ಕೀವ್(ಉಕ್ರೆನ್):ಮುತ್ತಿಗೆ ಹಾಕಿದ ಮರಿಯುಪೋಲ್ ಬಂದರಿನ ತೆರವಿಗೆ ರಷ್ಯಾ ಮೇಲೆ ಒತ್ತಡ ಹೇರುವಂತೆ ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರನ್ನು ಒತ್ತಾಯಿಸಿದ್ದಾರೆ. ಇದನ್ನು ಸಾಧಿಸಲು ವಿಶ್ವಸಂಸ್ಥೆ ಸಮರ್ಥವಾಗಿದೆ ಎಂದು ಅವರು ಹೇಳಿದ್ದಾರೆ.
ಉಕ್ರೇನ್‌ನ ಈಶಾನ್ಯ ಭಾಗದಲ್ಲಿರುವ ಮರಿಯುಪೋಲ್ ನಗರವನ್ನು ರಷ್ಯಾ ಪಡೆಗಳು ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿವೆ. ಕಳೆದ ಮೂರು ದಿನಗಳಿಂದ ರಷ್ಯಾ ಪಡೆಗಳು ನಗರವನ್ನು ಸುತ್ತುವರೆದಿದ್ದವು. ಗುರುವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಕುರಿತು ಘೋಷಣೆ ಮಾಡಿದ್ದಾರೆ. ಮರಿಯುಪೋಲ್ ನಗರವನ್ನು ವಶಪಸಿಕೊಳ್ಳುವ ಪ್ರಯತ್ನ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರು ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಕೀವ್ಗೆ ಪ್ರಯಾಣಿಸುವ ಮೊದಲು ಮಂಗಳವಾರ ಮಾಸ್ಕೋಗೆ ಭೇಟಿ ನೀಡುವ ಮೂಲಕ, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಕ್ರೆಮ್ಲಿನ್ ಬಲೆಗೆ ಬೀಳುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇತರ ಅನೇಕ ವಿದೇಶಿ ಅಧಿಕಾರಿಗಳು ಮಾಸ್ಕೋಗೆ ಭೇಟಿ ನೀಡಿ ಸಿಕ್ಕಿಬಿದ್ದಿದ್ದಾರೆ. ಮರಿಯುಪೋಲ್ ಸ್ಥಳಾಂತರಿಸುವಿಕೆ ಮೊದಲ ಆದ್ಯತೆಯಾಗ ಬೇಕು ಎಂದು ಕುಲೆಬಾ ಆಗ್ರಹಿಸಿದ್ದಾರೆ.
ಉಕ್ರೇನ್‌ಗೆ ಯುಸ್ ರಾಯಭಾರಿಯಾಗಿ ಬ್ರಿಡ್ಜೆಟ್ ಬ್ರಿಂಕ್:ಸೋವಿಯತ್ ಒಕ್ಕೂಟದಲ್ಲಿ ತನ್ನ ವೃತ್ತಿಜೀವನದ ಬಹುಪಾಲು ಸಮಯವನ್ನು ಕಳೆದಿರುವ ಅನುಭವಿ, ವಿದೇಶಿ ಸೇವಾ ಅಧಿಕಾರಿ ಬ್ರಿಡ್ಜೆಟ್ ಬ್ರಿಂಕ್ ಅವರನ್ನು ಉಕ್ರೇನ್‌ಗೆ ಯುಎಸ್ ರಾಯಭಾರಿಯಾಗಿ ಸೇವೆ ಸಲ್ಲಿಸಲು ನಾಮನಿರ್ದೇಶನ ಮಾಡಿ ಅಧ್ಯಕ್ಷ ಜೋ ಬೈಡನ್ ಸೋಮವಾರ ಘೋಷಿಸಿದ್ದಾರೆ.
ವೃತ್ತಿಜೀವನ: ಪ್ರಸ್ತುತ ಸ್ಲೋವಾಕಿಯಾದಲ್ಲಿ ಯುಎಸ್ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿರುವ ಬ್ರಿಂಕ್ ಅವರು 25 ವರ್ಷಗಳ ವೃತ್ತಿಜೀವನದ ಅನುಭವ ಹೊಂದಿದ್ದಾರೆ. ಉಜ್ಬೇಕಿಸ್ತಾನ್ ಮತ್ತು ಜಾರ್ಜಿಯಾದಲ್ಲಿ ಮತ್ತು ರಾಜ್ಯ ಇಲಾಖೆ ಮತ್ತು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿ ಸೇರಿದಂತೆ ಹಲವಾರು ಉನ್ನತ ಹುದ್ದೆಗಳಲ್ಲಿ ಇವರು ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಅವರು ಈ ಹಿಂದೆ ಸೆರ್ಬಿಯಾ, ಸೈಪ್ರಸ್, ಜಾರ್ಜಿಯಾ ಮತ್ತು ಉಜ್ಬೇಕಿಸ್ತಾನ್ ಮತ್ತು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ನಿಯೋಜನೆಗೊಂಡಿದ್ದರು. ರಷ್ಯನ್ ಭಾಷೆ ಮಾತನಾಡುವ ಬ್ರಿಂಕ್ ಮಿಚಿಗನ್ ಮೂಲದವರು. ವಾಷಿಂಗ್ಟನ್‌ನಲ್ಲಿ ನೆಲೆಸಿರುವಾಗ, ಅವರು ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ರಾಜ್ಯ ಇಲಾಖೆಯಲ್ಲಿ ಯುರೋಪಿಯನ್ ವಿಷಯಗಳ ಬಗ್ಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸ್ಲೋವಾಕಿಯಾಕ್ಕೆ ರಾಯಭಾರಿಯಾಗಿ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬ್ರಿಂಕ್ ಅವರನ್ನು ನಾಮನಿರ್ದೇಶನ ಮಾಡಿದ್ದರು.
ಇದನ್ನೂ ಓದಿ:ಮರಿಯುಪೋಲ್ಗೆ ಮುತ್ತಿಗೆ ಹಾಕಿದ ರಷ್ಯಾ: ಶರಣಾಗಲು ನಿರಾಕರಿಸಿದ ಉಕ್ರೇನ್ ಸೇನೆ