ಅಯುತ್ಥಾಯ(ಬ್ಯಾಂಕಾಕ್): ಉತ್ತರ ಪ್ರದೇಶದ ಪ್ರಸಿದ್ಧ ಅಯೋಧ್ಯಾ ನಗರಿಯಂತೆ ದೂರದ ಥಾಯ್ಲೆಂಡ್‌ನಲ್ಲೂ ಒಂದು ಅಯೋಧ್ಯೆ ಇದೆ. ಆದರೆ ಈ ಸ್ಥಳಕ್ಕೆ ಅಯೋಧ್ಯೆ ಎಂಬ ಹೆಸರಿಲ್ಲ ಅಷ್ಟೇ. ಆದರೆ, ಇಲ್ಲಿನ ರಾಜರು ತಮ್ಮ ಹೆಸರಿನಲ್ಲಿ ರಾಮನ ಬಿರುದನ್ನು ಸಾಮಾನ್ಯವಾಗಿ ಹೊಂದಿದ್ದಾರೆ. ಇದು ಇಲ್ಲಿನ ಪುರಾತನ ಸಂಪ್ರದಾಯ. ಭಾರತದ ಅಯೋಧ್ಯೆ ಮತ್ತು ಥಾಯ್ಲೆಂಡ್‌ನ ಅಯೋಧ್ಯೆಯ ನಡುವಿನ ಸಾಮ್ಯತೆಗಳೇನು? ಥಾಯ್ಲೆಂಡ್ ಅಯೋಧ್ಯೆಯನ್ನು 'ಅಯುತ್ಥಾಯ' ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ರಾಜವಂಶವಿದೆ. ಪ್ರತಿಯೊಬ್ಬ ರಾಜನನ್ನೂ ರಾಮನ ಅವತಾರವೆಂದೇ ಜನರು ಪರಿಗಣಿಸುತ್ತಾರೆ.
ಥಾಯ್ಲೆಂಡ್‌ನಲ್ಲಿ 22 ವರ್ಷಗಳಿಂದ ಬೋಧನೆ ಮಾಡುತ್ತಿರುವ ಡಾ.ಸುರೇಶ್ ಪಾಲ್ ಗಿರಿ ಮಾತನಾಡುತ್ತಾ, "ನಾನು ಥಾಯ್ಲೆಂಡ್‌ನ ಧಾರ್ಮಿಕ ವಿಶ್ವವಿದ್ಯಾಲಯದಲ್ಲಿ ಭೋಧನೆ ಮಾಡುತ್ತೇನೆ. ಇಲ್ಲಿ ಹಿಂದೂ ಧರ್ಮದ ಬೇರುಗಳು ಇರುವುದನ್ನು ಗಮನಿಸಬಹುವುದು. ಕಾಲಾನಂತರದಲ್ಲಿ ಬೌದ್ಧ ಮತ್ತು ಹಿಂದೂ ಧರ್ಮಗಳು ಇಲ್ಲಿ ಬೆರೆತವು'' ಎಂದು ಅವರು ಹೇಳುತ್ತಾರೆ.
"ಭಾರತದ ಅಯೋಧ್ಯೆ ಮತ್ತು ಥಾಯ್ಲೆಂಡ್‌ನ ಅಯೋಧ್ಯೆಯ ನಡುವಿನ ಸಾಮ್ಯತೆ ಏನೆಂದರೆ, ನಮ್ಮ ಪೂರ್ವಜರು, ನಮ್ಮ ಅಸ್ತಿತ್ವ ಮತ್ತು ನಮ್ಮ ಸಂಪ್ರದಾಯಗಳನ್ನು ನಾವು ಮರೆತಿಲ್ಲ. ಇಷ್ಟು ವರ್ಷಗಳ ನಂತರವೂ ಶ್ರೀರಾಮನನ್ನು ನಂಬುತ್ತೇವೆ. ಥಾಯ್ಲೆಂಡ್‌ನಲ್ಲಿ ಶ್ರೀರಾಮನನ್ನು ಆರಾಧಿಸಲಾಗುತ್ತದೆ. ಭಾರತದಂತೆ ಅಯುತ್ಥಾಯ ನಗರದಲ್ಲಿ ರಾಜ ಕೆಲವು ಹಿಂದೂ ದೇವಾಲಯಗಳನ್ನು ನಿರ್ಮಿಸಿದ್ದಾನೆ. ಅಯುತ್ಥಾಯದಿಂದ 35 ಕಿಲೋಮೀಟರ್ ದೂರದಲ್ಲಿ, ವಿಷ್ಣು, ಬ್ರಹ್ಮ ಮತ್ತು ಶಂಕರನ ದೇವಾಲಯವಿದೆ" ಎಂದು ತಿಳಿಸಿದರು.