ವಾಶಿಂಗ್ಟನ್: 2024 ರ ಆರ್ಥಿಕ ವರ್ಷಕ್ಕೆ ಅಮೆರಿಕದ ಸಂಸತ್ತು ನಿರ್ಣಯಿಸಿದ್ದ 65,000 ಸಂಖ್ಯೆಯ H-1B ವೀಸಾ ಮಿತಿಗೆ ಸಾಕಾಗುವಷ್ಟು ಸಂಖ್ಯೆಯ ಎಲೆಕ್ಟ್ರಾನಿಕ್ ವೀಸಾ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಲಸೆ ಸೇವೆಗಳನ್ನು ನಿರ್ವಹಿಸುವ ಫೆಡರಲ್ ಏಜೆನ್ಸಿ ತಿಳಿಸಿದೆ. H-1B ವೀಸಾವು ವಲಸೆ ರಹಿತ ವೀಸಾ (non-immigrant visa) ಆಗಿದ್ದು, ಇದು ಅಮೆರಿಕದ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಿಗಾಗಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಭಾರತ ಮತ್ತು ಚೀನಾದಂಥ ದೇಶಗಳ ಪ್ರತಿ ವರ್ಷ ಲಕ್ಷಾಂತರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ. ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಕಚೇರಿ (USCIS) ಸೋಮವಾರ ಹೇಳಿಕೆ ಬಿಡುಗಡೆ ಮಾಡಿದ್ದು, 2024 ರ ಆರ್ಥಿಕ ವರ್ಷದಲ್ಲಿ ಮುಂದುವರಿದ ಪದವಿ ವಿನಾಯಿತಿ ಸೇರಿದಂತೆ H-1B ಸಂಖ್ಯಾತ್ಮಕ ಹಂಚಿಕೆಗಳನ್ನು ತಲುಪಲು ಆರಂಭಿಕ ಅವಧಿಯಲ್ಲಿ ಸಾಕಷ್ಟು ಎಲೆಕ್ಟ್ರಾನಿಕ್ ನೋಂದಣಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದೆ. H-1B ವೀಸಾ ಮಿತಿಯನ್ನು ತಲುಪಲು ಸರಿಯಾಗಿ ಸಲ್ಲಿಸಿದ ನೋಂದಣಿಗಳಿಂದ ಯಾದೃಚ್ಛಿಕವಾಗಿ ಅರ್ಜಿಗಳನ್ನು ಆಯ್ಕೆ ಮಾಡಿದ್ದೇವೆ ಮತ್ತು ಆಯ್ದ ನೋಂದಣಿಗಳೊಂದಿಗೆ ಎಲ್ಲಾ ನಿರೀಕ್ಷಿತ ಅರ್ಜಿದಾರರಿಗೆ H-1B ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ಸೂಚಿಸಿದ್ದೇವೆ ಎಂದು ಅದು ಹೇಳಿದೆ.
ಯುಎಸ್ ಕಾಂಗ್ರೆಸ್ ಈ ವರ್ಷಕ್ಕಾಗಿ 65 ಸಾವಿರ H-1B ವೀಸಾ ನಿಗದಿಪಡಿಸಿದೆ. ಇದರಲ್ಲಿ, 6,800 ವೀಸಾಗಳನ್ನು ಯುಎಸ್-ಚಿಲಿ ಮತ್ತು ಯುಎಸ್ -ಸಿಂಗಪುರ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಅನುಷ್ಠಾನಗೊಳಿಸುವ ಶಾಸನದ ನಿಯಮಗಳ ಅಡಿಯಲ್ಲಿ ಮೀಸಲಿಡಲಾಗಿದೆ. ಈ ಗುಂಪಿನಲ್ಲಿರುವ ಬಳಕೆಯಾಗದ ವೀಸಾಗಳು ಮುಂದಿನ ಆರ್ಥಿಕ ವರ್ಷದ ನಿಯಮಿತ H-1B ಕ್ಯಾಪ್‌ಗಾಗಿ H-1B ಬಳಕೆಗೆ ಲಭ್ಯವಾಗುತ್ತವೆ.