ಕರ್ನಾಟಕ

karnataka

ETV Bharat / international

ಮತ್ತೆ ತಾಂತ್ರಿಕ ಸಮಸ್ಯೆಯಿಂದ ನಾಸಾದ ಆರ್ಟೆಮಿಸ್​​ ಉಡ್ಡಯನ ಮುಂದೂಡಿಕೆ..! - ರಾಕೆಟ್‌ನಲ್ಲಿ ಇಂಧನ ಲೀಕೇಜ್​​​​

ಆಗಸ್ಟ್ 29 ರಂದು ಫ್ಲೋರಿಡಾದಲ್ಲಿರುವ ನಾಸಾ ಕೆನೆಡಿ ಬಾಹ್ಯಾಕಾಶ ಲ್ಯಾಂಚ್‌ಪ್ಯಾಡ್‌ ನಿಂದ ರಾಕೆಟ್​ ಉಡ್ಡಯನಕ್ಕೆ ಯೋಜಿಸಲಾಗಿತ್ತು. ಆದರೆ ರಾಕೆಟ್​ನಲ್ಲಿ ಇಂಧನ ಸೋರಿಕೆ ಪತ್ತೆಯಾಗಿದ್ದರಿಂದ ಉಡ್ಡಯನ ತಡೆ ಹಿಡಿಯಲಾಗಿತ್ತು.

ಮತ್ತೆ ತಾಂತ್ರಿಕ ಸಮಸ್ಯೆಯಿಂದ ನಾಸಾದ ಆರ್ಟೆಮಿಸ್​​ ಉಡ್ಡಯನ ಮುಂದೂಡಿಕೆ
ಮತ್ತೆ ತಾಂತ್ರಿಕ ಸಮಸ್ಯೆಯಿಂದ ನಾಸಾದ ಆರ್ಟೆಮಿಸ್​​ ಉಡ್ಡಯನ ಮುಂದೂಡಿಕೆ

By

Published : Sep 3, 2022, 10:21 PM IST

ವಾಷಿಂಗ್ಟನ್​:50 ವರ್ಷಗಳ ಬಳಿಕ ಚಂದ್ರನಲ್ಲಿಗೆ ತೆರಳಲು ಸಿದ್ಧವಾಗಿದ್ದ ನಾಸಾದ ಬಹು ಮಹತ್ವಾಕಾಂಕ್ಷಿ ಯೋಜನೆ ಆರ್ಟೆಮಿಸ್​​​ ರಾಕೆಟ್​ ಉಡ್ಡಯನಕ್ಕೆ ಮತ್ತೆ ಅಡ್ಡಿ ಉಂಟಾಗಿದೆ.

ಆರ್ಟೆಮಿಸ್‌1 ರಾಕೆಟ್​ ಉಡ್ಡಯನವನ್ನು ಮುಂದೂಡಲಾಗಿದೆ. ರಾಕೆಟ್‌ನಲ್ಲಿ ಇಂಧನ ಲೀಕೇಜ್​​​​ ಅನ್ನು ತಡೆಯಲು ಸಾಧ್ಯವಾಗದೇ ಇರುವುದರಿಂದ ಹಾಗೂ ಸಮಸ್ಯೆಯನ್ನು ಗುರುತಿಸಿ ಸರಿಪಡಿಸುವಲ್ಲಿ ವಿಫಲವಾಗಿರುವುದರಿಂದ ಬಾಹ್ಯಾಕಾಶ ನೌಕೆಯ ಉಡ್ಡಯನವನ್ನು ಮುಂದೂಡಲಾಗಿದೆ ಎಂದು ನಾಸಾ ತಿಳಿಸಿದೆ.

ಮತ್ತೆ ಯಾವಾಗಾ ಆರ್ಟೆಮಿಸ್​ -1 ರಾಕೆಟ್​ ಉಡ್ಡಯನ ಮಾಡಲಾಗುತ್ತದೆ ಎಂಬುದರ ಬಗ್ಗೆ ನಾಸಾ ಯಾವುದೇ ಮಾಹಿತಿ ನೀಡಿಲ್ಲ. ಆಗಸ್ಟ್ 29 ರಂದು ಫ್ಲೋರಿಡಾದಲ್ಲಿರುವ ನಾಸಾ ಕೆನೆಡಿ ಬಾಹ್ಯಾಕಾಶ ಲ್ಯಾಂಚ್‌ಪ್ಯಾಡ್‌ ನಿಂದ ರಾಕೆಟ್​ ಉಡ್ಡಯನಕ್ಕೆ ಯೋಜಿಸಲಾಗಿತ್ತು.

ಆದರೆ ರಾಕೆಟ್​ನಲ್ಲಿ ಇಂಧನ ಸೋರಿಕೆ ಪತ್ತೆಯಾಗಿದ್ದರಿಂದ ಉಡ್ಡಯನವನ್ನು ತಡೆ ಹಿಡಿಯಲಾಗಿತ್ತು. ಸೂಪರ್ ಕೋಲ್ಡ್ ಹೈಡ್ರೋಜನ್, ಆಮ್ಲಜನಕ ಲೀಕ್ ಆಗಿದ್ದರಿಂದ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸುವ ರಾಕೆಟ್​ ಉಡ್ಡಯನ ಮುಂದೂಡಲಾಯಿತು.

ಇದನ್ನು ಓದಿ:ಚಂದಿರನ ಅಂಗಳಕ್ಕೆ ಹಾರಲು NASA ಪ್ರಯತ್ನ: ತಾಂತ್ರಿಕ ಸಮಸ್ಯೆಯಿಂದ ಮೇಲೇಳದ ರಾಕೆಟ್​​

ABOUT THE AUTHOR

...view details