ಪೋರ್ಟ್‌ಲ್ಯಾಂಡ್, ಅಮೆರಿಕ:ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಅಟ್ಲಾಂಟಿಕ್ ಸಾಗರಕ್ಕೆ ತೆರಳಿದ್ದ ಟೈಟಾನ್ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಬುಧವಾರ ಹೊರ ತೆಗೆಯಲಾಗಿದೆ. US ಕೋಸ್ಟ್ ಗಾರ್ಡ್ ಅಧಿಕಾರಿಗಳು ಅದನ್ನು ಕೆನಡಾದ ಸೇಂಟ್ ಜಾನ್ಸ್ ಬಂದರಿಗೆ ತರಲಾಗಿದೆ.
ಜೂನ್ 18ರ ಸಂಜೆ ಪೈಲಟ್ ಸೇರಿದಂತೆ ನಾಲ್ವರು ಪ್ರವಾಸಿಗರೊಂದಿಗೆ ಜಲಾಂತರ್ಗಾಮಿ ಸಮುದ್ರಕ್ಕೆ ತೆರಳಿತ್ತು. ನಂತರ ಟೈಟಾನ್ ಸ್ಫೋಟಗೊಂಡಿತು (Titan blast case) ಮತ್ತು ಜಲಾಂತರ್ಗಾಮಿ ನೌಕೆಯಲ್ಲಿದ್ದ ಎಲ್ಲ ಐದು ಜನರು ಸಾವನ್ನಪ್ಪಿದರು. ನಾಲ್ಕು ದಿನಗಳ ಕಾಲ ಜಲಾಂತರ್ಗಾಮಿ ಪತ್ತೆಗೆ ಪ್ರಯತ್ನ ನಡೆಸಲಾಗಿತ್ತು. ನಂತರ ಜೂನ್ 23 ರಂದು ಟೈಟಾನಿಕ್ ಅವಶೇಷಗಳಿಂದ 1600 ಅಡಿ ದೂರದಲ್ಲಿ ಜಲಾಂತರ್ಗಾಮಿ ಅವಶೇಷಗಳು ಪತ್ತೆಯಾಗಿದ್ದವು.
ದಡಕ್ಕೆ ಬಂದು ಸೇರಿದ ಟೈಟಾನ್ ಅವಶೇಷಗಳು:ಜಲಾಂತರ್ಗಾಮಿ ಅವಶೇಷಗಳಲ್ಲಿ ಮಾನವ ಅವಶೇಷಗಳು ಕಂಡುಬಂದಿವೆ ಎಂದು ಅಮೆರಿಕ ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೇಳಿದ್ದಾರೆ. ಈ ಅವಶೇಷಗಳನ್ನು ವೈದ್ಯಕೀಯ ತಂಡಕ್ಕೆ ಪರೀಕ್ಷೆಗೆ ಕಳುಹಿಸಲಾಗುವುದು. ಟೈಟಾನ್ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಬುಧವಾರ ಕೆನಡಾದ ಸೇಂಟ್ ಜಾನ್ಸ್ ಬಂದರಿಗೆ ತರಲಾಯಿತು.
ಟೈಟಾನ್ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ಸಾವು:ಟೈಟಾನ್ ಜಲಾಂತರ್ಗಾಮಿ ನೌಕೆಯಲ್ಲಿ ಬ್ರಿಟಿಷ್ ಉದ್ಯಮಿ ಹಮಿಶ್ ಹಾರ್ಡಿಂಗ್, ಫ್ರೆಂಚ್ ಮುಳುಗುಗಾರ ಪಾಲ್ - ಹೆನ್ರಿ, ಪಾಕಿಸ್ತಾನಿ - ಬ್ರಿಟಿಷ್ ಉದ್ಯಮಿ ಶಹಜಾದಾ ದಾವೂದ್, ಅವರ ಮಗ ಸುಲೈಮಾನ್ ಮತ್ತು ಓಸಿಂಗೇಟ್ ಕಂಪನಿ ಸಿಇಒ ಸ್ಟಾಕ್‌ಟನ್ ರಶ್ ಸೇರಿದ್ದಾರೆ. ಜಲಾಂತರ್ಗಾಮಿ ನೌಕೆಯನ್ನು ಜೂನ್ 18 ರಂದು ಭಾರತೀಯ ಕಾಲಮಾನ ಸಂಜೆ 5:30 ಕ್ಕೆ ಅಟ್ಲಾಂಟಿಕ್ ಸಾಗರಕ್ಕೆ ತೆರಳಿತ್ತು. ಸುಮಾರು ಎರಡು ಗಂಟೆಗಳ ನಂತರ ಕಿರು ಜಲಾಂತಗಾರ್ಮಿ ಸಂಪರ್ಕ ಕಡಿತಗೊಂಡಿತು.
ಚುರುಕುಗೊಂಡ ಟೈಟಾನ್ ಸ್ಫೋಟದ ತನಿಖೆ:ಟೈಟಾನ್‌ನ ಅವಶೇಷಗಳು ಸಮುದ್ರದ ಆಳದಲ್ಲಿ ಸುಮಾರು 3,810 ಮೀಟರ್‌ಗಳು ಮತ್ತು ಟೈಟಾನಿಕ್‌ನಿಂದ ಸರಿಸುಮಾರು 488 ಮೀಟರ್‌ಗಳಷ್ಟು ದೂರದಲ್ಲಿ ಪತ್ತೆಯಾಗಿವೆ. ಸಮುದ್ರದ ತಳದಿಂದ ಟೈಟಾನ್ ಮತ್ತು ಮಾನವನ ಅವಶೇಷಗಳು ಹಾಗೂ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಫೋಟದ ಬಗ್ಗೆ ಕೋಸ್ಟ್ ಗಾರ್ಡ್ ಮೆರೈನ್ ಬೋರ್ಡ್ ಆಫ್ ಇನ್ವೆಸ್ಟಿಗೇಶನ್ ಅನ್ನು ಕರೆಯಲಾಗಿದೆ. ಅದು ಈ ಟೈಟಾನ್ ಸ್ಫೋಟಗೊಂಡಿರುವುದರ ಬಗ್ಗೆ ಉನ್ನತಮಟ್ಟದ ತನಿಖೆ ಆರಂಭಿಸುತ್ತದೆ ಎಂದು ಅಧಿಕಾರಿ ಹೇಳಿದರು.
ಇನ್ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ:ಸಾಕ್ಷ್ಯಾಧಾರಗಳು ಈ ದುರಂತದ ಕಾರಣದ ಬಗ್ಗೆ ವಿಮರ್ಶಾತ್ಮಕ ಒಳನೋಟಗಳೊಂದಿಗೆ ಹಲವಾರು ಅಂತಾರಾಷ್ಟ್ರೀಯ ನ್ಯಾಯವ್ಯಾಪ್ತಿಗಳಿಂದ ತನಿಖಾಧಿಕಾರಿಗಳನ್ನು ಒದಗಿಸುತ್ತದೆ. ಟೈಟಾನ್‌ನ ದುರಂತಕ್ಕೆ ಕಾರಣವಾದ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಂತಹ ದುರಂತ ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಇನ್ನೂ ಗಣನೀಯ ಪ್ರಮಾಣದ ಕೆಲಸವನ್ನು ಮಾಡಬೇಕಾಗಿದೆ ಎಂದರು.