ಕರ್ನಾಟಕ

karnataka

ETV Bharat / international

'ಒಂಬತ್ತು ಪತ್ನಿಯರ ಆಸೆ ಪೂರೈಸಲು ಬ್ರೆಜಿಲ್​ ಮಾಡೆಲ್​ನಿಂದ ಟೈಮ್​​ ಟೇಬಲ್​' - Time table from Brazil model

ಒಂದು ಮದುವೆಯಾಗಿ ಸಂಬಾಳಿಸುವುದೇ ಅನೇಕರಿಗೆ ದುಸ್ತರವಾಗಿರಬೇಕಾದರೆ, ಬ್ರೆಜಿಲ್​ ಮಾಡೆಲ್​ವೊಬ್ಬ ಒಂಬತ್ತು ಮಹಿಳೆಯರನ್ನು ಮದುವೆಯಾಗಿದ್ದಾನೆ. ಅವರ ಆಸೆ, ಆಕಾಂಕ್ಷೆಗಳನ್ನು ಪೂರೈಸಲು ವೇಳಾಪಟ್ಟಿಯನ್ನೇ ಸಿದ್ಧಪಡಿಸಿದ್ದಾನೆ.

Time table from Brazil model to satisfy nine wives
ಪತ್ನಿಯರೊಂದಿಗೆ ಬ್ರೆಜಿಲ್​ ಮಾಡೆಲ್ ಆರ್ಥರ್​ ಒ ಉರ್ಸೊ

By

Published : Apr 29, 2022, 3:30 PM IST

Updated : Apr 29, 2022, 3:52 PM IST

ವಾಷಿಂಗ್ಟನ್ :ಮಕ್ಕಳು ವಿದ್ಯಾಭ್ಯಾಸಕ್ಕಾಗಿ ವೇಳಾಪಟ್ಟಿಯನ್ನು ರಚಿಸಿಕೊಂಡಿರುತ್ತಾರೆ. ಕಚೇರಿ ಸಿಬ್ಬಂದಿಗೆ ಕೆಲಸದ ಅವಧಿಯನ್ನು ಶಿಫ್ಟ್​ ಮಾದರಿಯಲ್ಲಿ ರೂಪಿಸಲಾಗಿರುತ್ತದೆ. ಆದರೆ, ಇಲ್ಲೊಬ್ಬ ತನ್ನ 9 ಪತ್ನಿಯರ ಜೊತೆಗೆ ಸಮಯ ಕಳೆಯಲು​ ಟೈಮ್​ಟೇಬಲ್' ರೆಡಿ ಮಾಡಿಕೊಂಡು ಸುದ್ದಿಯಾಗಿದ್ದಾನೆ.

ಬ್ರೆಜಿಲ್​ನ ಮಾಡೆಲ್​ ಆರ್ಥರ್​ ಒ ಉರ್ಸೊ ಎಂಬಾತನೇ ಈ 'ವಿಶೇಷ ವೇಳಾಪಟ್ಟಿ'ಯ ಕರ್ತೃ. ಮಾಡೆಲ್​ ಆಗಿರುವ ಆರ್ಥರ್​ 9 ಮಹಿಳೆಯರನ್ನು ವಿವಾಹವಾಗಿದ್ದಾನಂತೆ. ತನ್ನ ಇಷ್ಟೂ ಸಂಗಾತಿಗಳೊಂದಿಗೆ ಸುಖಮಯ ದಾಂಪತ್ಯ ಮುಂದುವರಿಸಲು ವಿಭಿನ್ನವಾಗಿ ಯೋಚಿಸಿದ್ದಾನೆ. ಅಲ್ಲದೇ ತನ್ನ ಸಂಗಾತಿಗಳ ಆಸೆಯನ್ನು ಪೂರೈಸಲು ಇನ್ನಿಲ್ಲದಂತೆ ಹೆಣಗಾಡುತ್ತಿದ್ದನಂತೆ. ಈ ವೇಳೆ ಹೊಳೆದಿದ್ದೇ 'ವೇಳಾಪಟ್ಟಿ'ಯ ಐಡಿಯಾ.

ಪತ್ನಿಯರೊಂದಿಗೆ ಬ್ರೆಜಿಲ್​ ಮಾಡೆಲ್ ಆರ್ಥರ್​ ಒ ಉರ್ಸೊ

ಆರ್ಥರ್ ಮೊದಮೊದಲು ತನ್ನೆಲ್ಲಾ ಸಂಗಾತಿಗಳನ್ನು ಸಮಾನವಾಗಿ ತೃಪ್ತಿಪಡಿಸಲು ಹೆಣಗಾಡುತ್ತಿದ್ದನಂತೆ. ಇದರಿಂದಾಗಿ ರೊಟೇಷನ್​ ಮಾದರಿಯಲ್ಲಿ ಪ್ರತಿಯೊಬ್ಬ ಹೆಂಡತಿಯ ವೈಯಕ್ತಿಕ ಅಗತ್ಯತೆಗಳನ್ನು ಪೂರೈಸಲು ಮುಂದಾದ. ನನ್ನ ಪತ್ನಿಯರು ನನ್ನ ಆಸಕ್ತಿಯನ್ನು ಪೂರೈಸಲು ಏನು ಬೇಕಾದರೂ ಮಾಡುತ್ತಾರೆ ಎಂದು ಆರ್ಥರ್​ ಹೇಳಿಕೊಂಡಿದ್ದಾನೆ.

