗಳಿಗೆ ಸ್ಥಾನ - ಫೋರ್ಬ್ಸ್ ಪಟ್ಟಿ

ಫೋರ್ಬ್ಸ್ ಏಷ್ಯಾ ನವೆಂಬರ್ ಸಂಚಿಕೆಯಲ್ಲಿನ ಭಾರತೀಯ ಪ್ರಮುಖ ಮೂವರು ಮಹಿಳಾ ಉದ್ಯಮಿಗಳು ಸ್ಥಾನ ಪಡೆದುಕೊಂಡಿದ್ದಾರೆ. ಟಾಪ್​​ 20 ಮಹಿಳೆಯರ ಪಟ್ಟಿಯಲ್ಲಿ ಮೂವರು ಭಾರತೀಯರಿದ್ದಾರೆ ಎನ್ನುವುದು ಗಮನಾರ್ಹ.

Forbes
ಫೋರ್ಬ್ಸ್

By

Published : Nov 8, 2022, 4:52 PM IST

Updated : Dec 1, 2022, 3:43 PM IST

ಸಿಂಗಾಪುರ: ಫೋರ್ಬ್ಸ್ ಏಷ್ಯಾ ನವೆಂಬರ್ ಸಂಚಿಕೆಯಲ್ಲಿ ಭಾರತೀಯ ಪ್ರಮುಖ ಮೂವರು ಮಹಿಳಾ ಉದ್ಯಮಿಗಳು ಸ್ಥಾನ ಪಡೆದುಕೊಂಡಿದ್ದಾರೆ. ಮೂರು ವರ್ಷಗಳ ಕೋವಿಡ್ -19 ರ ಅನಿಶ್ಚಿತತೆಯ ಹೊರತಾಗಿಯೂ ವಿವಿಧ ತಂತ್ರಗಳೊಂದಿಗೆ ತಮ್ಮ ಉದ್ಯಮಗಳು ಯಶಸ್ವಿಯಾಗುವಂತೆ ನೋಡಿಕೊಂಡ 20 ಏಷ್ಯಾನ್ ಮಹಿಳೆಯರನ್ನು ಪಟ್ಟಿ ಮಾಡಲಾಗಿದೆ.

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷೆ ಸೋಮಾ ಮೊಂಡಲ್, ಎಂಕ್ಯೂರ್ ಫಾರ್ಮಾದ ಇಂಡಿಯಾ ಬ್ಯುಸಿನೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ನಮಿತಾ ಥಾಪರ್ ಮತ್ತು ಹೊನಾಸಾ ಗ್ರಾಹಕರ ಸಹ-ಸಂಸ್ಥಾಪಕ, ಮುಖ್ಯ ನಾವೀನ್ಯತೆ ಅಧಿಕಾರಿ ಗಜಲ್ ಅಲಾಗ್ ಈ ಪಟ್ಟಿಯಲ್ಲಿದ್ದಾರೆ.

ಪಟ್ಟಿಯಲ್ಲಿರುವ ಇತರ ಮಹಿಳೆಯರು ಆಸ್ಟ್ರೇಲಿಯಾ, ಚೀನಾ, ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ಜಪಾನ್, ಸಿಂಗಾಪುರ್, ದಕ್ಷಿಣ ಕೊರಿಯಾ, ತೈವಾನ್ ಮತ್ತು ಥಾಯ್ಲೆಂಡ್​​ನವರು .

ಈ ಮಹಿಳೆಯರಲ್ಲಿ ಕೆಲವರು ಶಿಪ್ಪಿಂಗ್, ಆಸ್ತಿ ಮತ್ತು ನಿರ್ಮಾಣದಂತಹ ಕಠಿಣ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತರರು ತಂತ್ರಜ್ಞಾನ, ಔಷಧೀಯ ಕ್ಷೇತ್ರಗಳಲ್ಲಿ ಹೊಸತನವನ್ನು ಮುಂದುವರೆಸುತ್ತಿದ್ದಾರೆ ಎಂದು ಫೋರ್ಬ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಪಾಪ್‌ಕಾರ್ನ್ ಟಿನ್‌ ಸರ್ಕ್ಯೂಟ್‌ ಬೋರ್ಡ್‌ನಲ್ಲಿತ್ತು $3.36 ಬಿಲಿಯನ್ ಮೌಲ್ಯದ Bitcoin!

Last Updated : Dec 1, 2022, 3:43 PM IST

ABOUT THE AUTHOR

...view details