ಹ್ಯಾಂಬರ್ಗ್(ಜರ್ಮನಿ):ಇಲ್ಲಿನ ವಿಮಾನ ನಿಲ್ದಾಣದೊಳಗೆ ಕಾರು ನುಗ್ಗಿಸಿ ವಿಮಾನಗಳ ಸಂಚಾರ ಚಟುವಟಿಕೆಗಳಿಗೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಪೊಲೀಸರು ಕೊನೆಗೂ ಸೆರೆ ಹಿಡಿದಿದ್ದಾರೆ. ಇದರಿಂದಾಗಿ 18 ಗಂಟೆಗಳ ಆತಂಕ ನಿವಾರಣೆಯಾಗಿದೆ. ಬಂಧನದ ವೇಳೆ ಆರೋಪಿಯಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ. ಆರೋಪಿಯೊಂದಿಗಿದ್ದ ಮಗಳು ಕೂಡ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ತಬ್ಧಗೊಂಡ ಜರ್ಮನಿಯ ಹ್ಯಾಂಬರ್ಗ್ ವಿಮಾನ ನಿಲ್ದಾಣ ನಡೆದಿದ್ದೇನು?: ಭಾನುವಾರ ನಸುಕಿನ ಜಾವ 2 ಗಂಟೆಗೆ 35 ವರ್ಷದ ವ್ಯಕ್ತಿಯೊಬ್ಬ ಕಾರಿನೊಂದಿಗೆ ಹ್ಯಾಂಬರ್ಗ್ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದಾನೆ. ಭದ್ರತಾ ಸಿಬ್ಬಂದಿಯನ್ನು ದಾಟಿ ನಿಲ್ದಾಣದೊಳಗೆ ನುಸುಳಿದ ಆತ, ಗನ್ ತೆಗೆದು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದ. ನಂತರ ಇಂಧನ ತುಂಬಿದ ಬಾಟಲಿಗಳಿಗೆ ಬೆಂಕಿ ಹಚ್ಚಿ ಗಾಳಿಗೆ ಎಸೆದಿದ್ದ. ಈ ಘಟನೆಯಿಂದ ತಕ್ಷಣ ಎಚ್ಚೆತ್ತ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು. ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಕಾರ್ಯಾಚರಣೆಗೆ ಇಳಿದಿದ್ದರು.
ಸ್ತಬ್ಧಗೊಂಡ ಜರ್ಮನಿಯ ಹ್ಯಾಂಬರ್ಗ್ ವಿಮಾನ ನಿಲ್ದಾಣ ಕಾರಿನಲ್ಲಿ ಮಗು ಇರುವುದನ್ನು ಕಂಡ ಪೊಲೀಸರು ಆತನೊಂದಿಗೆ ಸಂಧಾನ ನಡೆಸಿ ರಕ್ಷಿಸಲು ಯತ್ನಿಸಿದರು. ಆದರೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದುಷ್ಕರ್ಮಿ ಈ ರೀತಿ ವರ್ತಿಸಿದ್ದಾನೆ ಎಂದು ವರದಿಯಾಗಿದೆ. ಆತನ ಪತ್ನಿ ಪೊಲೀಸರಿಗೆ ಕರೆ ಮಾಡಿ ಮಗಳನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಿದ್ದರು. ತನ್ನ ತಾಯಿಯೊಂದಿಗೆ ಮಗು ಸ್ಟೇಜ್ ಮೇಲೆ ಇದ್ದಾಗ ಬಕ್ಸ್ಟೆಹೂಡ್‌ನ ಆಗಂತುಕ ಮಗುವನ್ನು ಬಲವಂತವಾಗಿ ಕರೆದೊಯ್ದ ಎಂದು ಜರ್ಮನ್ ಸುದ್ದಿ ಸಂಸ್ಥೆ NDRಗೆ ತಿಳಿಸಿದ್ದಾರೆ. ಇದರಿಂದಾಗಿ ಹ್ಯಾಂಬರ್ಗ್ ವಿಮಾನ ನಿಲ್ದಾಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆರೋಪಿಯ ಜೊತೆ 4 ವರ್ಷದ ಮಗಳೂ ಇದ್ದ ಕಾರಣ ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಂತೆ ಎಚ್ಚರಿಕೆ ವಹಿಸಿದ್ದರು.
ಸ್ತಬ್ಧಗೊಂಡ ಜರ್ಮನಿಯ ಹ್ಯಾಂಬರ್ಗ್ ವಿಮಾನ ನಿಲ್ದಾಣ ಅಧಿಕಾರಿಗಳು ಟರ್ಕಿ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಸೇರಿದಂತೆ ಇತರೆ ವಿಮಾನಗಳನ್ನು ಅಲ್ಲಿಂದ ಸ್ಥಳಾಂತರಿಸಿದರು. ಟರ್ಮಿನಲ್‌ನಿಂದ ಪ್ರಯಾಣಿಕರನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದೆ. ಈ ಹಿಂದೆ 60 ವಿಮಾನಗಳನ್ನು ಎಚ್ಚರಿಕೆಯಿಂದ ರದ್ದುಗೊಳಿಸಲಾಗಿತ್ತು. ಇದರಿಂದ ಸುಮಾರು 3 ಸಾವಿರ ಪ್ರಯಾಣಿಕರು ಪರದಾಡಿದರು. ಸುಮಾರು 18 ಗಂಟೆಗಳ ಬಳಿಕ ವಿಮಾನ ನಿಲ್ದಾಣದ ಕಾರ್ಯ ಮರು ಸ್ಥಾಪಿಸಲಾಗಿದೆ. ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಇಸ್ರೇಲ್ ದಾಳಿಗೆ ಪ್ರತಿ 10 ನಿಮಿಷಕ್ಕೆ ಒಂದು ಮಗು ಸಾವು: ಗಾಜಾ ಆರೋಗ್ಯ ಸಚಿವಾಲಯ