ಪತ್ನಿಯರೊಂದಿಗೆ ಬ್ರೆಜಿಲ್​ ಮಾಡೆಲ್ ಆರ್ಥರ್​ ಒ ಉರ್ಸೊ

ಟೈಮ್​ಟೇಬಲ್​ನಿಂದ ಒತ್ತಡ: ಬಳಿಕ ಆರ್ಥರ್​ ಈ ವೇಳಾಪಟ್ಟಿಯಿಂದ ಸಂತುಷ್ಟನಾಗಲಿಲ್ಲ. ರಚನಾತ್ಮಕ ಮತ್ತು ಒತ್ತಡದ ಕಾರಣಕ್ಕಾಗಿ ಇದನ್ನು ಪಾಲಿಸಲಾಗುತ್ತಿದೆ ಎಂದೆನಿಸಿ, ಈ ಪದ್ಧತಿಯನ್ನು ಕೈಬಿಟ್ಟನಂತೆ. ವೇಳಾಪಟ್ಟಿಯನ್ನು ಅನುಸರಿಸುವುದು ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡಿತು. ಕೆಲವೊಮ್ಮೆ ನಾನು ವೇಳಾಪಟ್ಟಿಯ ಕಾರಣಕ್ಕಾಗಿ ತನಗೆ ಇಷ್ಟವಿಲ್ಲದಿದ್ದರೂ ತನ್ನ ಸಂಗಾತಿಯ ಜೊತೆಗೆ ಲೈಂಗಿಕತೆಯಲ್ಲಿ ತೊಡಗಬೇಕಾಯಿತು. ಇದರಿಂದ ತನಗೆ ಸಂತೋಷ ಉಂಟಾಗುತ್ತಿರಲಿಲ್ಲ. ಒಬ್ಬಾಕೆಯ ಜೊತೆಗಿದ್ದಾಗ ಇನ್ನೊಬ್ಬಳ ಬಗ್ಗೆ ಯೋಚಿಸಬೇಕಾಗಿತ್ತು ಎಂದು ಆರ್ಥರ್​ ಹೇಳಿಕೊಂಡಿದ್ದಾನೆ.

ಪತ್ನಿಯರೊಂದಿಗೆ ಬ್ರೆಜಿಲ್​ ಮಾಡೆಲ್ ಆರ್ಥರ್​ ಒ ಉರ್ಸೊ

ಬಹಳಷ್ಟು ಸವಾಲುಗಳನ್ನು ಎದುರಿಸಿದ ನಂತರ ಆರ್ಥರ್ ಸೆಕ್ಸ್ ರೋಟೇಷನ್​ ಪದ್ಧತಿಯನ್ನು ತ್ಯಜಿಸಲು ನಿರ್ಧರಿಸಿದನಂತೆ. ಇದು ಸ್ವಾಭಾವಿಕವಾಗಿ ನಡೆಯಬೇಕಾದ ಕ್ರಿಯೆಯಾದ ಕಾರಣ ಟೈಮ್​ಟೇಬಲ್​ ಅನ್ನು ಕೈಬಿಟ್ಟೆ ಎಂದಿದ್ದಾನೆ. ಆರ್ಥರ್, ಲುವಾನಾ ಕಝಕಿ ಎಂಬಾಕೆಯನ್ನು ಮೊದಲು ಮದುವೆಯಾಗಿದ್ದ.

ಕಳೆದ ವರ್ಷವಷ್ಟೇ 8 ಮಹಿಳೆಯರೊಂದಿಗೆ 'ಮುಕ್ತ ಪ್ರೀತಿಯನ್ನು ಆಚರಿಸಲು' ಮತ್ತು ಏಕಪತ್ನಿತ್ವದ ವಿರುದ್ಧ ಪ್ರತಿಭಟನೆಯ ರೂಪದಲ್ಲಿ ಈ ಹಾದಿಯನ್ನು ಕಂಡುಕೊಂಡಿದ್ದಾನಂತೆ. 9 ಸಂಗಾತಿಗಳಲ್ಲಿ ಒಬ್ಬಾಕೆ ಆರ್ಥರ್​ನನ್ನು ಪ್ರತ್ಯೇಕವಾಗಿ ಹೊಂದಲು ಬಯಸಿದ್ದು, ಆಕೆ ವಿಚ್ಚೇದನವನ್ನು ನೀಡಲು ಮುಂದಾಗಿದ್ದಾಳೆ ಎಂದು ಆರ್ಥರ್​ ತಿಳಿಸಿದ್ದಾನೆ.

ಇದನ್ನೂನ ಓದಿ: 9 ಪತ್ನಿಯರ ಮುದ್ದಿನ ಗಂಡ ಈ ಬ್ರೆಜಿಲ್​ ಮಾಡೆಲ್!! 10ನೇದವಳನ್ನು ವರಿಸುವ ಮುನ್ನ ಬಂದ್ಲು 'ಆಗಾಥಾ'

Last Updated : Apr 29, 2022, 3:52 PM IST

ABOUT THE AUTHOR

...view details