ಜಗತ್ತಿಗೆ ಜ್ಞಾನದ ಬೆಳಕನ್ನು ಹಂಚಿದವನು ಬುದ್ಧ. ಬುದ್ಧನ ಜೀವನ ಬೋಧನೆಯನ್ನು ಇಂದಿಗೂ ಏಷ್ಯಾದದಲ್ಲಿ ಅನೇಕ ರಾಷ್ಟ್ರಗಳಲ್ಲಿ ಪಾಲನೆ ಮಾಡಲಾಗುತ್ತಿದೆ. ಅದರಲ್ಲಿ ಒಂದು ಟಿಬೆಟ್. ಬೌದ್ಧ ಧರ್ಮದ ತಳಹದಿ ಮೇಲೆ ರೂಪುಗೊಂಡಿರುವ ರಾಷ್ಟ್ರದಲ್ಲಿ ಬುದ್ಧನ ಬಳಿಕ ಮತ್ತೊಬ್ಬ ವ್ಯಕ್ತಿ ಅಷ್ಟೇ ಪರಿಣಾಮ ಬೀರಿದ್ದಾನೆ. ಆತನೆ ಪದ್ಮ ಸಂಭವ. ಭೂತನ್ ಲೈವ್ ಪ್ರಕಾರ, ಈತ ಟಿಬೆಟಿಯನ್ ಬುದ್ದಿಸಂನ ಎರಡನೇ ಬುದ್ಧ.
ಪದ್ಮ ಸಂಭವ ಕೂಡ ಬುದ್ಧನಂತೆಯೇ ಜೀವನದ ಸಹಾನುಭೂತಿ, ಬುದ್ಧಿವಂತಿಕೆ ಮತ್ತು ಜ್ಞಾನೋದಯದ ಬಗ್ಗೆ ಅಮೂಲ್ಯವಾದ ಪಾಠಗಳನ್ನು ನೀಡಿದ್ದಾನೆ ಎಂದು ಭೂತನ್ ಲೈವ್ ವರದಿ ಮಾಡಿದೆ. ಈತನನ್ನು ಗುರು ರಿಂಪೋಚೆ ಎಂದು ಕರೆಯಲಾಗುತ್ತದೆ. ಈತನ ಜೀವನ ಕಥೆಗಳನ್ನು ಟರ್ಮಾ ಎಂದು ಹೆಸರಿಸಲಾಗಿದೆ. ಈ ಕಥೆಗಳಲ್ಲಿ ಜ್ಞಾನದ ಗುಪ್ತ ನಿಧಿಗಳಾಗಿದ್ದು, ಬುದ್ಧಿವಂತಿಕೆಯಿಂದ ಕೂಡಿದೆ. ಇವುಗಳನ್ನು ಉದ್ದೇಶಪೂರ್ವಕವಾಗಿ ಮರೆ ಮಾಚಲಾಗಿದೆ. ಸರಿಯಾದ ಕರ್ಮ ಸಂಪರ್ಕ ಹೊಂದಿರುವವರು ಇದನ್ನು ಕಂಡು ಹಿಡಿಯಬಹುದು ಎನ್ನಲಾಗಿದೆ.
ಪದ್ಮ ಸಂಭವ ಜೀವನ ಕುರಿತು ಅನೇಕ ಪುರಾಣ ಕತೆಗಳಿಗೆ. ಮಹಾ ಪರಿನಿರ್ವಾಣವಾದ ಏಂಟು ವರ್ಷಗಳ ಬಳಿಕ ಈತ ಕಮಲದ ಹೂವಿನಿಂದ ಜನಿಸಿದ ಮತ್ತು ಚಿಕ್ಕಂದಿನಲ್ಲೇ ಅಸಾಧಾರಣ ಆಧ್ಯಾತ್ಮಿಕತೆ ಹೊಂದಿದ್ದ. ಯುವಕನಾದಾಗ ಬೌದ್ಧ ಸನ್ಯಾಸಿ ದೀಕ್ಷೆ ಪಡೆದ. ಬಲು ಬೇಗ ಈತ ಆಧ್ಯಾತ್ಮಿಕ ಸಾಧನೆಗಳನ್ನು ಪಡೆದು, ಖ್ಯಾತಿ ಪಡೆದರು ಎಂದು ವರದಿ ಮಾಡಲಾಗಿದೆ.
ಟಿಬೆಟಿಯನ್ ರಾಜ ಟ್ರಿಸಾಂಗ್ ಡೆಟ್ಸೆನ್ ಬೌದ್ಧಧರ್ಮ ಸ್ಥಾಪಿಸಲು ಈತನನ್ನು ಟಿಬೆಟಿಗೆ ಆಹ್ವಾನಿಸಿದಾಗ ಈತನ ಜೀವನ ಮಹತ್ವದ ತಿರುವು ಪಡೆಯಿತು. ಈತ ಟಿಬಿಟಿಯನ್ಬೌದ್ಧ ಧರ್ಮದ ಮೇಲೆ ಆಳವಾದ ಪ್ರಭಾವ ಬೀರಿದ. ಜೊತೆಗೆ ಆತನ ಜೀವನ ಕಥೆಗಳು, ಬೋಧನೆಗಳು, ಆಧ್ಯಾತ್ಮಿಕತೆ ಅನುಸರಿಸುವವರಿಗೆ ಸ್ಫೂರ್ತಿ ಜೊತೆಗೆ ಮಾರ್ಗದರ್ಶನ ನೀಡಿದವು.