ಕರ್ನಾಟಕ

karnataka

ETV Bharat / international

ಟಿಬೆಟ್​ ಸಂಘರ್ಷ: ಅಮೆರಿಕದ ಇಬ್ಬರು ಪ್ರಜೆಗಳಿಗೆ ನಿರ್ಬಂಧ ಹೇರಿದ ಚೀನಾ - ETV Bharath Kannada news

ಟಿಬೆಟಿಯನ್ ವಿಚಾರ ಸಂಪೂರ್ಣವಾಗಿ ಚೀನಾದ ಆಂತರಿಕ ವ್ಯವಹಾರವಾಗಿದೆ. ಅಮೆರಿಕಕ್ಕೆ ಮಧ್ಯಪ್ರವೇಶಿಸಲು ಯಾವುದೇ ಹಕ್ಕಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ.

Tibet issue
ಟಿಬೆಟ್​ ಸಂಘರ್ಷ

By

Published : Dec 24, 2022, 9:11 AM IST

ಬೀಜಿಂಗ್:ಟಿಬೆಟ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವಾಷಿಂಗ್ಟನ್ ತೆಗೆದುಕೊಂಡ ಕ್ರಮಕ್ಕೆ ಪ್ರತೀಕಾರವಾಗಿ ಚೀನಾ ಇಬ್ಬರು ಅಮೆರಿಕನ್ ಪ್ರಜೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.

ಅಮೆರಿಕಾ ಮತ್ತು ಚೀನಾ ನಡುವೆ ಟಿಬೆಟ್‌ಯನ್​ ಅಲ್ಪಸಂಖ್ಯಾತ ಸಮುದಾಯಗಳನ್ನು ನಿರಂತರವಾದ ನಿಲುವಿನ ಸಂಘರ್ಷ ಉಂಟಾಗುತ್ತದೆ. ಅಂತಾರಾಷ್ಟ್ರೀಯ ಸಂಬಂಧಗಳ ಮೂಲ ನಿಯಮಗಳ ಉಲ್ಲಂಘನೆ, ಟಿಬೆಟ್ ಮತ್ತು ಇತರ ಚೀನಾ - ಸಂಬಂಧಿತ ವಿಷಯಗಳಲ್ಲಿ ಅತಿಯಾಗಿ ವರ್ತಿಸಿದ್ದಾರೆ ಎಂಬ ಕಾರಣಕ್ಕೆ ಅಮೆರಿಕಾದ ಇಬ್ಬರು ಪ್ರಜೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿಯ ಚೀನಾ ನೀತಿ ಸಲಹೆಗಾರ ಮೈಲ್ಸ್ ಯು ಮೌಚುನ್ ಮತ್ತು ಚೀನಾದ ಕಾಂಗ್ರೆಷನಲ್-ಎಕ್ಸಿಕ್ಯುಟಿವ್ ಕಮಿಷನ್‌ನ ಪ್ರಸ್ತುತ ಡೆಪ್ಯುಟಿ ಸ್ಟಾಫ್ ಡೈರೆಕ್ಟರ್ ಟಾಡ್ ಸ್ಟೈನ್ ಅವರು ಹೇಳಿಕೆ ವಿರುದ್ಧ ಚೀನಾ ಪರಿಣಾಮಕಾರಿಯಾದ ಪ್ರತಿಕ್ರಮಗಳನ್ನು ತೆಗೆದುಕೊಂಡಿದೆ.

ಈ ವೇಳೆ ಟಿಬೆಟಿಯನ್ ವಿಚಾರ ಸಂಪೂರ್ಣವಾಗಿ ಚೀನಾದ ಆಂತರಿಕ ವ್ಯವಹಾರವಾಗಿದೆ. ಅಮೆರಿಕಕ್ಕೆ ಮಧ್ಯಪ್ರವೇಶಿಸಲು ಯಾವುದೇ ಹಕ್ಕಿಲ್ಲ. ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ಪ್ರಬಲ ಕ್ರಮದೊಂದಿಗೆ ಎದುರಿಸುತ್ತೇವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ.

ವು ಯಿಂಗ್ಜಿ (ವೂ) ಮತ್ತು ಜಾಂಗ್ ಹಾಂಗ್ಬೋ (ಜಾಂಗ್) ಅವರನ್ನು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಕ್ಕಾಗಿ ಅಮೆರಿಕ ನಿರ್ಬಂಧಿಸಿತ್ತು. ಚೀನಾದ ಟಿಬೆಟ್‌ನ ಆಕ್ರಮಣವನ್ನು ಶಾಂತಿಯುತವಾಗಿ ಪರಿಹರಿಸಲು ಚೀನಾ ಸರ್ಕಾರ ಮತ್ತು ದಲೈ ಲಾಮಾ ಅವರ ರಾಯಭಾರಿಗಳ ನಡುವಿನ ಮಾತುಕತೆಗಳನ್ನು ಪುನರಾರಂಭಿಸುವ ಉದ್ದೇಶದಿಂದ ಅಮೆರಿಕ ಸೆನೆಟ್ ಮಂಗಳವಾರ ಟಿಬೆಟ್-ಚೀನಾ ಸಂಘರ್ಷ ಪರಿಹಾರ ಕಾಯಿದೆಯನ್ನು ಮುಂದಿಟ್ಟಿತು.

ಕಾಯ್ದೆ ಮೂಲಕ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾಕ್ಕೆ ಕಳಿಸುವ ಸಂದೇಶವೇನೆಂದರೆ, ನಾವು ಟಿಬೆಟ್‌ನ ಸ್ಥಿತಿಯ ಬಗ್ಗೆ ಅರ್ಥಪೂರ್ಣ ಮಾತುಕತೆಗಳನ್ನು ನಿರೀಕ್ಷಿಸುತ್ತೇವೆ. ಪ್ರಸ್ತುತ ಚೀನೀ ಸರ್ಕಾರದ ಕ್ರಮಗಳನ್ನು ವಿರೋಧಿಸುತ್ತೇವೆ ಎಂದು ಯುಎಸ್ ಸೆನೆಟರ್ ಜೆಫ್ ಮರ್ಕ್ಲಿ ಹೇಳಿದ್ದಾರೆ.

ಟಿಬೆಟ್‌ನಲ್ಲಿರುವ ಟಿಬೆಟಿಯನ್ನರಿಗೆ ಅವರ ಮೂಲಭೂತ ಹಕ್ಕಿಗೆ ಸಮಸ್ಯೆಯಾಗುತ್ತಿದೆ. ಟಿಬೆಟಿಯನ್ನರು ಕಮ್ಯುನಿಸ್ಟ್ ಪಕ್ಷದ ನಿರಂಕುಶಾಧಿಕಾರದ ನಿಯಂತ್ರಣದಲ್ಲಿ ಶಕ್ತಿಹೀನರು, ಧ್ವನಿರಹಿತರು ಮತ್ತು ಅಸಹಾಯಕರಾಗಿದ್ದಾರೆ. ಟಿಬೆಟ್​ನ್ನು ಚೀನಾ ಅಕ್ರಮವಾಗಿ ವಶಪಡಿಸಿಕೊಂಡ ನಂತರ, ಟಿಬೆಟಿಯನ್ ಜನರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ:ಭಾರತದ ಭದ್ರತಾ ಮಂಡಳಿ ಸದಸ್ಯತ್ವ ಮುಕ್ತಾಯ: 2 ವರ್ಷಗಳಲ್ಲಿ ಶಾಂತಿ, ಭದ್ರತೆ, ಸಮೃದ್ಧಿ ಪರವಾಗಿ ನಿಂತಿದ್ದ ಇಂಡಿಯಾ


ABOUT THE AUTHOR

...view details